ಆರಂಭದಲ್ಲೇ ಅಂತ್ಯ ಕಾಣುತ್ತಿದ್ದ ವಿರಾಟ್ ವೃತ್ತಿಜೀವನವನ್ನು ಮೇಲೆತ್ತಿದ್ದು 41 ಹರೆಯದ ಈ ಆಲ್’ರೌಂಡರ್ ನೀಡಿದ ಸಲಹೆ!

Virat Kohli-Yuvraj Singh Friendship: ಕಿಂಗ್ ಕೊಹ್ಲಿ ಈಗ ಕ್ರಿಕೆಟ್ ಲೋಕವನ್ನು ಆಳುತ್ತಿದ್ದಾರೆ. ಆದರೆ, ಭಾರತ ತಂಡ ಪ್ರವೇಶಿಸಿದ ಕೆಲವೇ ಸಮಯದಲ್ಲಿ ಅವರ ವರ್ತನೆಯೇ ಸಂಪೂರ್ಣ ಬದಲಾಗತೊಡಗಿತಂತೆ. ಈ ಬೆಳವಣಿಗೆ ಎಷ್ಟರ ಮಟ್ಟಿಗೆ ಇತ್ತೆಂದರೆ, ಆಯ್ಕೆ ಸಮಿತಿ ಅವರನ್ನು ತಂಡದಿಂದ ಹೊರಗಿಡುವ ಚಿಂತನೆ ನಡೆಸಿತ್ತು ಎನ್ನಲಾಗಿದೆ.

Written by - Bhavishya Shetty | Last Updated : Aug 30, 2023, 01:21 PM IST
    • ವಿರಾಟ್ ಕೊಹ್ಲಿ ಟೀಂ ಇಂಡಿಯಾಗೆ ಸಾಲು ಸಾಲು ಕೊಡುಗೆಗಳನ್ನೇ ನೀಡಿದ್ದಾರೆ
    • ಭಾರತ ತಂಡಕ್ಕೆ ಪ್ರವೇಶ ಪಡೆದ ಆರಂಭಿಕ ದಿನದಲ್ಲೇ ಅಂತ್ಯವಾಗುವತ್ತ ಸಾಗಿತ್ತು ಕೊಹ್ಲಿ ವೃತ್ತಿಜೀವನ
    • ಯುವರಾಜ್ ಸಿಂಗ್ ನೀಡಿದ ಸಲಹೆ ವಿರಾಟ್ ಬದುಕನ್ನು ಬದಲಾಯಿಸಿತಂತೆ
ಆರಂಭದಲ್ಲೇ ಅಂತ್ಯ ಕಾಣುತ್ತಿದ್ದ ವಿರಾಟ್ ವೃತ್ತಿಜೀವನವನ್ನು ಮೇಲೆತ್ತಿದ್ದು 41 ಹರೆಯದ ಈ ಆಲ್’ರೌಂಡರ್ ನೀಡಿದ ಸಲಹೆ! title=
Virat Kohli

Virat Kohli-Yuvraj Singh Friendship: ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್ ಮೂಲಕ ಟೀಂ ಇಂಡಿಯಾಗೆ ಸಾಲು ಸಾಲು ಕೊಡುಗೆಗಳನ್ನೇ ನೀಡಿದ್ದಾರೆ. ಆದರೆ ಭಾರತ ತಂಡಕ್ಕೆ ಪ್ರವೇಶ ಪಡೆದ ಆರಂಭಿಕ ದಿನದಲ್ಲೇ ಅವರ ವೃತ್ತಿ ಜೀವನ ಅಂತ್ಯವಾಗುವತ್ತ ಸಾಗಿತ್ತು ಎಂದರೆ ನಂಬುತ್ತೀರಾ? ಹೌದು... ಈ ಸಂದರ್ಭದಲ್ಲಿ ಭಾರತದ ಮಾಜಿ ಆಲ್ ​ರೌಂಡರ್​ ಯುವರಾಜ್ ಸಿಂಗ್ ನೀಡಿದ ಸಲಹೆ ವಿರಾಟ್ ಬದುಕನ್ನು ಬದಲಾಯಿಸಿತಂತೆ. ಅದ್ಹೇಗೆ ಎಂಬುದರ ​ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಾಗಿದೆ.

ಕಿಂಗ್ ಕೊಹ್ಲಿ ಈಗ ಕ್ರಿಕೆಟ್ ಲೋಕವನ್ನು ಆಳುತ್ತಿದ್ದಾರೆ. ಆದರೆ, ಭಾರತ ತಂಡ ಪ್ರವೇಶಿಸಿದ ಕೆಲವೇ ಸಮಯದಲ್ಲಿ ಅವರ ವರ್ತನೆಯೇ ಸಂಪೂರ್ಣ ಬದಲಾಗತೊಡಗಿತಂತೆ. ಈ ಬೆಳವಣಿಗೆ ಎಷ್ಟರ ಮಟ್ಟಿಗೆ ಇತ್ತೆಂದರೆ, ಆಯ್ಕೆ ಸಮಿತಿ ಅವರನ್ನು ತಂಡದಿಂದ ಹೊರಗಿಡುವ ಚಿಂತನೆ ನಡೆಸಿತ್ತು ಎನ್ನಲಾಗಿದೆ.

ಇದನ್ನೂ ಓದಿ: ಇಂದಿನಿಂದ Asia Cup 2023 ಶುರು: ಆ ಒಂದು ಪಂದ್ಯ ಪಾಕಿಸ್ತಾನದಲ್ಲಿ ಆಡಬೇಕಿದೆ ಭಾರತ!

ಈ ಸಂದರ್ಭದಲ್ಲಿ ಟೀಂ ಇಂಡಿಯಾದ ಮಾಜಿ ಆಲ್​ ರೌಂಡರ್ ಯುವರಾಜ್ ಸಿಂಗ್ ಸಲಹೆಯೊಂದನ್ನು ಕೊಹ್ಲಿ ಅವರಿಗೆ ನೀಡಿದ್ದರು. ಯುವಿ ನೀಡಿದ ಆ ಸಲಹೆ, ಕೊಹ್ಲಿ ವೃತ್ತಿಜೀವನವನ್ನೇ ಬದಲಾಯಿಸಿತು ಎನ್ನಲಾಗಿದೆ.

ಟೀಂ ಇಂಡಿಯಾದಲ್ಲಿ ಅನೇಕ ಸ್ನೇಹಿತರಿದ್ದಾರೆ. ಅದರಲ್ಲಿ ಯುವರಾಜ್ ಸಿಂಗ್ ಮತ್ತು ವಿರಾಟ್ ಕೊಹ್ಲಿ ಜೋಡಿ ಕೂಡ ಒಂದು. ಆದರೆ ಕ್ರಿಕೆಟ್’ಗೆ ಎಂಟ್ರಿ ಪಡೆದ ಸಂದರ್ಭದಲ್ಲಿ ಕೊಹ್ಲಿಗೆ ಆಟಕ್ಕಿಂತ ಮೋಜು ಮಸ್ತಿಯಲ್ಲಿ ಆಸಕ್ತಿ ಹೆಚ್ಚಿತ್ತು ಎನ್ನಲಾಗಿದೆ. ಆ ಸಂದರ್ಭದಲ್ಲಿ ಗಂಭೀರ ಸಲಹೆಯೊಂದನ್ನು ಯುವಿ ನೀಡಿದ್ದು. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

ಯುವರಾಜ್ ಸಿಂಗ್ ಸಲಹೆ ಹೀಗಿತ್ತು…: “ನಾನು ವಿರಾಟ್ ಜೊತೆಗೆ ಈ ಬಗ್ಗೆ ಮಾತನಾಡಿದ್ದೆ. ನೀನು ವಿಶ್ವ ಶ್ರೇಷ್ಠ ಆಟಗಾರನಾಗಬೇಕು ಎಂದಾದರೆ ನನ್ನನ್ನು ಫಾಲೋ ಮಾಡಬೇಡ. ಬದಲಿಗೆ ಸಚಿನ್ ತೆಂಡೂಲ್ಕರ್ ಅವರನ್ನು ಸ್ಫೂರ್ತಿಯಾಗಿ ತೆಗೆದುಕೊಂಡು, ಅವರಂತೆ ಶಿಸ್ತನ್ನು ಕಾಪಾಡಿಕೋ, ಫಿಟ್ನೆಸ್ ಕಡೆ ಗಮನ ಕೊಡು. ಕಠಿಣ ಅಭ್ಯಾಸ ಮಾಡು”

ಯುವಿ ಹೇಳಿದ ಈ ಮಾತುಗಳು ಕೇಳಿ ಕೊಹ್ಲಿ ಸಂಪೂರ್ಣ ಬದಲಾವಣೆಯತ್ತ ಮುಖ ಮಾಡಿದ್ದರು. ಆ ಬಳಿಕ ಫಿಟ್ನೆಸ್, ಆಟ, ವೃತ್ತಿಜೀವನದ ಕಡೆ ಸಂಪೂರ್ಣ ಒಲವು ತೋರಿಸಿದ ಅವರು ಮುಂದೆ ಬರೆದದ್ದು, ಈಗ ಬರೆಯುತ್ತಿರುವುದು ಎಲ್ಲವೂ ಇತಿಹಾಸವೇ…

ಇದನ್ನೂ ಓದಿ: ಪಾಕಿಸ್ತಾನ ವಿರುದ್ಧದ ODI ಪಂದ್ಯದಲ್ಲಿ ಅತೀ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ ಯಾರು?

ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿ ತಮ್ಮ 500ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡುವ ಮೂಲಕ ಹೊಸ ಸಾಧನೆ ಮಾಡಿದ್ದಾರೆ. ಸದ್ಯ ವಿಶ್ವಕಪ್ ಮತ್ತು ಏಷ್ಯಾಕಪ್ ಟೂರ್ನಿಯ ಸಿದ್ಧತೆಯಲ್ಲಿರುವ ಕಿಂಗ್ ಮೇಲೆ ಅಭಿಮಾನಿ ಬಳಗ ಸೇರಿದಂತೆ ಟೀಂ ಇಂಡಿಯಾ ಅಪಾರ ಭರವಸೆಯನ್ನು ಹೊಂದಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News