IPL Auction : ಇಲ್ಲಿವರೆಗೆ ಐಪಿಎಲ್ ಇತಿಹಾಸದಲ್ಲಿಯೇ ನಡೆಯದ ಕೆಲ ಘಟನೆ 2024ರ ಮಿನಿ ಹರಾಜಿನಲ್ಲಿ ನಡೆದಿದೆ. ಹೌದು,  ಪ್ಯಾಟ್ ಕಮಿನ್ಸ್‌ ಮತ್ತು ಮಿಚೆಲ್ ಸ್ಟಾರ್ಕ್ ಐಪಿಎಲ್ ಇತಿಹಾಸದಲ್ಲಿಯೇ ದುಬಾರಿ ಬೆಲೆಗೆ ಮಾರಾಟವಾದ ಆಟಗಾರರಾಗಿ ಹೊರ ಹೊಮ್ಮಿದ್ದಾರೆ. ಮೊದಲು ಸನ್‌ರೈಸರ್ಸ್ ಹೈದರಾಬಾದ್ ಪ್ಯಾಟ್ ಕಮಿನ್ಸ್ ಮೇಲೆ ದಾಖಲೆಯ 20.50 ಕೋಟಿ ರೂ. ಬಿಡ್ ಮಾಡಿದೆ. ಇದಾದ ಕೆಲವೇ ಕ್ಷಣಗಳಲ್ಲಿ ಮಿಚೆಲ್ ಸ್ಟಾರ್ಕ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ 24.75 ಕೋಟಿ ರೂ.ಗೆ ಖರೀದಿಸಿತು. ಇಲ್ಲಿಯವರೆಗೆ ಐಪಿಎಲ್ ಹರಾಜಿನಲ್ಲಿ 20 ಕೋಟಿ ರೂಪಾಯಿ ದಾಟಿದ ಕ್ರಿಕೆಟಿಗರು ಇವರೇ. ಇದೀಗ ಈ ದುಬಾರಿ ಬಿಡ್ ಬಗ್ಗೆ ಭಾರತದ ಮಾಜಿ ಬ್ಯಾಟ್ಸ್‌ಮನ್ ಮತ್ತು ಪ್ರಸ್ತುತ ಕಾಮೆಂಟರಿ ಮಾಡುತ್ತಿರುವ ಆಕಾಶ್ ಚೋಪ್ರಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ಮತ್ತು ಬುಮ್ರಾಗೆ ಅನ್ಯಾಯವಾಗಿದೆ ಎನುವುದು ಆಕಾಶ್ ಚೋಪ್ರಾ ಅಸಮಾಧಾನಕ್ಕೆ ಕಾರಣ. 


COMMERCIAL BREAK
SCROLL TO CONTINUE READING

ಕೊಹ್ಲಿ-ಬುಮ್ರಾಗೆ ಅನ್ಯಾಯ : 
ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಐಪಿಎಲ್ ಹರಾಜಿಗೆ ಸಂಬಂಧಿಸಿದ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಪ್ರಸ್ತುತ ಐಪಿಎಲ್‌ನ ನಂಬರ್ 1 ಬೌಲರ್ ಜಸ್ಪ್ರೀತ್ ಬುಮ್ರಾ. ಆದರೆ ಅವರು ಪಡೆಯುತ್ತಿರುವ ಮೊತ್ತ ಕೇವಲ  12 ಕೋಟಿ.  ಇಲ್ಲಿ ಯಾರಿಗೋ ಹೆಚ್ಚು ಹಣ ಸಿಗುತ್ತಿದೆ ಎನ್ನುವುದು ಸಮಸ್ಯೆ ಅಲ್ಲ. ಆದರೆ  ಬುಮ್ರಾಗೆ ಕೇವಲ  12 ಕೋಟಿ ಸಿಗುತ್ತಿರುವುದು ಸರಿಯಲ್ಲ ಎನ್ನುವ ಅಭಿಪ್ರಾಯ ಆಕಾಶ್ ಚೋಪ್ರಾ  ಅವರದ್ದು. ಕೊಹ್ಲಿ ಮತ್ತು ಬುಮ್ರಾ ಅವರನ್ನು ತಮ್ಮ ಫ್ರಾಂಚೈಸಿಗಳಿಂದ ಬಿಡುಗಡೆ ಮಾಡಿದರೆ, ಅವರಿಬ್ಬರ ಮೇಲೆ ಹಣದ ಸುರಿ ಮಳೆಯಾಗುತ್ತದೆ. ಇವರಿಬ್ಬರೂ ಫ್ರಾಂಚೈಸಿಗಳಿಂದ ರಿಲೀಸ್ ಆದರೆ ಇಬ್ಬರೂ ಕನಿಷ್ಠ 35 ಕೋಟಿ ರೂಪಾಯಿಗೆ ಮಾರಟವಾಗುತ್ತಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. 


ಇದನ್ನೂ ಓದಿ : CSKಗೆ ರೋಹಿತ್ ಶರ್ಮಾ..! ಐಪಿಎಲ್ ಹರಾಜಿನ ಬೆನ್ನಲ್ಲೇ ಚೆನ್ನೈ ಫ್ರಾಂಚೈಸಿಯಿಂದ ಬಂತು ಶಾಕಿಂಗ್ ನ್ಯೂಸ್


ಕೊಹ್ಲಿಗೆ 42 ಕೋಟಿ, ಬುಮ್ರಾಗೆ  41 ಕೋಟಿ : 
'ಈ ಹರಾಜನ್ನು ಮಾರುಕಟ್ಟೆ ನಿರ್ಧರಿಸುತ್ತದೆ ಎಂದಾದರೆ ಸ್ಟಾರ್ಕ್ ಅವರ ಮೌಲ್ಯ 25 ಕೋಟಿ ಆಗಿರುವಾಗ, ಅದೇ ಮಾರುಕಟ್ಟೆ ಪ್ರಕಾರ ಕೊಹ್ಲಿ 42 ಕೋಟಿ ಪಡೆಯಬೇಕು, ಬುಮ್ರಾ 41 ಕೋಟಿ ಪಡೆಯಬೇಕು ಎನ್ನುವುದು ಕೂಡಾ ನಿರ್ಧಾರವಾಗಬೇಕು ಎಂದಿದ್ದಾರೆ ಆಕಾಶ್ ಚೋಪ್ರಾ. ರೋಹಿತ್ ಶರ್ಮಾ ಮಹೇಂದ್ರ ಸಿಂಗ್ ಧೋನಿ ಎಲ್ಲರಿಗೂ ಇದೇ ಸೂತ್ರ ಅಳವಡಿಕೆಯಾಗಬೇಕು ಎಂದಿದ್ದಾರೆ. 


ಭಾರತೀಯ ಆಟಗಾರರಿಗೆ  ಹೆಚ್ಚು ಹಣವನ್ನು ಖರ್ಚು ಮಾಡಬೇಕು : 
ಈ ಲೀಗ್ ಭಾರತದಲ್ಲಿ ನಡೆಯುತ್ತಿದೆ. ಇದು ಭಾರತದ ಲೀಗ್. ಭಾರತೀಯರಿಗಾಗಿ ಹಾಗಾಗಿ ಭಾರತೀಯ ಆಟಗಾರರಿಗೆ ಹೆಚ್ಚು ಹಣವನ್ನು ಖರ್ಚು ಮಾಡಬೇಕು.  'ಒಂದು  ಓವರ್ ಸೀಸ್  ಪರ್ಸ್ ಮಾಡಬೇಕು. 200 ಕೋಟಿ ರೂಪಾಯಿ ಪರ್ಸ್ ಎಂದಾದರೆ ಅದರಲ್ಲಿ 125 ಅಥವಾ 150 ಕೋಟಿ ರೂಪಾಯಿ ಭಾರತೀಯ ಆಟಗಾರರದ್ದೇ ಆಗಿರಬೇಕು. ಉಳಿದ ವಿದೇಶಿ ಆಟಗಾರರನ್ನು 70 ಕೋಟಿಯಲ್ಲಿ ಖರೀದಿಸಬಹುದು ಎಂದಿದ್ದಾರೆ. 


ಇದನ್ನೂ ಓದಿ : ಕಳೆದ ವರ್ಷ ಯಾರಿಗೂ ಬೇಡವಾಗಿದ್ದ ಆಟಗಾರನನ್ನು ಈ ವರ್ಷ 14 ಕೋಟಿ ನೀಡಿ ಖರೀದಿಸಿದ CSK… ಇದಪ್ಪಾ ಲಕ್ ಅಂದ್ರೆ!


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
.