ವಿಶ್ವಕಪ್ ಪಂದ್ಯಗಳಿಗೆ ಆತಿಥ್ಯ ವಹಿಸುವ ಸ್ಟೇಡಿಯಂಗಳಲ್ಲಿ ಫ್ರೀ ಆಗಿ ಸಿಗಲಿದೆ ಈ ವಸ್ತು!

ODI World Cup 2023: ಏಕದಿನ ವಿಶ್ವಕಪ್‌’ಗೆ ಕಳೆದ ದಿನ ಅಂದರೆ ಅಕ್ಟೋಬರ್ 5ರಂದು ಚಾಲನೆ ಸಿಕ್ಕಿದೆ. ಭಾರತದ ಆತಿಥ್ಯದಲ್ಲಿ ನಡೆಯಲಿರುವ ವಿಶ್ವ ಕ್ರಿಕೆಟ್ ಮಹಾಟೂರ್ನಿಯ ಪ್ರಾರಂಭಕ್ಕೂ ಮುನ್ನ ಬಿಸಿಸಿಐ ಈ ಬಗ್ಗೆ ಮಾಹಿತಿ ನೀಡಿದೆ.  

Written by - Bhavishya Shetty | Last Updated : Oct 6, 2023, 05:23 PM IST
    • ಏಕದಿನ ವಿಶ್ವಕಪ್‌’ಗೆ ಕಳೆದ ದಿನ ಅಂದರೆ ಅಕ್ಟೋಬರ್ 5ರಂದು ಚಾಲನೆ ಸಿಕ್ಕಿದೆ.
    • ಕ್ರಿಕೆಟ್ ಮಹಾಟೂರ್ನಿಯ ಪ್ರಾರಂಭಕ್ಕೂ ಮುನ್ನ ಬಿಸಿಸಿಐ ಈ ಬಗ್ಗೆ ಮಾಹಿತಿ ನೀಡಿದೆ
    • ಈ ಬಗ್ಗೆ ಮಾತನಾಡಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ಜಯ್ ಶಾ
ವಿಶ್ವಕಪ್ ಪಂದ್ಯಗಳಿಗೆ ಆತಿಥ್ಯ ವಹಿಸುವ ಸ್ಟೇಡಿಯಂಗಳಲ್ಲಿ ಫ್ರೀ ಆಗಿ ಸಿಗಲಿದೆ ಈ ವಸ್ತು! title=
World Cup 2023

ODI World Cup 2023: ಈಗಾಗಲೇ ವಿಶ್ವಕಪ್ ಮಹಾಟೂರ್ನಿ ಆರಂಭವಾಗಿದ್ದು, ಎರಡನೇ ದಿನಕ್ಕೆ ಕಾಲಿಟ್ಟಿದ್ದೇವೆ, ಇಂದು ಪಾಕಿಸ್ತಾನ ಮತ್ತು ನೆದರ್ಲ್ಯಾಂಡ್ ತಂಡಗಳು ಸೆಣಸಾಡುತ್ತಿದೆ. ಇನ್ನು ವಿಶ್ವಕಪ್‌ ಪಂದ್ಯಗಳನ್ನು ವೀಕ್ಷಿಸಲು ಮೈದಾನಗಳಿಗೆ ಆಗಮಿಸುವ ಪ್ರೇಕ್ಷಕರಿಗೆ ಉಚಿತವಾಗಿ ಕುಡಿಯುವ ನೀರನ್ನು ಒದಗಿಸುವುದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಈಗಾಗಲೇ ತಿಳಿಸಿದ್ದಾರೆ.

ಇದನ್ನೂ ಓದಿ:  ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಲಿರುವ 4 ತಂಡಗಳನ್ನು ಹೆಸರಿಸಿದ ಸಚಿನ್ ತೆಂಡೂಲ್ಕರ್

ಏಕದಿನ ವಿಶ್ವಕಪ್‌’ಗೆ ಕಳೆದ ದಿನ ಅಂದರೆ ಅಕ್ಟೋಬರ್ 5ರಂದು ಚಾಲನೆ ಸಿಕ್ಕಿದೆ. ಭಾರತದ ಆತಿಥ್ಯದಲ್ಲಿ ನಡೆಯಲಿರುವ ವಿಶ್ವ ಕ್ರಿಕೆಟ್ ಮಹಾಟೂರ್ನಿಯ ಪ್ರಾರಂಭಕ್ಕೂ ಮುನ್ನ ಬಿಸಿಸಿಐ ಈ ಬಗ್ಗೆ ಮಾಹಿತಿ ನೀಡಿದೆ.  

ಈ ಬಗ್ಗೆ ಮಾತನಾಡಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ಜಯ್ ಶಾ, “ಭಾರತದ ಎಲ್ಲಾ ಕ್ರೀಡಾಂಗಣಗಳಿಗೆ ಪಂದ್ಯ ವೀಕ್ಷಿಸಲು ಬರುವ ಅಭಿಮಾನಿಗಳಿಗೆ ಉಚಿತವಾಗಿ ಮಿನರಲ್‌ ಮತ್ತು ಪ್ಯಾಕೇಜ್ಡ್ ಕುಡಿಯುವ ನೀರನ್ನು ಒದಗಿಸಲಾಗುತ್ತದೆ” ಎಂದಿದ್ದಾರೆ, ಈ ವಿಷಯವನ್ನು ತಮ್ಮ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಜಿಯೋ ಮಾರ್ಟ್’ನ ಬ್ರಾಂಡ್ ಅಂಬಾಸಿಡರ್ ಮಹೇಂದ್ರ ಸಿಂಗ್ ಧೋನಿ

ಇದುವರೆಗೆ ಭದ್ರತಾ ದೃಷ್ಟಿಯಿಂದ ಕ್ರೀಡಾಂಗಣದೊಳಗೆ ನೀರಿನ ಬಾಟಲಿಗಳನ್ನು ತೆಗೆದುಕೊಂಡು ಹೋಗಲು ಅವಕಾಶ ಇರಲಿಲ್ಲ. ಸ್ಟೇಡಿಯಂ ಒಳಗೆ ಖರೀದಿಸಲು ಮಾತ್ರ ಅವಕಾಶ ಇತ್ತು. ಇನ್ನು ಅಲ್ಲಿ ಖರೀದಿಸುವ ನೀರಿನ ಬಾಟಲಿಗಳ ಬೆಲೆ ದುಬಾರಿ. ಆದರೆ ಈ ಬಾರಿ ಆ ಸಮಸ್ಯೆಗೆ ಬ್ರೇಕ್ ಬೀಳಲಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News