ಮನ್ ಕೀ ಬಾತ್ ನಲ್ಲಿ Team India ಆಟಗಾರರಿಗೆ ಶಹಬ್ಬಾಸ್ ಎಂದ ಪ್ರಧಾನಿ, ಮೋದಿ ಮಾತಿಗೆ ಕೊಹ್ಲಿ ಹೇಳಿದ್ದೇನು ?

ಪ್ರಧಾನಮಂತ್ರಿ ನರೇಂದ್ರ ಮೋದಿ ಜನವರಿ 31ರಂದು ಈ ವರ್ಷದ ಮೊದಲ ಮನ್ ಕಿ ಬಾತ್ ಕಾರ್ಯಕ್ರಮದ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. 

Written by - Ranjitha R K | Last Updated : Jan 31, 2021, 07:06 PM IST
  • ವರ್ಷದ ಮೊದಲ ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮಾತು
  • ಟೀಂ ಇಂಡಿಯಾ ಆಟಗಾರರನ್ನು ಅಭಿನಂದಿಸಿದ ಪ್ರಧಾನಮಂತ್ರಿ
  • ಆಟಗಾರರ ಪರಿಶ್ರಮವನ್ನು ಕೊಂಡಾಡಿದ ಮೋದಿ
ಮನ್ ಕೀ ಬಾತ್ ನಲ್ಲಿ Team India ಆಟಗಾರರಿಗೆ ಶಹಬ್ಬಾಸ್ ಎಂದ ಪ್ರಧಾನಿ, ಮೋದಿ  ಮಾತಿಗೆ ಕೊಹ್ಲಿ ಹೇಳಿದ್ದೇನು ? title=
ಟೀಂ ಇಂಡಿಯಾ ಆಟಗಾರರನ್ನು ಅಭಿನಂದಿಸಿದ ಪ್ರಧಾನಮಂತ್ರಿ(file photo)

ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಜನವರಿ 31ರಂದು ಈ ವರ್ಷದ ಮೊದಲ ಮನ್ ಕಿ ಬಾತ್ ಕಾರ್ಯಕ್ರಮದ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಈ ಕಾರ್ಯಕ್ರಮದ 73ನೇ ಅಡಿಶನ್ ನಲ್ಲಿ ಪ್ರಧಾನಿ, ಭಾರತ ಕ್ರಿಕೆಟ್ ತಂಡದ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಕ್ರಿಕೆಟ್ ಟೆಸ್ಟ್ ನಲ್ಲಿ ಸರಣಿ ಗೆದ್ದ ಟೀ ಇಂಡಿಯಾಗೆ, ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

ಮ,ನ್ ಕೀ ಬಾತ್ (Mann ki Baat) ಕಾರ್ಯಕ್ರಮದಲ್ಲಿ ಮೋದಿ ಕ್ರಿಕೆಟ್ (Cricket) ಬಗ್ಗೆ ಮಾತನಾಡುತ್ತಾ, ಈ ಬಾರಿ ಕ್ರಿಕೆಟ್ ಪಿಚ್ಚ್ ನಲ್ಲಿಯೂ ಸಿಹಿ ಸುದ್ದಿಯೇ ಸಿಕ್ಕಿದೆ ಎಂದಿದ್ದಾರೆ. ಆರಂಭದಲ್ಲಿ ಎಡವಿದ್ದರೂ, ನಂತರ ಉತ್ತಮ ಪ್ರದರ್ಶನ ನೀಡಿ ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆಲುವು ಸಾಧಿಸಿದೆ. ಟೀ ಇಂಡಿಯಾ (Team India) ಆಟಗಾರರ ಪರಿಶ್ರಮ ಮತ್ತು ಟೀ ವರ್ಕ್ ಎಲ್ಲರನ್ನೂ ಪ್ರೇರೇಪಿಸುತ್ತದೆ ಎಂದು ಹೇಳಿದ್ದಾರೆ.

 

ಇದನ್ನೂ ಓದಿ : Sourav Ganguly : ಬಂಗಾಳದ ಹುಲಿಗೆ ಕನ್ನಡ ಕುವರನ ಚಿಕಿತ್ಸೆ..! ಗಂಗೂಲಿಗೆ ಕಾಡುತ್ತಿರುವ ಕಾಯಿಲೆ ಯಾವುದು..?

ಪ್ರಧಾನಿ ಅಭಿನಂದನೆ ಕೊಹ್ಲಿ ಪ್ರತಿಕ್ರಿಯೆ:
ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಮಾತುಗಳಿಂದ ಉತ್ಸಾಹಿತರಾದ ಟೀ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ, ಪ್ರತಿಕ್ರಿಯಿಸಿದ್ದಾರೆ. ಟ್ವಿಟರ್ ನಲ್ಲಿ ತ್ರಿವರ್ಣ ಧ್ವಜದ ಚಿಹ್ನೆಯನ್ನು ಹಾಕುವ ಮೂಲಕ ಗೌರವ ಸೂಚಿಸಿದ್ದಾರೆ. ಪ್ರಧಾನಮಂತ್ರಿ ಯವರು ಟೀ ಇಂಡಿಯಾ ಆಟಗಾರರ ಬಗ್ಗೆ ಆಡಿರುವ ಮಾತುಗಳಿಂದ ಕ್ಯಾಪ್ಟನ್ ಕೊಹ್ಲಿ(Virat Kohli) ರೋಮಾಂಚನಗೊಂಡಿದ್ಧಾರೆ. 

 

ಒಂದೇ ಟೆಸ್ಟ್ ಪಂದ್ಯವನ್ನಾಡಿದ್ದ ಕೊಹ್ಲಿ : 
ತನ್ನ ಮಗುವಿನ ಕಾರಣದಿಂದಾಗಿ ಕೊಹ್ಲಿ ಎಡಿಲೆಡ್ ಟೆಸ್ಟ್ ನ ನಂತರ ಭಾರತಕ್ಕೆ ಮರಳಿದ್ದರು. ಇದಾಧ ನಂತರ ಅಜಿಂಕ್ಯಾ ರಹಾನೆ (Ajinkya Rahane) ಟೀಂ ಇಂಡಿಯಾವನ್ನು ಮುನ್ನಡೆಸಿದ್ದರು. ಟೀಂ ಇಂಡಿಯಾ ಇದರಲ್ಲಿ 2-1ರ ಅಂತರದಲ್ಲಿ ಗೆಲುವು ಸಾಧಿಸಿತ್ತು. 

ಇದನ್ನೂ ಓದಿ : ಈ ತಂತ್ರದಿಂದಲೇ ಕೊಹ್ಲಿಯನ್ನು ಔಟ್ ಮಾಡುವುದಾಗಿ ಹೇಳಿದ ಇಂಗ್ಲೆಂಡ್ ತಂಡ...!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News