Sourav Ganguly : ಬಂಗಾಳದ ಹುಲಿಗೆ ಕನ್ನಡ ಕುವರನ ಚಿಕಿತ್ಸೆ..! ಗಂಗೂಲಿಗೆ ಕಾಡುತ್ತಿರುವ ಕಾಯಿಲೆ ಯಾವುದು..?

ಗಂಗೂಲಿ ಟ್ರಿಪಲ್ ವೆಸಲ್ಸ್ ಡಿಸೀಸ್  ನಿಂದ ಬಳಲುತ್ತಿದ್ದಾರೆ. ಇದ್ಯಾವ ಖಾಯಿಲೆ. ಇದು ವ್ಯಕ್ತಿಯ ಆರೋಗ್ಯಕ್ಕೆ ಹೇಗೆ ಮಾರಕ.ಅದನ್ನು ತಿಳಿದುಕೊಳ್ಳಲೇ ಬೇಕು.

Written by - Ranjitha R K | Last Updated : Jan 31, 2021, 12:10 PM IST
  • ಸೌರವ್ ಗಂಗೂಲಿಗೆ ಪದೇ ಪದೇ ಕಾಡುತ್ತಿರುವ ಕಾಯಿಲೆ ಯಾವುದು..?
  • ಟ್ರಿಪಲ್ ವೆಸಲ್ಸ್ ಡಿಸೀಸ್ ಅಂದರೇನು..? ಅದೆಷ್ಟು ಮಾರಕ..?
  • ಗಂಗೂಲಿಗೆ ಚಿಕಿತ್ಸೆ ನೀಡಿದ ಕನ್ನಡಿಗ ಯಾರು ಗೊತ್ತಾ..?
Sourav Ganguly : ಬಂಗಾಳದ ಹುಲಿಗೆ ಕನ್ನಡ ಕುವರನ ಚಿಕಿತ್ಸೆ..! ಗಂಗೂಲಿಗೆ ಕಾಡುತ್ತಿರುವ ಕಾಯಿಲೆ ಯಾವುದು..? title=
ಗಂಗೂಲಿಗೆ ಚಿಕಿತ್ಸೆ ನೀಡಿದ ಕನ್ನಡಿಗ (file photo)

ಕೊಲ್ಕತ್ತಾ : ಭಾರತೀಯ ಕ್ರಿಕೆಟ್ ತಂಡ ಮಾಜಿ ನಾಯಕ, ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ (Sourav Ganguly) ಕಾಯಿಲೆಯೊಂದು ಅವರು ಸತತ ಕಾಡಿಸುತ್ತಿದೆ.  ಕ್ರಿಕೆಟ್ ಕಲಿ ದಾದಾ   ಆರೋಗ್ಯ ವಿಚಾರ ಚಿಂತೆಗೂ ಕಾರಣವಾಗಿದೆ. 

ಗಂಗೂಲಿ ಆರೋಗ್ಯದಲ್ಲಿ ಪದೇಪದೇ ವ್ಯತ್ಯಯ : 
ಜನವರಿ 2 ರಂದು ಸೌರವ್ ಗಂಗೂಲಿಗೆ (Sourav Ganguly ) ಹೃದಾಘಾತವಾಗಿತ್ತು. ಜಿಮ್ ನಲ್ಲಿರುವಾಗಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು  ಕೊಲ್ಕತ್ತಾದ  ಆಸ್ಪತ್ರೆಯೊಂದಕ್ಕೆ ದಾಖಲಿಸಲಾಯಿತು. ಒಂದು ವಾರದ ಚಿಕಿತ್ಸೆ ಬಳಿಕ ಗಂಗೂಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಗೊಂಡಿದ್ದರು.

ಇದನ್ನೂ ಓದಿ : ಈ ತಂತ್ರದಿಂದಲೇ ಕೊಹ್ಲಿಯನ್ನು ಔಟ್ ಮಾಡುವುದಾಗಿ ಹೇಳಿದ ಇಂಗ್ಲೆಂಡ್ ತಂಡ...!

ಜ.26ರಂದು ಗಂಗೂಲಿ ಆರೋಗ್ಯದಲ್ಲಿ (Health) ಮತ್ತೊಮ್ಮೆ ವ್ಯತ್ಯಯ ಉಂಟಾಗಿತ್ತು.  ಎದೆಯಲ್ಲಿ ಮತ್ತೊಮ್ಮೆ ನೋವು ಕಾಣಿಸಿಕೊಂಡಿತ್ತು.   ಕೂಡಲೇ ಅವರನ್ನು ಕೊಲ್ಕತ್ತಾ ಅಪೋಲೋ ಆಸ್ಪತ್ರೆಗೆ (Apollo Hospital) ಸೇರಿಸಲಾಯಿತು. ಗಂಗೂಲಿಗೆ ಅಂಜಿಯೋಪ್ಲಾಸಿ (Angioplasty) ಮಾಡಲಾಗಿತ್ತು.  ಜೊತೆಗೆ ರಕ್ತನಾಳದಲ್ಲಿನ ಬ್ಲಾಕ್ಸ್ ತೆಗೆಯಲು ಎರಡು ಸ್ಟಂಟ್ (Stent) ಅಳವಡಿಸಲಾಗಿತ್ತು . ನಂತರ ಅವರ ಆರೋಗ್ಯ ಸುಧಾರಿಸಿತ್ತು. 

ಗಂಗೂಲಿಗೆ ಕಾಡುತ್ತಿರುವ ಕಾಯಿಲೆ ಯಾವುದು..?
ಡಾಕ್ಟರ್ ಪ್ರಕಾರ ಗಂಗೂಲಿ ಟ್ರಿಪಲ್ ವೆಸಲ್ಸ್ ಡಿಸೀಸ್ (Triple Vessel Disease) ನಿಂದ ಬಳಲುತ್ತಿದ್ದಾರೆ. ಇದ್ಯಾವ ಖಾಯಿಲೆ. ಇದು ವ್ಯಕ್ತಿಯ ಆರೋಗ್ಯಕ್ಕೆ ಹೇಗೆ ಮಾರಕ.ಅದನ್ನು ತಿಳಿದುಕೊಳ್ಳಲೇ ಬೇಕು. ಹೃದಯಕ್ಕೆ ರಕ್ತ ಪಂಪ್ ಮಾಡುವ ಕೆಲಸವನ್ನು ಮೂರು ಧಮನಿಗಳು ಮಾಡುತ್ತವೆ. ಈ ಮೂರು ಧಮನಿಗಳಲ್ಲಿ ಬ್ಲಾಕ್ಸ್ ಕಂಡು ಬಂದರೆ ಅದನ್ನು ಟ್ರಿಪಲ್ ವೆಸೆಲ್ಸ್ ಡಿಸಿಸ್ ಎಂದು ಕರೆಯುತ್ತಾರೆ. ಅಂದರೆ, ಮೂರು ರಕ್ತನಾಳಗಳಲ್ಲಿ ರಕ್ತ ಸಂಚಾರಕ್ಕೆ (Blood circulation) ತೊಂದರೆ.  ಇದರ ಕಾರಣದಿಂದಾಗಿ ಎದೆನೋವು,  ಉಸಿರಾಟ ತೊಂದರೆ ಎಲ್ಲಾ ಉಂಟಾಗುತ್ತದೆ.  ಇದರ ಪರಿಣಾಮ ಹೃದಯಾಘಾತ  ಉಂಟಾಗುತ್ತದೆ. 

ಇದನ್ನೂ ಓದಿ : ಬಿಸಿಸಿಐ ಮುಖ್ಯಸ್ಥ ಸೌರವ ಗಂಗೂಲಿ ಆರೋಗ್ಯದಲ್ಲಿ ಸ್ಥಿರ

ಬಂಗಾಲದ ಹುಲಿಗೆ ಕನ್ನಡ ಕುವರನ ಚಿಕಿತ್ಸೆ:
ಜನವರಿ 26ರಂದು  ಸೌರವ್ ಗಂಗೂಲಿಗೆ (Sourav Ganguly) ಅಪೋಲೋ ಆಸ್ಪತ್ರೆಯಲ್ಲಿ ಅಂಜಿಯೋ ಪ್ಲಾಸಿ (Angioplasty) ಮಾಡಲಾಗಿತ್ತು.  ಭಾರತದ ಪ್ರಖ್ಯಾತ ಹೃದ್ರೋಗ ಪರಿಣಿತ (Cardiac Surgeon) ಡಾ. ದೇವಿಶೆಟ್ಟಿ ( Dr, Devi Shetty) ನೇತೃತ್ವದಲ್ಲಿ ದಾದಾ ಅವರಿಗೆ ಅಂಜಿಯೋಪ್ಲಾಸಿ ಮಾಡಲಾಗಿತ್ತು. ನಿಮಗೆ ಗೊತ್ತಿದೆ..ಡಾ. ದೇವಿಶೆಟ್ಟಿ ನಮ್ಮ ರಾಜ್ಯದ ಕುಂದಾಪುರದವರು.  ಬೆಂಗಳೂರಿನಲ್ಲಿ ನಾರಾಯಣ ಹೃದಯಾಲಯ ಎಂಬ ಸೂಪರ್ ಸ್ಪೆಷಾಲಿಟಿ  ಆಸ್ಪತ್ರೆ ಕಟ್ಟಿಸಿದ್ದು  ಡಾ. ದೇವಿಶೆಟ್ಟಿ. 2012ರಲ್ಲಿ ಅವರಿಗೆ ಪದ್ಮಭೂಷಣ (Padma Bhushan Award ಗರಿ ಕೂಡಾ ಲಭಿಸಿತ್ತು. ಡಾ. ಶೆಟ್ಟಿ ನೇತೃತ್ವದಲ್ಲೇ ಗಂಗೂಲಿಗೆ ಚಿಕಿತ್ಸೆ ನಡೆಯುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News