Argentina Fan Topless: ಫಿಫಾ ಕಪ್ ಗೆಲ್ಲುತ್ತಿದ್ದಂತೆ ಬಟ್ಟೆ ಬಿಚ್ಚಿ ಲೈವ್ ಪಂದ್ಯದ ವೇಳೆಯೇ ಕುಣಿದಾಡಿದ ಅರ್ಜೆಂಟೀನಾ ಫ್ಯಾನ್!!
Argentina Fan Topless FIFA World Cup 2022: ಈ ಫೈನಲ್ ಪಂದ್ಯದ ಫಲಿತಾಂಶವನ್ನು ಪೆನಾಲ್ಟಿ ಶೂಟೌಟ್ ಮೂಲಕ ನಿರ್ಧರಿಸಲಾಯಿತು. ಪೆನಾಲ್ಟಿ ಶೂಟೌಟ್ ವೇಳೆ ಅರ್ಜೆಂಟೀನಾದ ಗೊನ್ಜಾಲೊ ಮೊಂಟಿಲ್ ಗೋಲು ಬಾರಿಸಿದಾಗ ಇಡೀ ಕ್ರೀಡಾಂಗಣವೇ ರೋಮಾಂಚನಗೊಂಡಿತು. ಇದೇ ವೇಳೆ ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳತ್ತ ಕ್ಯಾಮರಾ ತಿರುಗಿದಾಗ ಎಲ್ಲರೂ ಅಚ್ಚರಿಗೊಂಡರು.
Argentina Fan Topless FIFA World Cup 2022: FIFA ವಿಶ್ವಕಪ್ 2022ರ ಅಂತಿಮ ಪಂದ್ಯವು ಅರ್ಜೆಂಟೀನಾ ಮತ್ತು ಫ್ರಾನ್ಸ್ ನಡುವೆ ಕತಾರ್‌ನ ಲುಸೈಲ್ ಐಕಾನಿಕ್ ಸ್ಟೇಡಿಯಂನಲ್ಲಿ ಕಳೆದ ದಿನ ನಡೆದಿದೆ. ಈ ಪಂದ್ಯದಲ್ಲಿ ಅರ್ಜೆಂಟೀನಾ ಪೆನಾಲ್ಟಿ ಶೂಟೌಟ್‌ನಲ್ಲಿ ಫ್ರಾನ್ಸ್ ತಂಡವನ್ನು 4-2 ಗೋಲುಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿದೆ. ಈ ಗೆಲುವಿನಿಂದ ಇಡೀ ಅರ್ಜೆಂಟೀನಾ ಖುಷಿಯಲ್ಲಿ ಮುಳುಗಿದ್ದು ಫ್ಯಾನ್ಸ್ ಸಂಭ್ರಮಾಚರಣೆ ಮಾಡಿದ್ದಾರೆ. ಆದರೆ ಈ ಪಂದ್ಯದ ವೇಳೆ ಅರ್ಜೆಂಟೀನಾ ಅಭಿಮಾನಿಯೊಬ್ಬ ಮಾಡಿದ್ದನ್ನು ನೋಡಿದರೆ ನೀವು ಬೆಚ್ಚಿ ಬೀಳುತ್ತೀರಿ.
ಇದನ್ನೂ ಓದಿ: IND vs NZ: ಇಂಡೋ-ಕೀವೀಸ್ ODI ಸರಣಿಗೆ ಇವರೇ ಹೊಸ ನಾಯಕ: ಈ ಇಬ್ಬರು ತಂಡದಿಂದ ಔಟ್!
ಈ ಫೈನಲ್ ಪಂದ್ಯದ ಫಲಿತಾಂಶವನ್ನು ಪೆನಾಲ್ಟಿ ಶೂಟೌಟ್ ಮೂಲಕ ನಿರ್ಧರಿಸಲಾಯಿತು. ಪೆನಾಲ್ಟಿ ಶೂಟೌಟ್ ವೇಳೆ ಅರ್ಜೆಂಟೀನಾದ ಗೊನ್ಜಾಲೊ ಮೊಂಟಿಲ್ ಗೋಲು ಬಾರಿಸಿದಾಗ ಇಡೀ ಕ್ರೀಡಾಂಗಣವೇ ರೋಮಾಂಚನಗೊಂಡಿತು. ಇದೇ ವೇಳೆ ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳತ್ತ ಕ್ಯಾಮರಾ ತಿರುಗಿದಾಗ ಎಲ್ಲರೂ ಅಚ್ಚರಿಗೊಂಡರು. ಈ ಗೋಲಿನ ನಂತರ ಅರ್ಜೆಂಟೀನಾದ ಅಭಿಮಾನಿಯೊಬ್ಬರು ಬಟ್ಟೆ ಬಿಚ್ಚಿ ಕುಣಿದಾಡಿದ್ದಾರೆ. ಆತನ ಕೈಯಲ್ಲಿ ಅರ್ಜೆಂಟೀನಾದ ಜೆರ್ಸಿ ಕೂಡ ಕಂಡುಬಂದಿತು.
ಈ ಘಟನೆಯನ್ನು ನೋಡಿ ಕ್ರೀಡಾಂಗಣದಲ್ಲಿ ಹಾಗೂ ಟಿವಿಯಲ್ಲಿ ಪಂದ್ಯ ವೀಕ್ಷಿಸುವ ಅಭಿಮಾನಿಗಳು ಬೆಚ್ಚಿ ಬಿದ್ದಿದ್ದಾರೆ. ಈ ಘಟನೆಯ ವಿಡಿಯೋ ಮತ್ತು ಹಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ.
ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಅರಬ್ ರಾಷ್ಟ್ರವೊಂದರಲ್ಲಿ ಟೂರ್ನಿ ಆಯೋಜಿಸಿರುವುದು ಇದೇ ಮೊದಲು. ಕತಾರ್ ಪಂದ್ಯಾವಳಿಯ ಮೊದಲು ಒಂದು ದೊಡ್ಡ ನಿಯಮವನ್ನು ಮಾಡಲಾಗಿತ್ತು. ಅದರಲ್ಲಿ ಕತಾರ್‌ನಲ್ಲಿರುವ ಮಹಿಳೆಯರು ತಮ್ಮ ದೇಹವು ಹೆಚ್ಚು ಗೋಚರಿಸುವ ಅಂದರೆ ತೆರೆದಿರುವಂತಹ ಬಟ್ಟೆಗಳನ್ನು ಧರಿಸುವಂತಿಲ್ಲ ಎಂದು ಹೇಳಲಾಗಿತ್ತು. ಅಂತಹ ಬಟ್ಟೆಗಳನ್ನು ಧರಿಸಿದರೆ ಜೈಲು ಶಿಕ್ಷೆಗೆ ಕಾರಣವಾಗುತ್ತದೆ. ಪುರುಷರ ಬಗ್ಗೆಯೂ ನಿಯಮಗಳು ಮತ್ತು ನಿಬಂಧನೆಗಳನ್ನು ಮಾಡಲಾಗಿತ್ತು. ಕತಾರ್‌ನಲ್ಲಿ ಪುರುಷರು ತಮ್ಮ ಮೊಣಕಾಲುಗಳನ್ನು ಮುಚ್ಚದ ಜೀನ್ಸ್ ಧರಿಸಿ ತಿರುಗಾಡುವಂತಿಲ್ಲ. ಆದರೆ ಈ ಅಭಿಮಾನಿ ಈ ನಿಯಮಗಳಿಗೆ ವಿರುದ್ಧವಾಗಿ ಎಲ್ಲ ಮಿತಿಗಳನ್ನು ದಾಟಿದ್ದಾನೆ.
ಇದನ್ನೂ ಓದಿ: Team India: ಟೀಂ ಇಂಡಿಯಾಗೆ ಮತ್ತೆ ಎಂಟ್ರಿ ಕೊಡ್ತಿದ್ದಾರೆ ಈ ಮ್ಯಾಚ್ ವಿನ್ನರ್! ಕ್ರಿಕೆಟ್ ಪ್ರಿಯರಿಗೆ ಗುಡ್ ನ್ಯೂಸ್
ಅರ್ಜೆಂಟೀನಾ ಮೂರನೇ ಬಾರಿಗೆ ಫಿಫಾ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಈ ಹಿಂದೆ 1978 ಮತ್ತು 1986 ರಲ್ಲಿ ಈ ಟ್ರೋಫಿಯನ್ನು ಗೆದ್ದಿದ್ದರು. ಇದರೊಂದಿಗೆ ಅರ್ಜೆಂಟೀನಾ ತಂಡ 36 ವರ್ಷಗಳ ಬಳಿಕ ಫಿಫಾ ವಿಶ್ವಕಪ್ ಟ್ರೋಫಿಯನ್ನು ವಶಪಡಿಸಿಕೊಂಡಿದೆ. ಈ ಫೈನಲ್ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ ಅರ್ಜೆಂಟೀನಾ ಗೆಲುವಿನ ದೊಡ್ಡ ಹೀರೋ ಆಗಿ ಕಾಣಿಸಿಕೊಂಡರು. ಮೆಸ್ಸಿ ಫೈನಲ್‌ನಲ್ಲಿ ಎರಡು ಗೋಲುಗಳನ್ನು ಗಳಿಸಿದ್ದರು. ಪೆನಾಲ್ಟಿ ಶೂಟೌಟ್‌ನಲ್ಲಿ ತಂಡ 2 ಗೋಲು ಬಾರಿಸಿತು. ಈ ಮೂಲಕ ಚಾಂಪಿಯನ್ ಅರ್ಜೆಂಟೀನಾ 18 ಕ್ಯಾರೆಟ್ ಚಿನ್ನ ಮತ್ತು $ 42 ಮಿಲಿಯನ್ ಅಂದರೆ ಸುಮಾರು 347 ಕೋಟಿ ರೂ.ಗಳ ಬಹುಮಾನವನ್ನೂ ಗೆದ್ದಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್