ನವದೆಹಲಿ: 2021ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟಿ20 ಟೂರ್ನಿಯನ್ನು ಭಾರತದಲ್ಲೇ ನಡೆಸಲು ಬಿಸಿಸಿಐ ಸಿದ್ಧತೆ ಆರಂಭಿಸಿದೆ. ಈಗಾಗಲೇ ತಾತ್ಕಾಲಿಕ ವೇಳಾಪಟ್ಟಿಯನ್ನೂ ಬಿಸಿಸಿಐ ಸಿದ್ಧಪಡಿಸಿಕೊಂಡಿದೆ ಎಂದು ಮೂಲಗಳು ತಿಳಿಸಿರುವುದಾಗಿ ಪ್ರತಿಷ್ಠಿತ ಮಾಧ್ಯಮವೊಂದು ವರದಿ ಪ್ರಕಟಿಸಿದೆ.


COMMERCIAL BREAK
SCROLL TO CONTINUE READING

‘ಅಂತಿಮ ನಿರ್ಧಾರ ಐಪಿಎಲ್(IPL)‌ ಆಡಳಿತ ಮಂಡಳಿ ಸಭೆಯಲ್ಲಿ ತೆಗೆದುಕೊಳ್ಳಲಾಗುತ್ತದೆ. ಆದರೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಾರ ಏಪ್ರಿಲ್‌ 11ರಿಂದ ಟೂರ್ನಿ ಆರಂಭಗೊಳ್ಳಲಿದೆ. ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿ ಮಾರ್ಚ್ 28ಕ್ಕೆ ಮುಕ್ತಾಯಗೊಳ್ಳಲಿದ್ದು, ಆ ಬಳಿಕ ಐಪಿಎಲ್‌ ಆರಂಭಕ್ಕೂ ಮುನ್ನ ಆಟಗಾರರಿಗೆ 2 ವಾರಗಳ ವಿಶ್ರಾಂತಿ ಸಿಗಲಿದೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 14ನೇ ಆವೃತ್ತಿಯ ಫೈನಲ್‌ ಪಂದ್ಯ ಜೂನ್‌ 5 ಇಲ್ಲವೇ 6ರಂದು ನಡೆಯಲಿದೆ ಎನ್ನಲಾಗಿದೆ.


ಮನ್ ಕೀ ಬಾತ್ ನಲ್ಲಿ Team India ಆಟಗಾರರಿಗೆ ಶಹಬ್ಬಾಸ್ ಎಂದ ಪ್ರಧಾನಿ, ಮೋದಿ ಮಾತಿಗೆ ಕೊಹ್ಲಿ ಹೇಳಿದ್ದೇನು ?


5 ಕ್ರೀಡಾಂಗಣಗಳಲ್ಲಿ ಲೀಗ್‌ ಪಂದ್ಯಗಳು? 2020ರ ಆವೃತ್ತಿಯ ಒಟ್ಟು 60 ಪಂದ್ಯಗಳನ್ನು ಕೇವಲ 3 ಕ್ರೀಡಾಂಗಣಗಳಲ್ಲಿ ಯಶಸ್ವಿಯಾಗಿ ಆಯೋಜಿಸಿದ್ದ ಬಿಸಿಸಿಐ, 2021ರ ಆವೃತ್ತಿಯ ಲೀಗ್‌ ಹಂತಕ್ಕೆ 5 ಕ್ರೀಡಾಂಗಣಗಳನ್ನು ಬಳಸಿಕೊಳ್ಳಲು ಯೋಜನೆ ರೂಪಿಸಿದೆ. ಮುಂಬೈನಲ್ಲೇ ಒಟ್ಟು 4 ಕ್ರೀಡಾಂಗಣಗಳಿವೆ. ವಾಂಖೇಡೆ, ಬ್ರಾಬೋನ್‌ ಕ್ರೀಡಾಂಗಣ, ನವಿ ಮುಂಬೈನಲ್ಲಿರುವ ಡಿ.ವೈ.ಪಾಟೀಲ್‌ ಹಾಗೂ ರಿಲಯನ್ಸ್‌ ಕ್ರಿಕೆಟ್‌ ಕ್ರೀಡಾಂಗಣ, ಪುಣೆಯ ಹೊರಭಾಗದಲ್ಲಿರುವ ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆ (ಎಂಸಿಎ) ಕ್ರೀಡಾಂಗಣದಲ್ಲಿ ಲೀಗ್‌ ಹಂತದ 56 ಪಂದ್ಯಗಳು ನಡೆಯುವ ಸಾಧ್ಯತೆ ಇದೆ. ಪ್ಲೇ-ಆಫ್‌ ಹಂತದ 4 ಪಂದ್ಯಗಳು ಅಹಮದಾಬಾದ್‌ನಲ್ಲಿರುವ ವಿಶ್ವದ ಅತಿದೊಡ್ಡ ಕ್ರೀಡಾಂಗಣ ಮೊಟೇರಾದಲ್ಲಿ ನಡೆಸಲು ಬಿಸಿಸಿಐ ಮುಂದಾಗಲಿದೆ ಎಂದು ವರದಿಯಲ್ಲಿದೆ.


"ಪ್ರಧಾನಿ ಮೋದಿ ಮಾತು ಕ್ರಿಕೆಟ್ ತಂಡದ ಸ್ಥೈರ್ಯ ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ'


ಮೊಟೇರಾ ಕ್ರೀಡಾಂಗಣದಲ್ಲಿ ಈಗಾಗಲೇ ಮುಷ್ತಾಕ್‌ ಅಲಿ ಟಿ20 ಟೂರ್ನಿಯ ನಾಕೌಟ್‌ ಪಂದ್ಯಗಳು ನಡೆದಿದ್ದು, ಐಪಿಎಲ್‌ಗೂ ಮುನ್ನ ಭಾರತ ಹಾಗೂ ಇಂಗ್ಲೆಂಡ್‌ ನಡುವೆ 2 ಟೆಸ್ಟ್‌ ಹಾಗೂ 5 ಟಿ20 ಪಂದ್ಯಗಳು ನಡೆಯಲಿವೆ.


Sourav Ganguly : ಬಂಗಾಳದ ಹುಲಿಗೆ ಕನ್ನಡ ಕುವರನ ಚಿಕಿತ್ಸೆ..! ಗಂಗೂಲಿಗೆ ಕಾಡುತ್ತಿರುವ ಕಾಯಿಲೆ ಯಾವುದು..?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.