ಒಂದು ಶತಕ, 10ಕ್ಕೂ ಹೆಚ್ಚು ದಾಖಲೆಗಳು… ಜೈಪುರದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಶತಕದಾಟಕ್ಕೆ ಈ ಎಲ್ಲಾ ರೆಕಾರ್ಡ್ಸ್ ಸೃಷ್ಟಿ
Virat Kohli 8th IPL century: ಒಂದು ಶತಕದಾಟಕ್ಕೆ ವಿರಾಟ್ ಕೊಹ್ಲಿ ಅನೇಕ ದಾಖಲೆಗಳನ್ನು ಬ್ರೇಕ್ ಮಾಡಿದ್ದಾರೆ. ಅಂದಹಾಗೆ ವಿರಾಟ್ ಅವರ ಈ ಇನ್ನಿಂಗ್ಸ್’ನಲ್ಲಿ 12 ಬೌಂಡರಿ ಮತ್ತು 4 ಸಿಕ್ಸರ್’ಗಳು ಸೇರಿವೆ
Virat Kohli 8th IPL century: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಐಪಿಎಲ್ 2024ರ 19ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.
ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಕೊಹ್ಲಿ ಕೊನೆಯವರೆಗೂ ಬ್ಯಾಟಿಂಗ್ ಮಾಡಿ ಅಜೇಯ 113 ರನ್ ಗಳಿಸಿದ್ದಾರೆ. ಅಂದಹಾಗೆ ಇದು ಐಪಿಎಲ್’ನಲ್ಲಿ ಅವರ ದಾಖಲೆಯ 8ನೇ ಶತಕವಾಗಿದೆ. ಇನ್ನೊಂದೆಡೆ ಇದು ಒಂದು ಅಂತರಾಷ್ಟ್ರೀಯ ಶತಕ ಸೇರಿದಂತೆ T20 ಸ್ವರೂಪದಲ್ಲಿ ಅವರ 9 ನೇ ಶತಕವಾಗಿದೆ. ಜೊತೆಗೆ ಐಪಿಎಲ್ 2024ರಲ್ಲಿ ಮೊದಲ ಶತಕವಾಗಿದೆ.
ಇದನ್ನೂ ಓದಿ: ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ಪ್ರಧಾನಿ ರಿಷಿ ಸುನಕ್ ಸೇರ್ಪಡೆ! ನೆಟ್ ಪ್ರ್ಯಾಕ್ಟೀಸ್ ವಿಡಿಯೋ
ಇನ್ನು ಒಂದು ಶತಕದಾಟಕ್ಕೆ ವಿರಾಟ್ ಕೊಹ್ಲಿ ಅನೇಕ ದಾಖಲೆಗಳನ್ನು ಬ್ರೇಕ್ ಮಾಡಿದ್ದಾರೆ. ಅಂದಹಾಗೆ ವಿರಾಟ್ ಅವರ ಈ ಇನ್ನಿಂಗ್ಸ್’ನಲ್ಲಿ 12 ಬೌಂಡರಿ ಮತ್ತು 4 ಸಿಕ್ಸರ್’ಗಳು ಸೇರಿವೆ.
ನಿಧಾನಗತಿಯ ಶತಕ:
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿ 67 ಎಸೆತಗಳಲ್ಲಿ ಶತಕ ಪೂರೈಸಿದರು. ರಾಜಸ್ಥಾನ ನಾಯಕ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿ ಅವರ ಅಜೇಯ 113 ರನ್’ಗಳ ಆಧಾರದ ಮೇಲೆ ಆರ್ ಸಿ ಬಿ ನಿಗದಿತ 20 ಓವರ್’ಗಳಲ್ಲಿ 183 ರನ್’ಗಳ ಗುರಿಯನ್ನು ನೀಡಿತು. ಕೊಹ್ಲಿ 113 ರನ್ ಗಳಿಸಲು 72 ಎಸೆತಗಳನ್ನು ತೆಗೆದುಕೊಂಡಿದ್ದು, ಈ ಅವಧಿಯಲ್ಲಿ ಅವರ ಸ್ಟ್ರೈಕ್ ರೇಟ್ 150ಕ್ಕಿಂತ ಹೆಚ್ಚಿತ್ತು. ಜೊತೆಗೆ 12 ಬೌಂಡರಿ ಮತ್ತು 4 ಸಿಕ್ಸರ್’ಗಳನ್ನು ಬಾರಿಸಿದ್ದಾರೆ. ಆದರೆ, ಕೊಹ್ಲಿಯ ಈ ಶತಕ ಐಪಿಎಲ್ ಇತಿಹಾಸದಲ್ಲಿ ನಿಧಾನಗತಿಯ ಶತಕವೂ ಆಗಿದೆ. ಮನೀಶ್ ಪಾಂಡೆ ಜೊತೆಗೆ ಈ ದಾಖಲೆಯನ್ನು ಹಂಚಿಕೊಂಡ ವಿರಾಟ್, ಇಬ್ಬರೂ ತಮ್ಮ ಶತಕ ಸಾಧನೆ ಮಾಡಲು 67 ಎಸೆತಗಳನ್ನು ಎದುರಿಸಿದ್ದಾರೆ.
ಐಪಿಎಲ್’ನಲ್ಲಿ 7500 ರನ್:
ವಿರಾಟ್ ಕೊಹ್ಲಿ ಐಪಿಎಲ್’ನಲ್ಲಿ 7500 ರನ್ ಪೂರೈಸಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಈ ಮೈಲಿಗಲ್ಲನ್ನು ತಲುಪಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಕೊಹ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎಂಬುದು ತಿಳಿದಿರುವ ವಿಚಾರ.
ಶಿಖರ್ ಧವನ್ ದಾಖಲೆ ಬ್ರೇಕ್:
ಈ ಪಂದ್ಯದಲ್ಲಿ ಕೊಹ್ಲಿ, ಶಿಖರ್ ಧವನ್ ಅವರ ದಾಖಲೆಯನ್ನೂ ಮುರಿದಿದ್ದಾರೆ. ಈ ಪಂದ್ಯದಲ್ಲಿ 62 ರನ್ ಗಳಿಸುವ ಮೂಲಕ ವಿರಾಟ್ ಕೊಹ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಐಪಿಎಲ್’ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಕೊಹ್ಲಿಗಿಂತ ಮೊದಲು ರಾಜಸ್ಥಾನ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಶಿಖರ್ ಧವನ್ ಹೆಸರಿನಲ್ಲಿತ್ತು. ಅಂದರೆ ಅವರು 679 ರನ್ ಗಳಿಸಿದ್ದರು. ಅದಾದ ಬಳಿಕ ಎಬಿ ಡಿವಿಲಿಯರ್ಸ್ 652 ರನ್ ಗಳಿಸಿದ್ದಾರೆ. ಕೆಎಲ್ ರಾಹುಲ್ 637 ರನ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ಸುರೇಶ್ ರೈನಾ ಮತ್ತು ದಿನೇಶ್ ಕಾರ್ತಿಕ್ 630 ರನ್‌ಗಳೊಂದಿಗೆ ಜಂಟಿಯಾಗಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಫ್ರಾಂಚೈಸಿ ಪರ 8000 ರನ್:
ಈ ಪಂದ್ಯದಲ್ಲಿ 110 ರನ್ ಗಳಿಸುವ ಮೂಲಕ, ಕೊಹ್ಲಿ T20 ಯಲ್ಲಿ ತಂಡದ ಪರ 8000 ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಇದೀಗ ಒಟ್ಟಾರೆ ಅವರ ಸ್ಕೋರ್ 8003 ರನ್ ಆಗಿದೆ. ಇದರಲ್ಲಿ 15 ಚಾಂಪಿಯನ್ಸ್ ಲೀಗ್ T20 ಪಂದ್ಯಗಳಲ್ಲಿ 424 ರನ್ ಗಳಿಸಿದ್ದರೆ, ಉಳಿದ ರನ್ಗಳನ್ನು IPL ನಲ್ಲಿ ಗಳಿಸಿದ್ದಾರೆ.
ವಾರ್ನರ್-ಫಿಂಚ್ ದಾಖಲೆ ಬ್ರೇಕ್:
ವಿರಾಟ್ ಕೊಹ್ಲಿ ಈ ಶತಕದೊಂದಿಗೆ ಆಸ್ಟ್ರೇಲಿಯಾದ ಇಬ್ಬರು ಶ್ರೇಷ್ಠ ಬ್ಯಾಟ್ಸ್‌ಮನ್’ಗಳನ್ನು ಸಹ ಹಿಂದಿಕ್ಕಿದ್ದಾರೆ. 8 ಶತಕ ಬಾರಿಸುವ ಮೂಲಕ ಪುರುಷರ T20 ಕ್ರಿಕೆಟ್’ನಲ್ಲಿ ವಾರ್ನರ್ ಮತ್ತು ಆರೋನ್ ಫಿಂಚ್ ಅತಿ ಹೆಚ್ಚು ಶತಕ ಗಳಿಸಿದ ಬ್ಯಾಟ್ಸ್’ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ ಇದೀಗ 9 ಟಿ20 ಶತಕಗಳನ್ನು ದಾಖಲಿಸುವ ಮೂಲಕ ವಿರಾಟ್ ಆ ಸ್ಥಾನವನ್ನು ಕಸಿದುಕೊಂಡಿದ್ದಾರೆ. ಇನ್ನುಕ್ರಿಸ್ ಗೇಲ್ ಈ ಮಾದರಿಯಲ್ಲಿ ಗರಿಷ್ಠ 22 ಶತಕಗಳನ್ನು ಹೊಂದಿದ್ದು, ಅಗ್ರಸ್ಥಾನದಲ್ಲಿದ್ದಾರೆ.
ಪುರುಷರ T20 ಕ್ರಿಕೆಟ್’ನಲ್ಲಿ ಅತಿ ಹೆಚ್ಚು ಶತಕಗಳು
22 - ಕ್ರಿಸ್ ಗೇಲ್
11 - ಬಾಬರ್ ಆಜಮ್
9 - ವಿರಾಟ್ ಕೊಹ್ಲಿ
8 - ಆರನ್ ಫಿಂಚ್
8 - ಮೈಕೆಲ್ ಕ್ಲಿಂಗರ್
8 - ಡೇವಿಡ್ ವಾರ್ನರ್
ಐಪಿಎಲ್ 2024 ರ ಪವರ್‌ಪ್ಲೇನಲ್ಲಿ ಹೆಚ್ಚಿನ ರನ್
121 - ವಿರಾಟ್ ಕೊಹ್ಲಿ (ಸ್ಟ್ರೈಕ್ ರೇಟ್: 140.69)
105 - ಡೇವಿಡ್ ವಾರ್ನರ್ (ಸ್ಟ್ರೈಕ್ ರೇಟ್: 161.53)
101 - ಟ್ರಾವಿಸ್ ಹೆಡ್ (ಸ್ಟ್ರೈಕ್ ರೇಟ್: 210.41)
101 - ಸುನಿಲ್ ನರೈನ್ (ಸ್ಟ್ರೈಕ್ ರೇಟ್: 224.44)
91 - ಅಭಿಷೇಕ್ ಶರ್ಮಾ (ಸ್ಟ್ರೈಕ್ ರೇಟ್: 245.94)
91 - ರಚಿನ್ ರವೀಂದ್ರ (ಸ್ಟ್ರೈಕ್ ರೇಟ್: 168.51)
ಐಪಿಎಲ್’ನಲ್ಲಿ ಮೊದಲ ವಿಕೆಟ್’ಗೆ ಅತ್ಯಧಿಕ ಜೊತೆಯಾಟ
2220 - ಡೇವಿಡ್ ವಾರ್ನರ್ ಮತ್ತು ಶಿಖರ್ ಧವನ್
1478 - ಗೌತಮ್ ಗಂಭೀರ್ ಮತ್ತು ರಾಬಿನ್ ಉತ್ತಪ್ಪ
1461 - ಶಿಖರ್ ಧವನ್ ಮತ್ತು ಪೃಥ್ವಿ ಶಾ
1432 - ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್
1401 - ಡೇವಿಡ್ ವಾರ್ನರ್ ಮತ್ತು ಜಾನಿ ಬೈರ್‌ಸ್ಟೋವ್
ಐಪಿಎಲ್‌ನಲ್ಲಿ ಅತಿ ಹೆಚ್ಚು 100+ ಪಾರ್ಟನರ್ಶಿಪ್ (ಯಾವುದೇ ವಿಕೆಟ್)
10 - ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್
9 - ವಿರಾಟ್ ಕೊಹ್ಲಿ ಮತ್ತು ಕ್ರಿಸ್ ಗೇಲ್
6 - ಡೇವಿಡ್ ವಾರ್ನರ್ ಮತ್ತು ಶಿಖರ್ ಧವನ್
6 - ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್
ಐಪಿಎಲ್’ನಲ್ಲಿ ಗರಿಷ್ಠ 100+ ಆರಂಭಿಕ ಪಾರ್ಟನರ್ಶಿಪ್
6 - ಡೇವಿಡ್ ವಾರ್ನರ್ ಮತ್ತು ಶಿಖರ್ ಧವನ್
5 - ಡೇವಿಡ್ ವಾರ್ನರ್ ಮತ್ತು ಜಾನಿ ಬೈರ್‌ಸ್ಟೋವ್
5 - ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್
4 - ಮಯಾಂಕ್ ಅಗರ್ವಾಲ್ ಮತ್ತು ಕೆಎಲ್ ರಾಹುಲ್
4 - ರುತುರಾಜ್ ಗಾಯಕ್ವಾಡ್ ಮತ್ತು ಡೆವೊನ್ ಕಾನ್ವೇ
4 - ವಿರಾಟ್ ಕೊಹ್ಲಿ ಮತ್ತು ಕ್ರಿಸ್ ಗೇಲ್
ರಾಜಸ್ಥಾನ vs RCB IPL ಪಂದ್ಯಗಳಲ್ಲಿ 100 ಕ್ಕೂ ಹೆಚ್ಚು ಆರಂಭಿಕ ಸ್ಟ್ಯಾಂಡ್
181* - ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ (RCB), ಮುಂಬೈ, 2021
125 - ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ (RCB), ಜೈಪುರ, 2024
109 - ಗ್ರೇಮ್ ಸ್ಮಿತ್ ಮತ್ತು ಸ್ವಪ್ನಿಲ್ ಅಸ್ನೋಡ್ಕರ್ (RR), ಜೈಪುರ, 2008
ಐಪಿಎಲ್’ನಲ್ಲಿ ಹೆಚ್ಚಿನ 100+ ಪಾಲುದಾರಿಕೆಗಳಲ್ಲಿ ತೊಡಗಿಸಿಕೊಂಡಿರುವ ಬ್ಯಾಟ್ಸ್‌ಮನ್‌ಗಳು (ಯಾವುದೇ ವಿಕೆಟ್)
28 - ವಿರಾಟ್ ಕೊಹ್ಲಿ
26 - ಡೇವಿಡ್ ವಾರ್ನರ್
21 - ಶಿಖರ್ ಧವನ್
20 - ಕ್ರಿಸ್ ಗೇಲ್
19 - ಫಾಫ್ ಡು ಪ್ಲೆಸಿಸ್
17 - ಎಬಿ ಡಿವಿಲಿಯರ್ಸ್
ನಿಧಾನಗತಿಯ ಐಪಿಎಲ್ ಶತಕ
67 ಎಸೆತಗಳು - ಮನೀಶ್ ಪಾಂಡೆ (RCB) vs ಡೆಕ್ಕನ್ ಚಾರ್ಜರ್ಸ್, ಸೆಂಚುರಿಯನ್, 2009
67 ಎಸೆತಗಳು - ವಿರಾಟ್ ಕೊಹ್ಲಿ (ಆರ್‌ಸಿಬಿ) vs ರಾಜಸ್ಥಾನ ರಾಯಲ್ಸ್, ಜೈಪುರ, 2024
66 ಎಸೆತಗಳು - ಸಚಿನ್ ತೆಂಡೂಲ್ಕರ್ (MI) vs ಕೊಚ್ಚಿ ಟಸ್ಕರ್ಸ್ ಕೇರಳ, ಮುಂಬೈ, 2011
66 ಎಸೆತಗಳು - ಡೇವಿಡ್ ವಾರ್ನರ್ (DC) vs KKR, ದೆಹಲಿ, 2010
66 ಎಸೆತಗಳು - ಜೋಸ್ ಬಟ್ಲರ್ (RR) vs ಮುಂಬೈ, ಮುಂಬೈ, 2022
ಇದನ್ನೂ ಓದಿ: ಪ್ರೇಯಸಿಯ ಆತ್ಮಹತ್ಯೆ ನೋವು ಕಾಡುತ್ತಿದ್ದರೂ ಪ್ರಸ್ತುತ IPLನಲ್ಲಿ ಅಬ್ಬರಿಸುತ್ತಿದ್ದಾರೆ ಈ ಸ್ಟಾರ್ ಕ್ರಿಕೆಟಿಗ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ