ನವದೆಹಲಿ: ಹಂಗೇರಿಯ ರಾಜಧಾನಿ ಬುದಾಪೆಸ್ಟ್‍ನಲ್ಲಿ ಇತ್ತೀಚೆಗಷ್ಟೇ ಮುಕ್ತಾಯವಾದ ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್‌ಷಿಪ್‍ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದ ಗೋಲ್ಡನ್ ಬಾಯ್ ನೀರಜ್ ಚೋಪ್ರಾ ಜೂರಿಚ್ ಡೈಮಂಡ್ ಲೀಗ್‍ನಲ್ಲಿ ಎಡವಿದ್ದಾರೆ. 85.71 ಮೀಟರ್ ದೂರ ಭರ್ಚಿ ಎಸೆದ ಅವರು 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ.
ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಝೆಕ್ ಗಣರಾಜ್ಯದ ಜಾಕೊಬ್ ವಾಡ್ಲಿಚ್ 85.86 ಮೀಟರ್ ದೂರ ಜಾವೆಲಿನ್ ಥ್ರೋ ಮಾಡುವ ಮೂಲಕ ಮೊದಲ ಸ್ಥಾನಕ್ಕೇರಿದ್ದಾರೆ. ಜರ್ಮಿನಿಯ ಜೂಲಿಯನ್ ವೆಬರ್ ಅವರು 85.04 ಮೀಟರ್ ಭರ್ಜಿ ಎಸೆದು 3ನೇ ಸ್ಥಾನ ಪಡೆದು ಕಂಚಿನ ಪದಕಕ್ಕೆ ಮುತ್ತಿಕ್ಕಿದರು.
ಇದನ್ನೂ ಓದಿ: Photo Gallery: ವೇಗವಾಗಿ 19 ಶತಕಗಳನ್ನು ಗಳಿಸಿದ ಕ್ರಿಕೆಟ್ ಆಟಗಾರರು
ಬುಡಾಪೆಸ್ಟ್ ನಲ್ಲಿ ನಡೆದಿದ್ದ ವಿಶ್ವ ಅಥ್ಲೆಟಿಕ್ಸ್‍ನ ಪುರುಷರ ವಿಭಾಗದಲ್ಲಿ ನೀರಜ್ ಜೋಪ್ರಾ ಅವರು 88.17 ಮೀಟರ್ ದೂರ ಜಾವೆಲಿನ್ ಥ್ರೋ ಮಾಡಿ ಚಿನ್ನದ ಪದಕ ಜಯಿಸಿದ್ದರು. 2022ರಲ್ಲಿ ಬೆಳ್ಳಿ ಪದಕ ಗಳಿಸಿದ್ದ ಅವರು ಈ ಸಾಧನೆ ಮಾಡಿದ ಮೊದಲ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
Zurich Diamond League: Neeraj Chopra secures second position in men's javelin throw
Read @ANI Story | https://t.co/RPqzsB1Nr4#NeerajChopra #ZurichDL #ZurichDiamondLeague #athletics pic.twitter.com/RpwWCAV74q
— ANI Digital (@ani_digital) August 31, 2023
ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ತಮ್ಮ ಮೊದಲ ಎಸೆತದಲ್ಲಿ 80.79 ಮೀಟರ್ ದೂರ ಭರ್ಜಿ ಎಸೆದರೆ, 4ನೇ ಪ್ರಯತ್ನದಲ್ಲಿ 85.22 ಮೀಟರ್, 6ನೇ ಪ್ರಯತ್ನದಲ್ಲಿ 85.71 ಮೀಟರ್ ದೂರ ಎಸೆದು ಜಾಕೊಬ್ ವಾಡ್ಲಿಚ್‍ಗೆ ಪ್ರಬಲ ಪೈಪೋಟಿ ನೀಡಿದ್ದರು. ತಮ್ಮ 2, 3 ಮತ್ತು 5ನೇ ಪ್ರಯತ್ನದಲ್ಲಿ ಅವರು ಫೌಲ್ ಮಾಡಿದ್ದರು.
ಇದನ್ನೂ ಓದಿ: World Cup 2023 : ಆಸ್ಟ್ರೇಲಿಯಾ ಪರ ಆಡಲಿದ್ದಾನೆ ಭಾರತದ ಈ ಆಟಗಾರ ! ಚೊಚ್ಚಲ ಪಂದ್ಯದಲ್ಲೇ ಬಿರುಗಾಳಿ ಎಬ್ಬಿಸಿದ ಬೌಲರ್
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.