WTC Final 2023: ಟೀಂ ಇಂಡಿಯಾ ಸತತ ಎರಡನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ನ (WTC Final 2023) ಅಂತಿಮ ಪಂದ್ಯವನ್ನು ಆಡುತ್ತಿದೆ. ಓವಲ್‌ ನಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳು ಮುಖಾಮುಖಿಯಾಗಿವೆ. ಈ ನಡುವೆ ದೊಡ್ಡ ಸುದ್ದಿಯೊಂದು ಹೊರಬಿದ್ದಿದ್ದು, ಭಾರತದ ತಂಡದಲ್ಲಿ ಆಟವಾಡಿದ್ದ ಕ್ರಿಕೆಟಿಗ ಇದ್ದಕ್ಕಿದ್ದಂತೆ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದಾನೆ. ಈ ಆಟಗಾರ IPL 2023 ರಲ್ಲಿ ಪಂಜಾಬ್ ಕಿಂಗ್ಸ್ (PBKS) ತಂಡದ ಭಾಗವಾಗಿ ಆಟವಾಡಿದ್ದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕನ್ನಡದಲ್ಲಿ ಬರ್ತಿದೆ ಗುಜರಾತಿ ಸಿನಿಮಾ; ʼರಾಯರು ಬಂದರು ಮಾವನ ಮನೆಗೆʼ...!


ಐಪಿಎಲ್ 2023 ರಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕಾಗಿ ಆಡಿದ ಹರ್ಪ್ರೀತ್ ಸಿಂಗ್ ಭಾಟಿಯಾ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. ಈ ಆಟಗಾರನನ್ನು ಐಪಿಎಲ್ 2023 ರ ಮಿನಿ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ 40 ಲಕ್ಷ ರೂಪಾಯಿಗೆ ಖರೀದಿಸಿತ್ತು.


ಮ್ಯಾಥ್ಯೂ ವೇಡ್ ಐಪಿಎಲ್ 2022 ರಲ್ಲಿ ಗುಜರಾತ್ ಟೈಟಾನ್ಸ್ ಪರ ಆಡಿದ್ದರು. ಅವರು 10 ವರ್ಷ 312 ದಿನಗಳ ನಂತರ ಲೀಗ್‌ ನಲ್ಲಿ ಪುನರಾಗಮನ ಮಾಡಿದ್ದರು. ತಮ್ಮ ಕೊನೆಯ ಐಪಿಎಲ್ ಪಂದ್ಯವನ್ನು 2011 ರಲ್ಲಿ ಆಡಿದ್ದರು. ಆದರೆ ಹರ್‌ಪ್ರೀತ್ ಸಿಂಗ್ ಭಾಟಿಯಾ 10 ವರ್ಷ ಮತ್ತು 332 ದಿನಗಳ ನಂತರ ಐಪಿಎಲ್‌ ಗೆ ಪುನರಾಗಮನ ಮಾಡಿದ್ದರು. ಈ ಮೂಲಕ ಐಪಿಎಲ್‌ನಲ್ಲಿ ಸುದೀರ್ಘ ಸಮಯದ ನಂತರ ಹಿಂದಿರುಗಿದ ಆಟಗಾರ ಎಂಬ ಬಿರುದು ಪಡೆದರು.


ಇದನ್ನೂ ಓದಿ: ಮತ್ತೆ 3 ಸಾವಿರಕ್ಕೂ ಅಧಿಕ ಪರದೆಗಳಲ್ಲಿ ‘ಪಠಾಣ್​’ ಬಿಡುಗಡೆ; ಇಲ್ಲಿದೆ ಚಿತ್ರ ಮಂದಿರಗಳ ವಿವರ.. !


ದೇಶೀಯ ಕ್ರಿಕೆಟ್‌ ನಲ್ಲಿ ಅದ್ಭುತ ದಾಖಲೆ:


ಹರ್‌ಪ್ರೀತ್ ಸಿಂಗ್ ಭಾಟಿಯಾ 75 ಪ್ರಥಮ ದರ್ಜೆ ಪಂದ್ಯಗಳಲ್ಲಿ 4909 ರನ್ ಗಳಿಸಿದ್ದಾರೆ. 84 ಲಿಸ್ಟ್ ಎ ಪಂದ್ಯಗಳಲ್ಲಿ 3023 ರನ್‌ ಗಳು ಮತ್ತು 2000 ಕ್ಕೂ ಹೆಚ್ಚು ಟಿ20 ರನ್‌ ಗಳು ಅವರ ಹೆಸರಿನಲ್ಲಿ ದಾಖಲಾಗಿವೆ. ಹರ್‌ಪ್ರೀತ್ ಸಿಂಗ್ ಭಾಟಿಯಾ 2008ರಲ್ಲಿ ಮಧ್ಯಪ್ರದೇಶ ಪರ ದೇಶೀಯ ಕ್ರಿಕೆಟ್‌ ಆಡಿದ್ದರು. ಇದಾದ ಬಳಿಕ 2017ರಲ್ಲಿ ಛತ್ತೀಸ್‌ಗಢ ಪರ ಕ್ರಿಕೆಟ್ ಆಡಲು ಆರಂಭಿಸಿದ್ದರು. ಇದೀಗ ಅವರು ಛತ್ತೀಸ್‌ಗಢ ತಂಡದ ಎಲ್ಲಾ ಮಾದರಿಯ ನಾಯಕರಾಗಿದ್ದಾರೆ. ಅವರು 2010 ರ ಅಂಡರ್-19 ವಿಶ್ವಕಪ್ ತಂಡದ ಭಾಗವಾಗಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ