ನವದೆಹಲಿ: ಏಷ್ಯನ್ ಟ್ರ್ಯಾಕ್ ಚಾಂಪಿಯನ್‌ಶಿಪ್‌ನ ಮುಕ್ತಾಯದ ದಿನದಂದು ಸ್ಪ್ರಿಂಟ್ ಈವೆಂಟ್‌ನಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಸೀನಿಯರ್ ವಿಭಾಗದ ಕಾಂಟಿನೆಂಟಲ್ ಪಂದ್ಯಾವಳಿಯಲ್ಲಿ ಬೆಳ್ಳಿ ಗೆದ್ದ ಮೊದಲ ಭಾರತೀಯ ಸೈಕ್ಲಿಸ್ಟ್ ಎಂಬ ಹೆಗ್ಗಳಿಕೆಗೆ ರೊನಾಲ್ಡೊ ಸಿಂಗ್ ಪಾತ್ರರಾಗಿದ್ದಾರೆ.


COMMERCIAL BREAK
SCROLL TO CONTINUE READING

ರೊನಾಲ್ಡೊ ಅವರ ಸಾಧನೆಯು ಕಾಂಟಿನೆಂಟಲ್ ಚಾಂಪಿಯನ್‌ಶಿಪ್‌ನಲ್ಲಿ ಯಾವುದೇ ಭಾರತೀಯ ಸೈಕ್ಲಿಸ್ಟ್‌ನ ಅತ್ಯುತ್ತಮ ಪ್ರದರ್ಶನವಾಗಿದೆ.


'ಇದು (ರೊನಾಲ್ಡೊ ) ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಗೆದ್ದ ಮೊದಲ ಬೆಳ್ಳಿಯಾಗಿದೆ. ನಮ್ಮ ಇತಿಹಾಸದಲ್ಲಿ ಯಾವುದೇ ಭಾರತೀಯ ಚಿನ್ನ ಗೆದ್ದಿಲ್ಲ, ಆದ್ದರಿಂದ ಅವರ ಬೆಳ್ಳಿ ಗೆದ್ದ ಸಾಧನೆ ಕಾಂಟಿನೆಂಟಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯರಿಂದ ಇದುವರೆಗಿನ ಅತ್ಯುತ್ತಮ ಪ್ರದರ್ಶನವಾಗಿದೆ" ಎಂದು ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಓಂಕಾರ್ ಸಿಂಗ್ ಪಿಟಿಐಗೆ ತಿಳಿಸಿದರು.


Shocking News: ಹಳ್ಳದಲ್ಲಿ ತೇಲಿಬಂದ ಭ್ರೂಣಗಳು! ಬೆಚ್ಚಿಬಿದ್ದ ಬೆಳಗಾವಿ ಜನರು


ಬುಧವಾರದಂದು ರೊನಾಲ್ಡೊ ಅವರ ಬೆಳ್ಳಿ ಚಾಂಪಿಯನ್‌ಶಿಪ್‌ನಲ್ಲಿ ಅವರ ಮೂರನೇ ಪದಕವಾಗಿದೆ.ಅವರು ಈ ಹಿಂದೆ 1 ಕಿಮೀ ಟೈಮ್ ಟ್ರಯಲ್ ಮತ್ತು ಟೀಮ್ ಸ್ಪ್ರಿಂಟ್ ಸ್ಪರ್ಧೆಗಳಲ್ಲಿ ಕಂಚಿನ ಪದಕಗಳನ್ನು ಗೆದ್ದಿದ್ದರು.


ಇದನ್ನೂ ಓದಿ: ಕರ್ನಾಟಕ ಶಿಕ್ಷಣ ಇಲಾಖೆಗೆ ‘ಸಾಕ್ಷರತಾ ಇಲಾಖೆ’ ಎಂದು ಮರು ನಾಮಕರಣ


"ಚಿನ್ನವು ನನ್ನ ಮನಸ್ಸಿನಲ್ಲಿತ್ತು, ಆದರೆ ನಾನು ಮೊದಲ ಬೆಳ್ಳಿಯೊಂದಿಗೆ ಸಂತೋಷವಾಗಿದ್ದೇನೆ.ಇದು ನನ್ನ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನವಾಗಿದೆ.ಪ್ರತಿ ಪಂದ್ಯಾವಳಿಯಲ್ಲಿ ನಾನು ನನ್ನ ತಂತ್ರವನ್ನು ಸುಧಾರಿಸಿದೆ, ಇದು ಅತ್ಯಂತ ಮುಖ್ಯವಾಗಿದೆ" ಎಂದು ರೊನಾಲ್ಡೊ ಹೇಳಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.