India vs Pakistan, Asia Cup-2023 : ಏಷ್ಯಾ ಕಪ್ ಆರಂಭವಾಗಿದೆ. ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ, ಟೂರ್ನಿಯಲ್ಲಿ ತನ್ನ ಮೊದಲ ಪಂದ್ಯವನ್ನು  ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ನಾಳೆ ಆಡಲಿದೆ. ಭಾರತದ ಪ್ಲೇಯಿಂಗ್-11 ನ ಲ್ಲಿ ಒಬ್ಬರಲ್ಲ ಇಬ್ಬರು ಆಟಗಾರರು  ತಂಡದಿಂದ ಹೊರಗುಳಿಯಲಿದ್ದಾರೆ. 


COMMERCIAL BREAK
SCROLL TO CONTINUE READING

ಕ್ಯಾಂಡಿಯಲ್ಲಿ ನಡೆಯಲಿದೆ ಹೈ ವೋಲ್ಟೇಜ್ ಪಂದ್ಯ : 
ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಹೈ ವೋಲ್ಟೇಜ್ ಪಂದ್ಯವು ಸೆಪ್ಟೆಂಬರ್ 2 ರಂದು ಅಂದರೆ ನಾಳೆ ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯಲಿದೆ. ಪಾಕಿಸ್ತಾನ ತಂಡದ ನೇತೃತ್ವವನ್ನು ಬಾಬರ್ ಅಜಮ್  ವಹಿಸಲಿದ್ದು, ರೋಹಿತ್ ಶರ್ಮಾ ಭಾರತ ತಂಡದ ಸಾರಥ್ಯ ವಹಿಸಲಿದ್ದಾರೆ. ಈ ಪಂದ್ಯದ ಪ್ಲೇಯಿಂಗ್-11 ಬಗ್ಗೆ ಕೆಲವು ಮಾಹಿತಿ ಹೊರ ಬಿದ್ದಿದೆ. ಕೆಎಲ್ ರಾಹುಲ್ ಆರಂಭಿಕ ಪಂದ್ಯಗಳಿಂದ ಹೊರಗುಳಿದಿರುವ ಕಾರಣ, ಭಾರತ ತಂಡದ ಬ್ಯಾಟಿಂಗ್ ಕ್ರಮಾಂಕ ಬದಲಾಗಲಿದೆ. ಈ ನಡುವೆ ಇಬ್ಬರು ಆಟಗಾರರು ಟೀಂ ಇಂಡಿಯಾದ ಪ್ಲೇಯಿಂಗ್-11ರಲ್ಲಿ ಸ್ಥಾನ ಪಡೆಯುವುದು ಕಷ್ಟ. 


ಇದನ್ನೂ ಓದಿ : Zurich Diamond League: ಡೈಮಂಡ್ ಲೀಗ್‍ನಲ್ಲಿ ಎಡವಿದ ನೀರಜ್ ಚೋಪ್ರಾ!


ರಾಹುಲ್ ಔಟ್ : 
ಏಷ್ಯಾಕಪ್ ನಲ್ಲಿ ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಆಡಲಿದೆ. ಬಳಿಕ ನೇಪಾಳ ತಂಡವನ್ನು ಎದುರಿಸಲಿದೆ. ಕೆಎಲ್ ರಾಹುಲ್ ಈ ಎರಡೂ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಇದನ್ನು ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡಾ ಖಚಿತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬ್ಯಾಟಿಂಗ್ ಕ್ರಮಾಂಕ ರೋಹಿತ್ ಶರ್ಮಾ ಮತ್ತು ಬಳಗಕ್ಕೆ ತಲೆ ನೋವಾಗಿದೆ. ರಾಹುಲ್ ಆಡದೇ ಇರುವುದರಿಂದ ಇಶಾನ್ ಕಿಶನ್ ವಿಕೆಟ್ ಕೀಪರ್ ಜವಾಬ್ದಾರಿ  ಹೊರಲಿದ್ದಾರೆ.  


ಬದಲಾಗಲಿದೆ ಬ್ಯಾಟಿಂಗ್ ಕ್ರಮಾಂಕ : 
ಒಂದು ವೇಳೆ ಇಶಾನ್ ಕಿಶನ್ ಆರಂಭಿಕರಾಗಿ ಕಣಕ್ಕಿಳಿದರೆ, ಮಧ್ಯಮ ಕ್ರಮಾಂಕದಲ್ಲಿ ಶುಭಮಾನ್ ಗಿಲ್ ಬರಬೇಕಾಗುತ್ತದೆ. ಇಶಾನ್ ಮತ್ತು ಗಿಲ್ ಓಪನಿಂಗ್‌ನಲ್ಲಿ ಬಂದರೆ,  3 ನೇ  ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಬ್ಯಾಂಟಿಂಗ್ ಮಾಡುತ್ತಾರೆ. ಶ್ರೇಯಸ್ ಅಯ್ಯರ್ ಕೂಡಾ ನಾಲ್ಕನೇ ಸ್ಥಾನಕ್ಕೆ ಬದಲಾಗಿ ಐದನೇ ಸ್ಥಾನಕ್ಕೆ ಇಳಿಯಬೇಕಾಗುತ್ತದೆ. ಟೀಂ ಇಂಡಿಯಾಗೆ ಶುಭ ಸುದ್ದಿ ಎಂದರೆ ಶ್ರೇಯಸ್ ಅಯ್ಯರ್ ಮತ್ತು ಜಸ್ಪ್ರೀತ್ ಬುಮ್ರಾ ತಂಡಕ್ಕೆ ಮರಳಿರುವುದು. 


ಇದನ್ನೂ ಓದಿ : World Cup 2023 : ಆಸ್ಟ್ರೇಲಿಯಾ ಪರ ಆಡಲಿದ್ದಾನೆ ಭಾರತದ ಈ ಆಟಗಾರ ! ಚೊಚ್ಚಲ ಪಂದ್ಯದಲ್ಲೇ ಬಿರುಗಾಳಿ ಎಬ್ಬಿಸಿದ ಬೌಲರ್


ಪ್ಲೇಯಿಂಗ್ 11 ರಲ್ಲಿ ಇಬ್ಬರು ಆಟಗಾರರಿಗಿಲ್ಲ ಸ್ಥಾನ : 
ಬ್ಯಾಟಿಂಗ್ ಕ್ರಮಾಂಕ ಎಷ್ಟೇ ಬದಲಾದರೂ, ಪಾಕಿಸ್ತಾನ ವಿರುದ್ಧದ ಭಾರತದ ಪ್ಲೇಯಿಂಗ್-11ರಲ್ಲಿ ಇಬ್ಬರು ಆಟಗಾರರು ತಂಡದಲ್ಲಿ ಇರುವುದಿಲ್ಲ.  ಹೌದು ಸೂರ್ಯಕುಮಾರ್ ಯಾದವ್ ಮತ್ತು ಶಾರ್ದೂಲ್ ಠಾಕೂರ್ ಪ್ಲೇಯಿಂಗ್-11 ನಿಂದ ಹೊರಗುಳಿಯಲಿದ್ದಾರೆ ಎನ್ನಲಾಗುತ್ತಿದೆ. ಶ್ರೇಯಸ್ ಅಯ್ಯರ್ 4 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದು, ಸೂರ್ಯಕುಮಾರ್ ಯಾದವ್ ಭಾರತದ ಪ್ಲೇಯಿಂಗ್ 11 ನಿಂದ ಹೊರಗುಳಿಯಲಿದ್ದಾರೆ. ರೋಹಿತ್ ಅವರನ್ನು ನಂಬರ್-5ರಲ್ಲಿ ಕಳುಹಿಸುವ ಸಾಧ್ಯತೆಯೂ ಇದೆ. ಇದರೊಂದಿಗೆ ಶುಭ್‌ಮನ್ ಮತ್ತು ಇಶಾನ್ ಓಪನ್ ಆಗಲಿದ್ದಾರೆ. ವಿರಾಟ್ ಸಂಖ್ಯೆ-3 ಮತ್ತು ಶ್ರೇಯಸ್ ಸಂಖ್ಯೆ-4. ಆಗಲೂ ಸೂರ್ಯಕುಮಾರ್ ಆಟವಾಡಲು ಸಾಧ್ಯವಾಗುವುದಿಲ್ಲ.ಇನ್ನು ಹಾರ್ದಿಕ್ ಪಾಂಡ್ಯ ಇರುವ ಕಾರಣ ಶಾರ್ದೂಲ್ ಠಾಕೂರ್  ಆಡುವುದು ಸಾಧ್ಯವಾಗುವುದಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.