ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ಪ್ರಧಾನಿ ರಿಷಿ ಸುನಕ್ ಸೇರ್ಪಡೆ!! ಜೇಮ್ಸ್ ಆಂಡರ್ಸನ್ ಜೊತೆ ನೆಟ್ ಪ್ರ್ಯಾಕ್ಟೀಸ್: ವಿಡಿಯೋ ವೈರಲ್

Rishi Sunak vs Anderson: ಸುನಕ್ ನೆಟ್ ಪ್ರಾಕ್ಟಿಸ್ ಮಾಡಿದ್ದು, ಜೇಮ್ಸ್ ಆಂಡರ್ಸನ್ ಬೌಲಿಂಗ್’ಗೆ ಬ್ಯಾಟ್ ಬೀಸಿದ್ದಾರೆ. ಇದಾದ ಬಳಿಕ ನೇರವಾಗಿ ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗುವ ಆಸೆಯನ್ನು ವ್ಯಕ್ತಪಡಿಸಿದ್ದರು.

Written by - Bhavishya Shetty | Last Updated : Apr 6, 2024, 09:50 PM IST
    • ಬ್ರಿಟನ್ ಪ್ರಧಾನಿ ರಿಷಿ ಸುನಕ್’ಗೆ ಕ್ರೀಡೆಯ ಬಗ್ಗೆ ಸಖತ್ ಕ್ರೇಜ್ ಇದೆ
    • ಇಂಗ್ಲೆಂಡ್‌’ನ ಲೆಜೆಂಡರಿ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಭೇಟಿಯಾದ ರಿಷಿ ಸುನಕ್
    • ಹಲವು ಯುವ ಆಟಗಾರರೊಂದಿಗೂ ಮಾತುಕತೆ ನಡೆಸಿ ಮೋಜು ಮಸ್ತಿ ಮಾಡಿದ್ದಾರೆ
ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ಪ್ರಧಾನಿ ರಿಷಿ ಸುನಕ್ ಸೇರ್ಪಡೆ!! ಜೇಮ್ಸ್ ಆಂಡರ್ಸನ್ ಜೊತೆ ನೆಟ್ ಪ್ರ್ಯಾಕ್ಟೀಸ್: ವಿಡಿಯೋ ವೈರಲ್  title=
Rishi Sunak Cricket Playing Video

Rishi Sunak vs Anderson: ಬ್ರಿಟನ್ ಪ್ರಧಾನಿ ರಿಷಿ ಸುನಕ್’ಗೆ ಕ್ರೀಡೆಯ ಬಗ್ಗೆ ಸಖತ್ ಕ್ರೇಜ್ ಇದೆ. ಕ್ರಿಕೆಟ್‌’ನಿಂದ ಹಿಡಿದು ಫುಟ್‌ಬಾಲ್‌’ವರೆಗೆ ಎಲ್ಲಾ ಕ್ರೀಡೆಯಲ್ಲೂ ಅವರಿಗೆ ಆಸಕ್ತಿ ಇದೆ. ಇತ್ತೀಚೆಗೆ ರಿಷಿ ಸುನಕ್ ಇಂಗ್ಲೆಂಡ್‌’ನ ಲೆಜೆಂಡರಿ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಅವರನ್ನು ಭೇಟಿಯಾಗಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆ್ಯಂಡರ್ಸನ್ ಹೊರತಾಗಿ ಇಂಗ್ಲೆಂಡ್‌’ನ ಹಲವು ಯುವ ಆಟಗಾರರೊಂದಿಗೂ ಮಾತುಕತೆ ನಡೆಸಿ ಮೋಜು ಮಸ್ತಿ ಮಾಡಿದ್ದಾರೆ.

ಇದನ್ನೂ ಓದಿ: ಪ್ರೇಯಸಿಯ ಆತ್ಮಹತ್ಯೆ ನೋವು ಕಾಡುತ್ತಿದ್ದರೂ ಪ್ರಸ್ತುತ IPLನಲ್ಲಿ ಅಬ್ಬರಿಸುತ್ತಿದ್ದಾರೆ ಈ ಸ್ಟಾರ್ ಕ್ರಿಕೆಟಿಗ!

ಸುನಕ್ ನೆಟ್ ಪ್ರಾಕ್ಟಿಸ್ ಮಾಡಿದ್ದು, ಜೇಮ್ಸ್ ಆಂಡರ್ಸನ್ ಬೌಲಿಂಗ್’ಗೆ ಬ್ಯಾಟ್ ಬೀಸಿದ್ದಾರೆ. ಇದಾದ ಬಳಿಕ ನೇರವಾಗಿ ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗುವ ಆಸೆಯನ್ನು ವ್ಯಕ್ತಪಡಿಸಿದ್ದರು. "ನಾನು ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಪಡೆಯಲು ಸಿದ್ಧನಿದ್ದೇನೆ?" ಎಂದು ಕ್ಯಾಪ್ಶನ್ ನೀಡಿರುವ ಸುನಕ್ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯನ್ನು ಟ್ಯಾಗ್ ಮಾಡಿದ್ದಾರೆ. ಮಂಡಳಿಯು ಸಹ ತಮಾಷೆಯ ಉತ್ತರವನ್ನು ನೀಡಿ, "ಬಹುಶಃ ನೀವು ಇನ್ನೂ ಕೆಲವು ನೆಟ್ ಸೆಷನ್‌’ಗಳಲ್ಲಿ ಭಾಗವಹಿಸಬೇಕಾಗಬಹುದು" ಎಂದು ಬರೆದುಕೊಂಡಿದೆ.

 

ಇದನ್ನೂ ಓದಿ: Summer Herbs: ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಲು ಅದ್ಭುತ ಗಿಡಮೂಲಿಕೆಗಳು!

ಅಂದಹಾಗೆ ಸುನಕ್ ಇಂಗ್ಲೆಂಡ್ ಕ್ರಿಕೆಟ್ ಸೌಲಭ್ಯಗಳನ್ನು ನಿರ್ಮಿಸಲು ಮತ್ತು ದೇಶದಲ್ಲಿ ಶಾಲೆಯೊಳಗಿನ ಕ್ರೀಡೆಗಳನ್ನು ಉತ್ತೇಜಿಸಲು £ 35 ಮಿಲಿಯನ್ ಹೂಡಿಕೆಯನ್ನು ಘೋಷಿಸಿದ್ದಾರೆ. 2030ರ ವೇಳೆಗೆ ದೇಶದ 10 ಲಕ್ಷಕ್ಕೂ ಹೆಚ್ಚು ಯುವಕರು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದು ಸುನಕ್ ಅವರ ಗುರಿಯಾಗಿದೆ. ಇದಕ್ಕಾಗಿ 2500 ಹೊಸ ಉಪಕರಣಗಳನ್ನೂ ಶಾಲೆಗಳಿಗೆ ನೀಡಲಾಗುವುದಲ್ಲದೆ, ಇದರಿಂದ ಮುಂದಿನ ಐದು ವರ್ಷಗಳಲ್ಲಿ 9,30,000 ಮಕ್ಕಳು ಕ್ರಿಕೆಟ್ ಆಡಲು ನೆರವಾಗಲಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News