2 ಬೌಲ್ಡ್, 2 LBW, ಒಂದೇ ಪಂದ್ಯದಲ್ಲಿ ಡಬಲ್ ಹ್ಯಾಟ್ರಿಕ್ ವಿಕೆಟ್! 112 ವರ್ಷಗಳಿಂದ ಯಾರೂ ಬ್ರೇಕ್ ಮಾಡದ ದಾಖಲೆಯ ಸೃಷ್ಟಿಕರ್ತ ಈ ದಿಗ್ಗಜ ಲೆಗ್ ಸ್ಪಿನ್ನರ್
Australian leg-spinner Jimmy Mathews: ಪಂದ್ಯವೊಂದರಲ್ಲಿ ಡಬಲ್ ಹ್ಯಾಟ್ರಿಕ್ ವಿಕೆಟ್ ಪಡೆದ ದಾಖಲೆ ಇದಾಗಿದೆ. ಈ ದಾಖಲೆ ರಚಿಸಿದ್ದು 1912 ರಲ್ಲಿ ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಜಿಮ್ಮಿ ಮ್ಯಾಥ್ಯೂಸ್. ಜಿಮ್ಮಿ ಈ ಸಾಧನೆ ಮಾಡಿದ ಏಕೈಕ ಬೌಲರ್.
Unbreakable test Record: ಕ್ರಿಕೆಟ್ ಆಟದಲ್ಲಿ ಒಂದಲ್ಲ ಒಂದು ದಾಖಲೆಗಳು ಸೃಷ್ಟಿಯಾಗುತ್ತವೆ, ಅಷ್ಟೇ ಪ್ರಮಾಣದಲ್ಲಿ ಬ್ರೇಕ್ ಕೂಡ ಆಗುತ್ತವೆ. ಆದರೆ ಬ್ರೇಕ್ ಮಾಡಲೂ ಸಾಧ್ಯವೇ ಆಗದ ಕೆಲ ದಾಖಲೆಗಳಿವೆ. ಅಂತಹ ದಾಖಲೆಗಳಲ್ಲಿ 112 ವರ್ಷಗಳ ಕಾಲ ಅಜರಾಮರವಾಗಿ ಉಳಿದಿರುವ ಈ ದಾಖಲೆಯೂ ಒಂದು.
ಇದನ್ನೂ ಓದಿ: ವಿದ್ಯೆ ಕಲಿಯಿರಿ ಅಂತಾ ಶಾಲೆಗೆ ಕಳುಹಿಸಿದ್ರೆ... ಈ ವಿದ್ಯಾರ್ಥಿಗಳು! ವಿಡಿಯೋ ನೋಡಿ
ಪಂದ್ಯವೊಂದರಲ್ಲಿ ಡಬಲ್ ಹ್ಯಾಟ್ರಿಕ್ ವಿಕೆಟ್ ಪಡೆದ ದಾಖಲೆ ಇದಾಗಿದೆ. ಈ ದಾಖಲೆ ರಚಿಸಿದ್ದು 1912 ರಲ್ಲಿ ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಜಿಮ್ಮಿ ಮ್ಯಾಥ್ಯೂಸ್. ಜಿಮ್ಮಿ ಈ ಸಾಧನೆ ಮಾಡಿದ ಏಕೈಕ ಬೌಲರ್.
ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಪಂದ್ಯದಲ್ಲಿ ಜಿಮ್ಮಿ ಮ್ಯಾಥ್ಯೂಸ್ ತಮ್ಮ ಬೌಲಿಂಗ್ ಮೂಲಕ ಸಂಚಲನ ಮೂಡಿಸಿದ್ದರು. ಈ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್ʼಗಳಲ್ಲಿ ಹ್ಯಾಟ್ರಿಕ್ ವಿಕೆಟ್‌ಗಳನ್ನು ಕಬಳಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು. ಮೊದಲ ಇನ್ನಿಂಗ್ಸ್ʼನಲ್ಲಿ ಆರ್ ಬ್ಯೂಮಾಂಟ್, ಎಸ್ ಜೆ ಪೆಗ್ಲರ್ ಮತ್ತು ಟಿಎ ವಾರ್ಡ್ʼರನ್ನು ಔಟ್ ಮಾಡಿದ್ದರೆ, ಆದರೆ ಎರಡನೇ ಇನ್ನಿಂಗ್ಸ್ʼನಲ್ಲಿ ಎಚ್ ಡಬ್ಲ್ಯೂ ಟೇಲರ್, ಆರ್ ಒ ಶ್ವಾರ್ಟ್ಜ್ ಮತ್ತು ಟಿಎ ವಾರ್ಡ್ʼಗೆ ಪೆವಿಲಿಯನ್ ಹಾದಿ ತೋರಿಸಿದ್ದರು.
ಎರಡೂ ಇನ್ನಿಂಗ್ಸ್ʼಗಳಲ್ಲಿ ಹ್ಯಾಟ್ರಿಕ್ ಮಾತ್ರವಲ್ಲ, ಮ್ಯಾಥ್ಯೂಸ್ ಅವರ ವಿಕೆಟ್ʼಗಳಲ್ಲಿ ಫೀಲ್ಡರ್ ಕೊಡುಗೆ ಇರಲಿಲ್ಲ ಎಂಬ ಅಂಶವೂ ಗಮನಿಸಿಬೇಕಾದ್ದು. ಅಂದರೆ ಈ ಎರಡೂ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದು 2 ಕ್ಲೀನ್ ಬೌಲ್ಡ್ ಮಾಡಿ, ಮತ್ತೆರಡು ಸ್ವತಃ ಕ್ಯಾಚ್ ಪಡೆದು.
ಇದನ್ನೂ ಓದಿ: ರಾತ್ರಿ ವೇಳೆ ತಪ್ಪಿಯೂ ಸಹ ಈ ದಿಕ್ಕಿಗೆ ಕಾಲು ಹಾಕಿ ಮಲಗಬೇಡಿ: ಮನೆ ಹಿರಿಯನ ಆಯಸ್ಸಿಗೆ ಬರುತ್ತೆ ಆಪತ್ತು; ಬಡತನ ಹೆಚ್ಚುತ್ತೆ!
ಮ್ಯಾಥ್ಯೂಸ್ ಅವರ ಕ್ರಿಕೆಟ್ ಜೀವನವು ಸುದೀರ್ಘವೇನಾಗಿರಲಿಲ್ಲ. ಆಸ್ಟ್ರೇಲಿಯಾ ಪರ ಕೇವಲ 8 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು, 16 ವಿಕೆಟ್ʼಗಳನ್ನು ಪಡೆದಿದ್ದರು. 1912 ರಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಆಡಿದ್ದರು. ಇನ್ನು ಜಿಮ್ಮಿ ಮ್ಯಾಥ್ಯೂಸ್ 1943ರಲ್ಲಿ ನಿಧನರಾಗಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.