ಏಷ್ಯಾಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಅಜೇಯ ಇನ್ನಿಂಗ್ಸ್ ಆಡುವ ವೇಳೆ ವಿರಾಟ್ ಕೊಹ್ಲಿ ಶತಕ ಬಾರಿಸಿದ್ದರು. ಬರೋಬ್ಬರಿ 33 ತಿಂಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ್ದಾರೆ. ವಿಶೇಷವೆಂದರೆ ವಿರಾಟ್ ಕೊಹ್ಲಿ ಶತಕ ಬಾರಿಸಿದ ಕೂಡಲೇ ಮೊದಲು ಖುಷಿಯಿಂದ ಉಂಗುರಕ್ಕೆ ಮುತ್ತಿಟ್ಟಿದ್ದು, ಈ ಬಗ್ಗೆ ಎಲ್ಲೆಡೆ ಭಾರೀ ಕುತೂಹಲ ಮೂಡಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Asia Cup 2022: ಏಷ್ಯಾಕಪ್ ನೊಂದಿಗೆ ಈ ಆಟಗಾರನ ಟಿ-20 ವೃತ್ತಿಜೀವನವೂ ಅಂತ್ಯ!


ಬಳಿಕ ಈ ಬಗ್ಗೆ ಮಾತನಾಡುವಾಗ ಕಷ್ಟದ ಸಂದರ್ಭಗಳಲ್ಲಿ ಅನುಷ್ಕಾ ಶರ್ಮಾ ನನ್ನ ಜೊತೆಗಿದ್ದರು. ಈ ಶತಕ ಅವರಿಗೆ ಮತ್ತು ಮಗಳು ವಾಮಿಕಾಗೆ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ. ಇನ್ನು ಪತ್ನಿ ಅನುಷ್ಕಾ ಕೂಡ ಪೋಸ್ಟ್ ಶೇರ್ ಮಾಡುವ ಮೂಲಕ ಅವರ ಮೇಲೆ ಪ್ರೀತಿಯ ಸುರಿಮಳೆಗೈದಿದ್ದಾರೆ.


ಅನುಷ್ಕಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ವಿರಾಟ್ ಕೊಹ್ಲಿಯ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇದರೊಂದಿಗೆ ಅವರು ಹೃದಯ ಸ್ಪರ್ಶದ ಕ್ಯಾಪ್ಶನ್ ಸಹ ನೀಡಿದ್ದಾರೆ. ವಿರಾಟ್ ಕೊಹ್ಲಿಯ ಚಿತ್ರಗಳನ್ನು ಹಂಚಿಕೊಂಡ ಅನುಷ್ಕಾ ಶರ್ಮಾ ಹೀಗೆ ಬರೆದಿದ್ದಾರೆ; "ಎಲ್ಲಾ ಸಂದರ್ಭಗಳಲ್ಲೂ ಯಾವಾಗಲೂ ನಿಮ್ಮೊಂದಿಗೆ ಇರುತ್ತೇವೆ" ಎಂದಿದ್ದಾರೆ. ಇದರೊಂದಿಗೆ ವಿರಾಟ್ ಕೊಹ್ಲಿ ಕೂಡ ಅನುಷ್ಕಾ ಪೋಸ್ಟ್‌ಗೆ ಹೃದಯದ ಇಮೋಜಿಯನ್ನು ಕಳುಹಿಸಿ ಪ್ರೀತಿ ತೋರಿಸಿದ್ದಾರೆ.


ವಿರಾಟ್ ಕೊಹ್ಲಿ ಶತಕದ ನಂತರ, ಅಭಿಮಾನಿಗಳು ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ತೀವ್ರವಾಗಿ ಹೊಗಳುತ್ತಿರುವುದು ಕಂಡುಬಂದಿದೆ. ಅನುಷ್ಕಾ ಅವರ ಪೋಸ್ಟ್‌ಗೆ ಸಹ ಉತ್ತಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಸೆಲೆಬ್ರಿಟಿಗಳು ಕೂಡ ವಿರಾಟ್ ಅವರನ್ನು ಹೊಗಳುತ್ತಿರುವುದು ಕಂಡುಬಂದಿದೆ.


ಬಾಲಿವುಡ್ ನಟಿ ಶ್ರದ್ಧಾ ಕಪೂರ್, ಸೋನಾಲಿ ಬೇಂದ್ರೆ, ವರುಣ್ ಧವನ್, ಜೈದೀಪ್ ಅಹ್ಲಾವತ್ ಸೇರಿದಂತೆ ಅನೇಕರು ವಿರಾಟ್ ಸಾಧನೆಗೆ ಶುಭಾಶಯ ಕೋರಿದ್ದಾರೆ. 


ಇದನ್ನೂ ಓದಿ: Amit Mishra ‘1 ವಾರ ಸಗಣಿಯಲ್ಲಿರು’ ಎಂದಿದ್ದ ಪಾಕ್ ನಟಿಗೆ ಅಮಿತ್ ಮಿಶ್ರಾ ತಿರುಗೇಟು!


ಅನುಷ್ಕಾ ತನ್ನ ಮುಂಬರುವ ಚಿತ್ರ ಜೂಲನ್ ಗೋಸ್ವಾಮಿ ಅವರ ಜೀವನಚರಿತ್ರೆಯ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಮೂಲಕ ಅವರು ಬಹಳ ದಿನಗಳ ನಂತರ ಮತ್ತೆ ತೆರೆಗೆ ಬರಲಿದ್ದಾರೆ. ಅನುಷ್ಕಾ ಕೊನೆಯ ಬಾರಿಗೆ 2018 ರಲ್ಲಿ ಜೀರೋ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.