Asian Games 2023: 2023ರ ಏಷ್ಯನ್ ಗೇಮ್ಸ್‌’ನಲ್ಲಿ ಭಾರತ ಹಾಕಿ ತಂಡ ಫೈನಲ್‌’ನಲ್ಲಿ ಜಪಾನ್ ತಂಡವನ್ನು ಸೋಲಿಸುವ ಮೂಲಕ ಚಿನ್ನದ ಪದಕ ಗೆದ್ದಿದೆ. ಶುಕ್ರವಾರ ಅಂದರೆ ಇಂದು ನಡೆದ ಫೈನಲ್ ಪಂದ್ಯದಲ್ಲಿ ಭಾರತ 5-1 ಗೋಲುಗಳಿಂದ ಜಪಾನ್ ತಂಡವನ್ನು ಸೋಲಿಸಿತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ವಿಶ್ವಕಪ್ ಪಂದ್ಯಗಳಿಗೆ ಆತಿಥ್ಯ ವಹಿಸುವ ಸ್ಟೇಡಿಯಂಗಳಲ್ಲಿ ಫ್ರೀ ಆಗಿ ಸಿಗಲಿದೆ ಈ ವಸ್ತು!


ಈ ಗೆಲುವಿನ ಮೂಲಕ ಒಂಬತ್ತು ವರ್ಷಗಳ ನಂತರ ಏಷ್ಯನ್ ಗೇಮ್ಸ್‌’ನಲ್ಲಿ ಭಾರತ ಹಾಕಿ ಪಂದ್ಯದಲ್ಲಿ ಚಿನ್ನದ ಪದಕ ಗೆದ್ದಿದೆ. ಈ ಗೆಲುವಿನೊಂದಿಗೆ ಭಾರತವು ಪ್ಯಾರಿಸ್ ಒಲಿಂಪಿಕ್ಸ್ 2024 ರ ಕೋಟಾವನ್ನು ಸಹ ಪಡೆದುಕೊಂಡಿದೆ.


ಬಾಲಿವುಡ್ ನಟಿ ಕಂಗನಾ ರಣಾವತ್ ಮದುವೆ..! ‘ರಾಣಿ’ಯ ವರಿಸುವ ವರನ್ಯಾರು ಗೊತ್ತಾ?


ಈ ಪಂದ್ಯದ ಆರಂಭದಲ್ಲಿ ಉಭಯ ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಪಂದ್ಯದ ಮೊದಲ ಕ್ವಾರ್ಟರ್ ಗೋಲು ರಹಿತವಾಗಿ ಉಳಿದಿತ್ತು. ಮಂದೀಪ್ ಸಿಂಗ್ ಎರಡನೇ ಕ್ವಾರ್ಟರ್‌’ನಲ್ಲಿ ಮೊದಲ ಗೋಲು ಗಳಿಸಿದರು. ವಿರಾಮದ ವೇಳೆಗೆ ಸ್ಕೋರ್ 1-0 ಆಗಿತ್ತು. ಮೂರನೇ ಕ್ವಾರ್ಟರ್‌’ನಲ್ಲಿ ಭಾರತ ಇನ್ನೆರಡು ಗೋಲು ಗಳಿಸಿ 3-0 ಮುನ್ನಡೆ ಸಾಧಿಸಿತು. ಮೂರನೇ ಕ್ವಾರ್ಟರ್‌’ನಲ್ಲಿ ಹರ್ಮನ್‌ಪ್ರೀತ್ ಮತ್ತು ಅಮಿತ್ ರೋಹಿದಾಸ್ ಗೋಲು ದಾಖಲಿಸಿದರು. ಇನ್ನು ಮೂರನೇ ಕ್ವಾರ್ಟರ್‌’ನ ಅಂತ್ಯಕ್ಕೆ 3-0 ಮುನ್ನಡೆ ಸಾಧಿಸಿದರೆ, ನಾಲ್ಕನೇ ಕ್ವಾರ್ಟರ್‌’ನಲ್ಲಿ ಅಭಿಷೇಕ್ ಮತ್ತೊಂದು ಗೋಲು ಬಾರಿಸಿ ಭಾರತದ ಮುನ್ನಡೆಯನ್ನು 4-0ಗೆ ಹೆಚ್ಚಿಸಿದರು. ಈ ಕ್ವಾರ್ಟರ್‌’ನಲ್ಲಿ ಜಪಾನ್ ಒಂದು ಗೋಲು ಗಳಿಸಿತು. ಆದರೆ ಹರ್ಮನ್‌’ಪ್ರೀತ್ ಭಾರತದ ಐದನೇ ಗೋಲು ಗಳಿಸಿ ಮುನ್ನಡೆಯನ್ನು 5-1ಕ್ಕೆ ಹೆಚ್ಚಿಸಿದರು. ಅಂತಿಮವಾಗಿ ಟೀಮ್ ಇಂಡಿಯಾ 9 ವರ್ಷಗಳ ಬಳಿಕ ಚಿನ್ನ ಮುಡಿಗೇರಿಸಿಕೊಂಡಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ