Asia cup 2023 : ಭಾರತ-ಪಾಕಿಸ್ತಾನ ಪಂದ್ಯ ರದ್ದಾಗುವ ಸಾಧ್ಯತೆ..! ಏಕೆ ಗೊತ್ತೆ..?
Asia cup 2023 : ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಕ್ರಿಕೆಟ್ ಪಂದ್ಯ ಸೆಪ್ಟೆಂಬರ್ 2 ರಂದು ನಡೆಯಲಿದ್ದು, ಈ ಮ್ಯಾಚ್ಗೆ ಸಮಸ್ಯೆ ಎದುರಾಗಿದೆ. ಇದರಿಂದಾಗಿ ಪಂದ್ಯ ಸಂಪೂರ್ಣವಾಗಿ ನಡೆಯುತ್ತಾ.. ಇಲ್ಲವೆ..? ಎಂಬ ಅನುಮಾನ ಮೂಡಿದೆ.
Asia cup 2023 Pak vs Ind : ಕಳೆದ ಬಾರಿಯ ಏಷ್ಯಾಕಪ್ 20 ಓವರ್ ಗಳ ಟೂರ್ನಿ ನಡೆದಿತ್ತು, ಈ ಬಾರಿ ಏಕದಿನ ಟೂರ್ನಿಯಾಗಿ ನಡೆಯುತ್ತಿದೆ. ಭಾರೀ ನಿರೀಕ್ಷೆಯ ನಡುವೆ ಇದೀಗ ಪಾಕಿಸ್ತಾನದಲ್ಲಿ ಏಷ್ಯಾಕಪ್ ಸರಣಿ ಆರಂಭವಾಗಿದೆ. ಮೊದಲ ಪಂದ್ಯದಲ್ಲಿ ಏಷ್ಯಾಕಪ್ ಸರಣಿಗೆ ಆತಿಥ್ಯ ವಹಿಸುತ್ತಿರುವ ಪಾಕಿಸ್ತಾನ ತಂಡ ಹಾಗೂ ಚೊಚ್ಚಲ ಬಾರಿಗೆ ಏಷ್ಯಾಕಪ್ ಗೆ ಆಯ್ಕೆಯಾಗಿರುವ ನೇಪಾಳ ತಂಡಗಳು ಮೈದಾನಕ್ಕಿಳಿದಿವೆ.
ಈಗಾಗಲೇ ಈ ಸರಣಿಯಲ್ಲಿ ಆಡುತ್ತಿರುವ ನಾಯಕ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಶ್ರೀಲಂಕಾ ತಲುಪಿದೆ. ಟೀಂ ಇಂಡಿಯಾ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ. ಸೆ.2ರಂದು ಪಳ್ಳಕಲೆ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಸುದೀರ್ಘ ಸಮಯದ ನಂತರ ಪಾಕ್ ಮತ್ತು ಭಾರತ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಮುಖಾಮುಖಿಯಾಗಲಿರುವುದರಿಂದ ಕ್ರಿಕೆಟ್ ಜಗತ್ತು ಈ ಪಂದ್ಯಕ್ಕಾಗಿ ಕಾತರದಿಂದ ಕಾಯುತ್ತಿದೆ.
ಇದನ್ನೂ ಓದಿ: ರಾಖಿ ಕಟ್ಟಲು ಬಂದ ತಂಗಿಗೆ ಕಾಡಿದ ಶ್ರೇಯಸ್ ಅಯ್ಯರ್..! ಅಣ್ಣ-ತಂಗಿ ಕ್ಯೂಟ್ ವಿಡಿಯೋ ವೈರಲ್
ಆದ್ರೆ ಇದೀಗ ಈ ಪಂದ್ಯ ರದ್ದಾಗುವ ಕುರಿತ ಪ್ರಶ್ನೆ ಉದ್ಭವಿಸಿದೆ. ಏಕೆಂದರೆ ಪಲ್ಲಕಲೆ ಕ್ರೀಡಾಂಗಣದಲ್ಲಿ ಉಭಯ ತಂಡಗಳ ನಡುವಿನ ಹಣಾಹಣಿಯ ದಿನ ಅಂದರೆ ಸೆ.2 ಶನಿವಾರ ಮಳೆಯಾಗುವ ಸಾಧ್ಯತೆ ಇದೆ. ವೆದರ್ ಡಾಟ್ ಕಾಮ್ ಪ್ರಕಾರ, ಪಂದ್ಯದ ದಿನದಂದು ಪಲ್ಲಕಲೆ ಕ್ರೀಡಾಂಗಣ ಇರುವ ಪ್ರದೇಶದಲ್ಲಿ 90% ಮಳೆಯಾಗುವ ಸಾಧ್ಯತೆಯಿದೆ. ಅಕ್ಯುವೆದರ್ ವೆಬ್‌ಸೈಟ್ ಪ್ರಕಾರ, ಶನಿವಾರ ಮಳೆ ಬೀಳುವ ಸಾಧ್ಯತೆ 89% ರಷ್ಟಿದೆ.
ಮಳೆಯಾಗದಿದ್ದರೂ, ದಿನವಿಡೀ ಮೋಡ ಕವಿದ ವಾತಾವರಣವಿರುತ್ತದೆ ಎಂದು ವೆಬ್‌ಸೈಟ್ ತಿಳಿಸಿದೆ. ಶುಕ್ರವಾರ ರಾತ್ರಿ ಮತ್ತು ಶನಿವಾರ ಮುಂಜಾನೆ ಮಳೆಯಾಗುವ ನಿರೀಕ್ಷೆಯಿದೆ. ಬಹು ನಿರೀಕ್ಷಿತ ಪಂದ್ಯವು ಮಳೆಯಿಂದಾಗಿ ತಡವಾಗಿ ಪ್ರಾರಂಭವಾಗುವ ಸಾಧ್ಯತೆಯು ಸಹ ಉಂಟು. ಭಾರೀ ಮಳೆಯು ಪಂದ್ಯದ ಆರಂಭಕ್ಕೆ ನಾಲ್ಕು ಗಂಟೆಗಳ ಮೊದಲು ಅಂದರೆ ಸ್ಥಳೀಯ ಕಾಲಮಾನ ಪ್ರಕಾರ ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಗುವ ನಿರೀಕ್ಷೆಯಿದೆ. 34.6 ಮಿ.ಮೀ ಮಳೆಯಾಗುವ ಮುನ್ಸೂಚನೆ ಇದ್ದು, ಬೆಳಗ್ಗೆ 7 ಗಂಟೆಯಿಂದ ಮಧ್ಯರಾತ್ರಿಯವರೆಗೆ ಮಳೆ ಮುಂದುವರಿಯುವ ಮುನ್ಸೂಚನೆ ಇದೆ.
ಇದನ್ನೂ ಓದಿ: ಕೊನೆ ಕ್ಷಣದಲ್ಲಿ ಏಷ್ಯಾಕಪ್’ನಿಂದ ಹೊರಬಿದ್ದ ಸ್ಟಾರ್ ಓಪನರ್! ಬದಲಿಯಾಗಿ 30ರ ಹರೆಯದ ಕ್ರಿಕೆಟಿಗನಿಗೆ ಸ್ಥಾನ
ಈ ಮಾಹಿತಿ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಕೊನೆಯ ಬಾರಿಗೆ ಮುಖಾಮುಖಿಯಾಗಿದ್ದವು. ಆ ರೋಚಕ ಪಂದ್ಯವನ್ನು ಕ್ರಿಕೆಟ್ ಜಗತ್ತು ಮರೆತಿಲ್ಲ. ಹೀಗಿರುವಾಗ ಏಷ್ಯಾಕಪ್ ನಲ್ಲಿ ಉಭಯ ತಂಡಗಳ ಮುಖಾಮುಖಿಯಾಗುವುದನ್ನು ಕ್ರಿಕೆಟ್ ಪ್ರೇಮಿಗಳು ಎದುರು ನೋಡುತ್ತಿದ್ದಾರೆ. ಭಾರತ-ಪಾಕ್ ಪಂದ್ಯಕ್ಕೆ ವರುಣ ಅಡ್ಡಿಯಾಗ್ತನಾ ಇಲ್ಲವೆ ಅಂತ ಕಾಯ್ದು ನೋಡಬೇಕಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.