Abhishek Sharma Girlfriend News: ಐಪಿಎಲ್ 2024 ರ 18 ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಹೈದರಾಬಾದ್ ತಂಡದ ಅಭಿಷೇಕ್ ಶರ್ಮಾ ಅದ್ಭುತ ಪ್ರದರ್ಶನ ನೀಡಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಸನ್ ರೈಸರ್ಸ್ ತಂಡದ ಆರಂಭಿಕ ಅಭಿಷೇಕ್ ಶರ್ಮಾ ತಂಡದ ಗೆಲುವಿಗೆ ನೀಡಿರುವ ಕೊಡುಗೆ ಬಹಳ ಮುಖ್ಯ ಮತ್ತು ಶ್ಲಾಘನೀಯ. ಪವರ್ ಪ್ಲೇನಲ್ಲಿ ಆಡಿದ ಬಿರುಸಿನ ಇನ್ನಿಂಗ್ಸ್’ಗಳು ಹೈದರಾಬಾದ್ ತಂಡಕ್ಕೆ ಗೆಲುವು ಸಾಧಿಸಲು ಸಹಾಯ ಮಾಡಿತ್ತು.
ಆದರೆ ಐಪಿಎಲ್ 2024ರ ಆರಂಭಕ್ಕೂ ಮೊದಲು ಅಭಿಷೇಕ್ ಶರ್ಮಾ ಯಾವ ಪರಿಸ್ಥಿತಿಯನ್ನು ಎದುರಿಸಿದ್ದಾರೆ ಎಂದು ನಿಮಗೆ ತಿಳಿದಿದೆಯೇ? ಈ ಲೇಖನದಲ್ಲಿ ನಾವು ಅವರ ಆ ನೋವಿನ ಬಗ್ಗೆ ಮಾತನಾಡಲಿದ್ದೇವೆ. ಕೆಲವು ತಿಂಗಳ ಹಿಂದೆ, ಅಭಿಷೇಕ್ ಶರ್ಮಾ ಜೀವನದಲ್ಲಿ ಮರೆಯಲಾಗದ ಘಟನೆಯೊಂದು ನಡೆದಿತ್ತು.
ಅಭಿಷೇಕ್ ಶರ್ಮಾ ಮೂಲತಃ ಪಂಜಾಬ್’ನವರು. 2018 ರಿಂದ SRH ತಂಡದಲ್ಲಿದ್ದಾರೆ. ಆದರೆ ಕಳೆದ ಋತುವಿನವರೆಗೂ ಬ್ಯಾಟಿಂಗ್ ಅಥವಾ ಬೌಲಿಂಗ್ ಯಾವುದರಲ್ಲೂ ಹೆಚ್ಚು ಸುದ್ದಿಯಾಗಿರಲಿಲ್ಲ. ಆದರೆ ಐಪಿಎಲ್ 2024 ರ ಆರಂಭದಿಂದಲೂ ಪಂಜಾಬ್ ಯುವಕನ ಪ್ರಾಬಲ್ಯ ಕಂಡುಬಂದಿದೆ.
ಇಲ್ಲಿಯವರೆಗೆ, ನಾಲ್ಕು ಪಂದ್ಯಗಳಲ್ಲಿ ಅವರು 40.25 ರ ಸರಾಸರಿಯಲ್ಲಿ 160 ರನ್ ಮತ್ತು ಸ್ಟ್ರೈಕ್ ರೇಟ್ 200 ಅನ್ನು ಗಳಿಸಿದ್ದಾರೆ. ಈ ಅಂಕಿಅಂಶಗಳು ಅಭಿಷೇಕ್’ಗೆ ತನ್ನ ಮೇಲೆ ಎಷ್ಟು ವಿಶ್ವಾಸವಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ.
ಆದರೆ, ಕೆಲವು ತಿಂಗಳ ಹಿಂದೆ ಅಭಿಷೇಕ್ ಜೀವನದಲ್ಲಿ ನಡೆದ ಘಟನೆ ಆತನನ್ನು ಆಂತರಿಕವಾಗಿ ಕುಗ್ಗಿಸಿತ್ತು. ಅವರ ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡಿದ್ದಲ್ಲದೆ, ಆ ಪ್ರಕರಣದಲ್ಲಿ ಸಿಲುಕಿಕೊಂಡಿದ್ದರು.
ಅಂದಹಾಗೆ ಅಭಿಷೇಕ್ ಅವರ ಗೆಳತಿ, ಗುಜರಾತ್ ಮಾಡೆಲ್ ತಾನಿಯಾ ಸಿಂಗ್ ಫೆಬ್ರವರಿ 19 ರಂದು ಸೂರತ್’ನ ಹೋಟೆಲ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣದಲ್ಲಿ SRH ಆಟಗಾರ ಅಭಿಷೇಕ್ ಶರ್ಮಾ ಹೆಸರು ತಳುಕು ಹಾಕಿಕೊಂಡಿತ್ತು. ಅಷ್ಟೇ ಅಲ್ಲದೆ, ಅವರನ್ನು ಪೊಲೀಸರು ವಿಚಾರಣೆ ಕೂಡ ನಡೆಸಿದ್ದರು.
ತಾನಿಯಾ ಕೊನೆಯದಾಗಿ ಅಭಿಷೇಕ್’ಗೆ ಕರೆ ಮಾಡಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆದರೆ ತನಿಖೆಯ ನಂತರ ಅಭಿಷೇಕ್ ನಿರಪರಾಧಿ ಎಂದು ಸಹ ಸಾಬೀತಾಗಿದೆ. ತಾನಿಯಾ ಮತ್ತು ಅಭಿಷೇಕ್ ಶರ್ಮಾ ಸಂಬಂಧದಲ್ಲಿದ್ದರು ಎಂದು ತಿಳಿದುಬಂದಿದ್ದು, ಆದರೆ ನಂತರ ಅವರು ಬೇರ್ಪಟ್ಟಿದ್ದರು ಎನ್ನಲಾಗಿದೆ. ಈ ಕಾರಣಕ್ಕಾಗಿ ಪೊಲೀಸರು ಆಟಗಾರನನ್ನು ವಿಚಾರಣೆಗೆ ಕರೆದಿದ್ದರು.