ರೋಹಿತ್ ಕನಸು ಭಗ್ನಗೊಳಿಸಲಿರುವ 29ರ ಹರೆಯದ ಆಟಗಾರ: ಶೀಘ್ರವೇ ಹೊಸ ಟೆಸ್ಟ್ ನಾಯಕನಾಗಿ ಆಯ್ಕೆ?

ವಿರಾಟ್ ಕೊಹ್ಲಿ ಟಿ-20 ನಾಯಕತ್ವ ತೊರೆದ ನಂತರ ಅವರನ್ನು ಬಿಸಿಸಿಐ ಏಕದಿನ ನಾಯಕತ್ವದಿಂದಲೂ ತೆಗೆದುಹಾಕಿತು. ಸದ್ಯಕ್ಕೆ ವಿರಾಟ್ ಫಾರ್ಮ್ ನೋಡಿದರೆ ಟೆಸ್ಟ್ ನಾಯಕತ್ವದಿಂದಲೂ ಅವರನ್ನು ತೆಗೆದುಹಾಕಬಹುದು.

Written by - Zee Kannada News Desk | Last Updated : Jan 9, 2022, 10:16 AM IST
  • ಈ ಆಟಗಾರ ರೋಹಿತ್ ಶರ್ಮಾರ ಕನಸನ್ನು ಭಗ್ನಗೊಳಿಸಲಿದ್ದಾರೆ
  • ಕೆ.ಎಲ್.ರಾಹುಲ್ ನೂತನ ಟೆಸ್ಟ್ ತಂಡದ ನಾಯಕನಾಗುವ ಸಾಧ್ಯತೆ ಇದೆ
  • ಕನ್ನಡಿಗ ಕೆ.ಎಲ್.ರಾಹುಲ್ ಇತ್ತೀಚೆಗೆ ಅದ್ಭುತ ಫಾರ್ಮ್ ನಲ್ಲಿದ್ದಾರೆ
ರೋಹಿತ್ ಕನಸು ಭಗ್ನಗೊಳಿಸಲಿರುವ 29ರ ಹರೆಯದ ಆಟಗಾರ: ಶೀಘ್ರವೇ ಹೊಸ ಟೆಸ್ಟ್ ನಾಯಕನಾಗಿ ಆಯ್ಕೆ? title=
ಕೆ.ಎಲ್.ರಾಹುಲ್ ಅದ್ಭುತ ಫಾರ್ಮ್ ನಲ್ಲಿದ್ದಾರೆ

ನವದೆಹಲಿ: ವಿರಾಟ್ ಕೊಹ್ಲಿ(Virat Kohli) ಕೆಲ ಸಮಯದಿಂದ ತಮ್ಮ ವೃತ್ತಿಜೀವನದ ಅತ್ಯಂತ ಕಳಪೆ ಫಾರ್ಮ್‌ನಲ್ಲಿದ್ದಾರೆ. ಕಳೆದ 2 ವರ್ಷಗಳಿಂದ ಈ ದಿಗ್ಗಜ ಬ್ಯಾಟ್ಸ್‌ ಮನ್ ಒಂದೇ ಒಂದು ಶತಕ ಸಿಡಿಸಿರಲಿಲ್ಲ. ಟಿ-20 ನಾಯಕತ್ವ ತೊರೆದ ನಂತರ ಅವರನ್ನು ಬಿಸಿಸಿಐ(BCCI) ಏಕದಿನ ನಾಯಕತ್ವದಿಂದಲೂ ತೆಗೆದುಹಾಕಿತು. ಸದ್ಯಕ್ಕೆ ವಿರಾಟ್ ಅವರ ಫಾರ್ಮ್ ನೋಡಿದರೆ ಅವರನ್ನು ಟೆಸ್ಟ್ ನಾಯಕತ್ವದಿಂದಲೂ ತೆಗೆದುಹಾಕುವ ಸಾಧ್ಯತೆಗಳಿದೆ. ವಿರಾಟ್ ಮತ್ತು ಬಿಸಿಸಿಐ ನಡುವೆ ಕೆಲವು ದಿನಗಳಿಂದ ದೊಡ್ಡ ವಿವಾದವೇ ನಡೆಯುತ್ತಿದೆ. ಒಂದು ವೇಳೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಗೆಲ್ಲಲು ಟೀಂ ಇಂಡಿಯಾ ವಿಫಲವಾದರೆ ವಿರಾಟ್‌ನಿಂದ ನಾಯಕತ್ವ ಕಿತ್ತುಕೊಳ್ಳುವುದು ಖಚಿತವೆಂದೇ ಹೇಳಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ರೋಹಿತ್ ಶರ್ಮಾ ಟೆಸ್ಟ್ ತಂಡದ ಕ್ಯಾಪ್ಟನ್ ಕ್ಯಾಪ್ ಧರಿಸಲು ದೊಡ್ಡ ಸ್ಪರ್ಧಿಯಾಗಬಹುದು. ಆದರೆ ರೋಹಿತ್ ಅವರ ಈ ಕನಸನ್ನು ಭಗ್ನಗೊಳಿಸುವ ಆಟಗಾರನೊಬ್ಬನಿದ್ದಾನೆ. ಆತ ಯಾರೆಂದು ತಿಳಿದುಕೊಳ್ಳಿರಿ

ಈ ಆಟಗಾರ ಹೊಸ ಟೆಸ್ಟ್ ನಾಯಕನಾಗಬಹುದು

ಹೌದು, ನಾವು ಟೀಂ ಇಂಡಿಯಾದ ಆರಂಭಿಕ ಆಟಗಾರ ಮತ್ತು ರೋಹಿತ್ ಶರ್ಮಾ(Rohit Sharma) ಅವರ ಜೊತೆಗಾರ ಕೆ.ಎಲ್.ರಾಹುಲ್ ಬಗ್ಗೆ ಮಾತನಾಡುತ್ತಿದ್ದೇವೆ. 29ರ ಹರೆಯದ ಈ ಆಟಗಾರ ಟೀಂ ಇಂಡಿಯಾದ ನೂತನ ಟೆಸ್ಟ್ ನಾಯಕನಾಗಬಹುದು. ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯ 2ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬದಲಿಗೆ ರಾಹುಲ್ ನಾಯಕತ್ವದ ಅವಕಾಶ ಪಡೆದರು. ಈ ಆಟಗಾರ ಅದ್ಭುತ ಫಾರ್ಮ್ ನಲ್ಲಿದ್ದು, ಅವರ ಬ್ಯಾಟಿಂಗ್ ಮೇಲೆ ನಾಯಕತ್ವವು ಯಾವುದೇ ಪರಿಣಾಮ ಬೀರುವುದಿಲ್ಲ. ವಿರಾಟ್ ಅನುಪಸ್ಥಿತಿಯಲ್ಲಿ ಕೆ.ಎಲ್.ರಾಹುಲ್(KL Rahul) ನಾಯಕತ್ವ ವಹಿಸಿದ ರೀತಿ ಎಲ್ಲರ ಮನ ಗೆದ್ದಿದೆ. ಅದೇ ರೀತಿ ರೋಹಿತ್ ಏಕದಿನ ಸರಣಿಯಿಂದ ಹೊರಗುಳಿದ ನಂತರ ಬಿಸಿಸಿಐ ನಾಯಕತ್ವವನ್ನು ರಾಹುಲ್‌ಗೆ ಹಸ್ತಾಂತರಿಸಿತ್ತು. ಟೀಂ ಇಂಡಿಯಾ ಪ್ರತಿಯೊಂದು ಮಾದರಿಯ ನಾಯಕತ್ವದ ಸ್ಥಾನಕ್ಕೆ ಈ ಆಟಗಾರ ಎಲ್ಲರ ಮನಸ್ಸಿನಲ್ಲಿಯೂ ಇದ್ದಾನೆ ಎಂಬುದು ಸದ್ಯ ಸ್ಪಷ್ಟವಾಗಿದೆ.

ಇದನ್ನೂ ಓದಿ: IND vs SA : ರಾಹುಲ್ ನೀಡಿದ್ದ ಈ ಆಟಗಾರ ಕೊಹ್ಲಿಗೆ ಇಷ್ಟವಿಲ್ಲ, ಅದಕ್ಕೆ ಈಗ ಟೆಸ್ಟ್ ಸೀರೀಸ್ ನಿಂದ ಔಟ್!

ರೋಹಿತ್ ನಾಯಕನಾಗುವುದು ಕಷ್ಟ?

ರೋಹಿತ್ ಶರ್ಮಾ(Rohit Sharma) ಭಾರತ ಟೆಸ್ಟ್ ತಂಡದ ನಾಯಕತ್ವದ ಕ್ಯಾಪ್ ತೊಡುವುದು ತುಂಬಾ ಕಷ್ಟವೆಂದೇ ಹೇಳಲಾಗುತ್ತಿದೆ. ಸದ್ಯ ರೋಹಿತ್‌ಗೆ 34 ವರ್ಷ ವಯಸ್ಸಾಗಿರುವುದೇ ಇದಕ್ಕೆ ಮುಖ್ಯ ಕಾರಣ. ಈ ಹೊತ್ತಿಗೆ ಹೆಚ್ಚಿನ ಆಟಗಾರರು ಆಟದಿಂದ ನಿವೃತ್ತರಾಗಲು ಯೋಚಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ರೋಹಿತ್‌ಗೆ ದೀರ್ಘಕಾಲದವರೆಗೆ ನಾಯಕತ್ವವನ್ನು ನೀಡಲು ಆಯ್ಕೆ ಮಂಡಳಿ ಒಪ್ಪುವುದು ವಿರಳ. ಅದೇ ರೀತಿ ಬಿಸಿಸಿಐ ಈಗ ಇತರ ಮಂಡಳಿಗಳಂತೆ ವಿಭಿನ್ನ ಸ್ವರೂಪದ ವಿಭಿನ್ನ ನಾಯಕನನ್ನು ಬಯಸುತ್ತದೆ ಎಂಬುದನ್ನು ಈಗಾಗಲೇ ಸ್ಪಷ್ಟಪಡಿಸಿದೆ. ರೋಹಿತ್ ಈಗಾಗಲೇ ಏಕದಿನ ಮತ್ತು ಟಿ-20 ತಂಡದ ನಾಯಕರಾಗಿರುವ ಕಾರಣ ರೋಹಿತ್ ಟೆಸ್ಟ್ ತಂಡದ ನಾಯಕತ್ವವನ್ನು ಪಡೆಯಲು ಸಾಧ್ಯವಿಲ್ಲವೆಂದು ಹೇಳಲಾಗುತ್ತಿದೆ.

ಆಕ್ರಮಣಕಾರಿ ಆಟದಿಂದ ಗಮನ ಸೆಳೆದ ಕೆ.ಎಲ್.ರಾಹುಲ್

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್(KL Rahul) ಅಕ್ರಮಣಕಾರಿ ಆಟ ಪ್ರದರ್ಶಿಸಿದ್ದಾರೆ. ಮೊದಲ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ರಾಹುಲ್ 123 ರನ್ ಭಾರಿಸುವ ಮೂಲಕ ಭರ್ಜರಿ ಶತಕ ಭಾರಿಸಿದರು. ಬಳಿಕ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 50 ರನ್ ಗಳಿಸಿದ್ದರು. ಅತ್ಯುತ್ತಮ ಫಾರ್ಮ್ ನಲ್ಲಿರುವ ರಾಹುಲ್ ತಮ್ಮ ಬ್ಯಾಟಿಂಗ್ ವೈಭವದ ಮೂಲಕ ಪ್ರತಿಯೊಬ್ಬರ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: Viral video: ಅಂತಾರಾಷ್ಟ್ರೀಯ ಪಂದ್ಯದ ವೇಳೆ ಇಬ್ಬರು ಕ್ರಿಕೆಟಿಗರನ್ನು ನಿಂದಿಸಿದ ಪ್ರೇಕ್ಷಕರು..!

ಸರಣಿ ಸಮಬಲವಾಗಿದೆ

ಸದ್ಯ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 3 ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಈ ಸರಣಿಯ ಮೊದಲ ಟೆಸ್ಟ್‌ ನಲ್ಲಿ ಭಾರತ 113 ರನ್‌ಗಳಿಂದ ದಕ್ಷಿಣ ಆಫ್ರಿಕಾವನ್ನು ಸೋಲಿಸಿತು. ಆದರೆ ಟೀಂ ಇಂಡಿಯಾ(Team India) ಮುಂದಿನ ಟೆಸ್ಟ್‌ ನಲ್ಲಿ ಗೆಲ್ಲಲು ವಿಫಲವಾಯಿತು. 2ನೇ ಟೆಸ್ಟ್‌ ನಲ್ಲಿ ಭಾರತ 7 ವಿಕೆಟ್‌ಗಳಿಂದ ಸೋಲು ಕಂಡಿತು. ಇದೀಗ 3ನೇ ಟೆಸ್ಟ್ ಪಂದ್ಯ ಸರಣಿಯ ನಿರ್ಣಾಯಕ ಪಂದ್ಯವಾಗಿರುವುದರಿಂದ ಉಭಯ ತಂಡಗಳ ಕಣ್ಣು ಗೆಲುವಿನತ್ತ ನೆಟ್ಟಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News