Mitchell Starc IPL Records: ಮಿಚೆಲ್ ಸ್ಟಾರ್ಕ್ 9 ವರ್ಷಗಳ ನಂತರ ಐಪಿಎಲ್‌ನಲ್ಲಿ ಬಿರುಸಿನ ಆಟ ಪ್ರದರ್ಶಿಸಲು ಸಿದ್ಧರಾಗಿದ್ದಾರೆ. ಐಪಿಎಲ್‌ನಲ್ಲಿ ಮಿಚೆಲ್ ಸ್ಟಾರ್ಕ್ ಅವರನ್ನು ನೋಡಲು ಕ್ರಿಕೆಟ್ ಅಭಿಮಾನಿಗಳು ಕಾತುರರಾಗಿದ್ದರು. ಮಾರ್ಚ್ 22 ರಿಂದ ಐಪಿಎಲ್ 2024‌ ಪ್ರಾರಂಭವಾಗಲಿದೆ. ಐಪಿಎಲ್ 2024 ಗಾಗಿ ನಡೆದ ಹರಾಜಿನಲ್ಲಿ ಎರಡು ಬಾರಿ ಚಾಂಪಿಯನ್ ಆದ ಕೋಲ್ಕತ್ತಾ ನೈಟ್ ರೈಡರ್ಸ್ 24 ಕೋಟಿ 75 ಲಕ್ಷಕ್ಕೆ ಮಿಚೆಲ್ ಸ್ಟಾರ್ಕ್ ಅವರನ್ನು ಖರೀದಿಸಿತ್ತು. 


COMMERCIAL BREAK
SCROLL TO CONTINUE READING

8 ವರ್ಷಗಳಿಂದ ಐಪಿಎಲ್ ನಿಂದ ದೂರ:


ಮಿಚೆಲ್ ಸ್ಟಾರ್ಕ್ ಕಳೆದ 8 ವರ್ಷಗಳಿಂದ ಐಪಿಎಲ್ ನಿಂದ ದೂರವೇ ಉಳಿದಿದ್ದರು. ಮಿಚೆಲ್ ಸ್ಟಾರ್ಕ್ 2015 ರಿಂದ ಐಪಿಎಲ್‌ನ ಭಾಗವಾಗಲಿಲ್ಲ. ಮಿಚೆಲ್ ಸ್ಟಾರ್ಕ್ ಯಾವಾಗಲೂ ಐಪಿಎಲ್ ಮತ್ತು ಹಣದ ಮೊದಲು ತನ್ನ ದೇಶವನ್ನು ಆಯ್ಕೆ ಮಾಡುತ್ತಾರೆ. ಆದರೆ, ಈ ಬಾರಿ ಮಿಚೆಲ್ ಸ್ಟಾರ್ಕ್ ಐಪಿಎಲ್ 2024ರಲ್ಲಿ ಆಡಲಿದ್ದಾರೆ. 


ಇದನ್ನೂ ಓದಿ: MIW vs RCBW: ರಿಚಾ ಘೋಷ್, ಎಲ್ಸೆ ಪೆರಿ ಅಬ್ಬರಕ್ಕೆ ಬೆಚ್ಚಿದ ಮುಂಬೈ ಇಂಡಿಯನ್ಸ್ ಮಹಿಳಾ ತಂಡ...! 


ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್: 


ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಇದ್ದ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡ 2015 ಮತ್ತು 2023 ರಲ್ಲಿ ODI ವಿಶ್ವಕಪ್ ಮತ್ತು 2021 ರಲ್ಲಿ T20 ವಿಶ್ವಕಪ್ ಗೆದ್ದಿತು. ಮಿಚೆಲ್ ಸ್ಟಾರ್ಕ್  ಐಪಿಎಲ್ 2022 ರಲ್ಲಿ ಪುನರಾಗಮನದ ಸುಳಿವು ನೀಡಿದ್ದರು, ಆದರೆ ಮೆಗಾ ಹರಾಜಿನ ಮುಂಚೆಯೇ ಹಿಂದೆ ಸರಿದಿದ್ದರು. ಮಿಚೆಲ್ ಸ್ಟಾರ್ಕ್ ಯಾವಾಗಲೂ ಐಪಿಎಲ್‌ನಲ್ಲಿ ಆಡುವ ಬದಲು ಆಸ್ಟ್ರೇಲಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಆದ್ಯತೆ ನೀಡುತ್ತಾರೆ. ಇದೇ ಕಾರಣಕ್ಕೆ ಇಷ್ಟು ವರ್ಷ ಅವರು ಐಪಿಎಲ್‌ ನಿಂದ ದೂರ ಉಳಿಯಬೇಕಾಯಿತು.


2016ರ ಐಪಿಎಲ್ ಸೀಸನ್‌ನಲ್ಲಿ ಗಾಯ :


ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಕೊನೆಯ ಬಾರಿ ಅಂದರೆ ಐಪಿಎಲ್ 2015 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಕ್ರಿಕೆಟ್ ಆಡಿದ್ದರು. ಆಗ ವಿರಾಟ್ ಕೊಹ್ಲಿ ತಂಡದ ನಾಯಕರಾಗಿದ್ದರು. ಮಿಚೆಲ್ ಸ್ಟಾರ್ಕ್ 2014 ಮತ್ತು 2015ರಲ್ಲಿ RCB ಪರ IPL ಆಡಿದ್ದರು. ಇದಾದ ಬಳಿಕ 2016ರ ಐಪಿಎಲ್ ಸೀಸನ್‌ನಲ್ಲಿ ಗಾಯದ ಸಮಸ್ಯೆಯಿಂದಾಗಿ ಆಡಿರಲಿಲ್ಲ. ಇದರ ನಂತರ RCB ಮಿಚೆಲ್ ಸ್ಟಾರ್ಕ್ ಅವರನ್ನು ಬಿಡುಗಡೆ ಮಾಡಿತು.


ಇದನ್ನೂ ಓದಿ: ಮೊಹಮ್ಮದ್ ಶಮಿ ಹೆಲ್ತ್ ಬುಲೆಟಿನ್ ಬಿಡುಗಡೆ: ಯಶಸ್ವಿ ಶಸ್ತ್ರ ಚಿಕಿತ್ಸೆ ಬಳಿಕ ಹೇಗಿದ್ದಾರೆ ಸ್ಟಾರ್ ಕ್ರಿಕೆಟಿಗ? 


ಮಿಚೆಲ್‌ ಸ್ಟಾರ್ಕ್ ಅತ್ಯುತ್ತಮ ದಾಖಲೆ : 


2018 ರಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ಮಿಚೆಲ್ ಸ್ಟಾರ್ಕ್ ಅವರನ್ನು ಖರೀದಿಸಿತು, ಆದರೆ ನಂತರ ಸ್ಟಾರ್ಕ್ ಐಪಿಎಲ್‌ನಲ್ಲಿ ಆಡಲು ನಿರಾಕರಿಸಿದರು. 2019 ರಲ್ಲಿ, ಮಿಚೆಲ್ ಸ್ಟಾರ್ಕ್ ಗಾಯದ ಕಾರಣ ಐಪಿಎಲ್ ತೊರೆದರು. 2020 ರಲ್ಲಿಯೂ ಸಹ, ಅನೇಕ ಐಪಿಎಲ್ ತಂಡಗಳು ಮಿಚೆಲ್ ಸ್ಟಾರ್ಕ್ ಬಗ್ಗೆ ಆಸಕ್ತಿ ತೋರಿಸಿದ್ದವು. ಆದರೆ ಮಿಚೆಲ್ ಸ್ಟಾರ್ಕ್ ಐಪಿಎಲ್ ಆಡಲು ಒಪ್ಪಲಿಲ್ಲ. ಮಿಚೆಲ್ ಸ್ಟಾರ್ಕ್ 27 ಐಪಿಎಲ್ ಪಂದ್ಯಗಳಲ್ಲಿ 7.17 ಎಕಾನಮಿ ದರದಲ್ಲಿ 34 ವಿಕೆಟ್ ಪಡೆದಿದ್ದಾರೆ. 15 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಬಳಿಸಿರುವುದು ಸ್ಟಾರ್ಕ್ ಅವರ ಅತ್ಯುತ್ತಮ ದಾಖಲೆಯಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.