ಗೃಹಲಕ್ಷ್ಮಿ ಯೋಜನೆ ವೈರಲ್ ಆಗಿದ್ದ ಫಾರ್ಮ್ ನಿಜ: ತಮ್ಮನ ದರ್ಪಕ್ಕೆ ಕ್ಷಮೆ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಸರ್ಕಾರದ ಯೋಜನೆಗಳ ಕುರಿತಂತೆ ಸಾರ್ವಜನಿಕರಿಗೆ ತಪ್ಪು ಮಾಹಿತಿ ರವಾನೆಯಾಗಬಾರದು ಎಂದು ತಿಳಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಯಾರ ಪತಿ/ಗಂಡ ತೆರಿಗೆ ಕಟ್ಟುತ್ತಾರೋ ಅಂತಹವರಿಗೆ ಈ ಯೋಜನೆಯ ಪ್ರಯೋಜನ ಲಭ್ಯವಾಗುವುದಿಲ್ಲ. 

Written by - Prashobh Devanahalli | Edited by - Yashaswini V | Last Updated : Jun 9, 2023, 03:29 PM IST
  • ವಿಧಾನಸೌಧದ ಸಚಿವರ ಕಚೇರಿಯಲ್ಲಿ ಕುಳಿತು ತಾನೇ ದರ್ಬಾರ್ ಮಾಡುತ್ತಿರುವ ಎಂ ಎಲ್ ಸಿ ಚೆನ್ನರಾಜ್ ಹಟ್ಟಿಹೊಳಿ
  • ಮಾಧ್ಯಮಗಳ ಮೇಲೂ ದರ್ಪ ತೋರಿರುವ ಸಚಿವರ ಸಹೋದರ
  • ಗ್ಯಾರಂಟಿ ಸ್ಕೀಂ ಅನುಮಾನಗಳ ಬಗ್ಗೆ ಪ್ರಶ್ನೆ ಮಾಡಲು ತೆರಳಿದ್ದ ಮಾಧ್ಯಮಗಳ ವಿರುದ್ಧ ಸಚಿವರು ಸುಮ್ಮನಿದ್ದರೂ ಎಂಎಲ್ಸಿ ಚೆನ್ನರಾಜ್ ದರ್ಪ
ಗೃಹಲಕ್ಷ್ಮಿ ಯೋಜನೆ ವೈರಲ್ ಆಗಿದ್ದ ಫಾರ್ಮ್ ನಿಜ: ತಮ್ಮನ ದರ್ಪಕ್ಕೆ ಕ್ಷಮೆ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್  title=

ಬೆಂಗಳೂರು :  ಒಂದೆಡೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಚೇರಿಯಲ್ಲಿ ಸಹೋದರ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೋಳಿ ಸಚಿವರು ಅಧಿಕಾರಿಗಳ ಬಿಟ್ಟು ದರ್ಬಾರ್ ಮಾಡುತ್ತಿರುವುದು ಕಂಡುಬಂದಿದೆ. ಇನ್ನೊಂದೆಡೆ ಇತ್ತೀಚೆಗೆ ಗೃಹ ಲಕ್ಷ್ಮಿ ಯೋಜನೆಯ ವೈರಲ್ ಆಗಿದ್ದ ಫಾರ್ಮ್ ನಿಜ ಎಂದು ತಿಳಿದುಬಂದಿದೆ. 

ಈ ಕುರಿತಂತೆ ವಿಧಾನಸೌಧದಲ್ಲಿ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಗೃಹಲಕ್ಷ್ಮಿ ಫಾರ್ಮ್ ಓಡಾಡ್ತಿರೋದು ಅಸಲಿ. ಕೆಲವೊಂದು ಬದಲಾವಣೆ ಮಾಡಲಿದ್ದೇವೆ. ಬ್ಯಾಂಕ್ ಪಾಸ್ ಬುಕ್‌ ಸೇರಿಸಲಾಗುವುದು. ಜಾತಿ ಬದಲು ವರ್ಗ ಅಂತ ಹಾಕುತ್ತೇವೆ ಎಂದರು. 

ಇದೇ ಸಂದರ್ಭದಲ್ಲಿ ಸರ್ಕಾರದ ಯೋಜನೆಗಳ ಕುರಿತಂತೆ ಸಾರ್ವಜನಿಕರಿಗೆ ತಪ್ಪು ಮಾಹಿತಿ ರವಾನೆಯಾಗಬಾರದು ಎಂದು ತಿಳಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಯಾರ ಪತಿ/ಗಂಡ ತೆರಿಗೆ ಕಟ್ಟುತ್ತಾರೋ ಅಂತಹವರಿಗೆ ಈ ಯೋಜನೆಯ ಪ್ರಯೋಜನ ಲಭ್ಯವಾಗುವುದಿಲ್ಲ. ಒಂದೊಮ್ಮೆ ಮಹಿಳೆಯ ಗಂಡ ತೆರಿಗೆ ಪಾವತಿದಾರರಲ್ಲದಿದ್ದಲ್ಲಿ, ಅವರ ಮಗ ತೆರಿಗೆ ಪಾವತಿದಾರರಾಗಿದ್ದರೆ ಅಂತಹ ಮನೆಯ ಒಡತಿಗೆ ಯೋಜನೆಯ ಲಾಭ ದೊರೆಯುತ್ತದೆ. 90% ಬಿಪಿಎಲ್ ಕಾರ್ಡಲ್ಲಿ ಮಹಿಳೆಯರೇ ಪ್ರಮುಖ ಆಗಲಿದ್ದಾರೆ. ಯಾರೆಲ್ಲಾ ಈ ಯೋಜನೆಯ ಪ್ರಯೋಜನ ಪಡೆಯಲು ಅರ್ಹರೋ ಅವರೆಲ್ಲರಿಗೂ ಇದರ ಪ್ರಯೋಜನ ಸಿಕ್ಕೇ ಸಿಗುತ್ತದೆ ಎಂದು ಭರವಸೆ ನೀಡಿದರು. 

ಇದನ್ನೂ ಓದಿ- ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ: ರಾಜ್ಯಾದ್ಯಂತ ಏಕ‌ಕಾಲಕ್ಕೆ 'ಶಕ್ತಿ'ಗೆ ಚಾಲನೆ

ಗೃಹ ಲಕ್ಷ್ಮಿ ಯೋಜನೆಯ ಅರ್ಜಿ:
ಈಗ ಬಂದಿರೋದು ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಡ್ರಾಫ್ಟ್ ಮಾತ್ರ. ಈ ಸಂಬಂಧ ಬೆಳಗಾವಿಯಲ್ಲಿ ಆಗಸ್ಟ್ 17 ಅಥವಾ 18ರಂದು ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು. 

ಕಚೇರಿಯಲ್ಲಿ ತಮ್ಮನ ದರ್ಬಾರ್- ಕ್ಷಮೆ ಯಾಚಿಸಿದ ಸಚಿವೆ: 
ವಿಧಾನಸೌಧದ ಸಚಿವರ ಕಚೇರಿಯಲ್ಲಿ ಕುಳಿತು ತಾನೇ ದರ್ಬಾರ್ ಮಾಡುತ್ತಿರುವ ಎಂ ಎಲ್ ಸಿ ಚೆನ್ನರಾಜ್ ಹಟ್ಟಿಹೊಳಿ, ಮಾಧ್ಯಮಗಳ ಮೇಲೂ ದರ್ಪ ತೋರಿದ್ದು ಗ್ಯಾರಂಟಿ ಸ್ಕೀಂ ಅನುಮಾನಗಳ ಬಗ್ಗೆ ಪ್ರಶ್ನೆ ಮಾಡಲು ತೆರಳಿದ್ದ ಮಾಧ್ಯಮಗಳ ವಿರುದ್ಧ ಸಚಿವರು ಸುಮ್ಮನಿದ್ದರೂ ಎಂಎಲ್ಸಿ ಚೆನ್ನರಾಜ್ ದರ್ಪ ತೋರಿದ್ದಾರೆ. 

ಇದನ್ನೂ ಓದಿ- ಆರ್‌ಎಸ್‌ಎಸ್ ಅಂಗ ಸಂಸ್ಥೆಗಳಿಗೆ ನೀಡಿದ್ದ ಎಲ್ಲಾ ಜಮೀನು ವಾಪಸ್..!

ಇದೇ ಸಂದರ್ಭದಲ್ಲಿ ಚನ್ನರಾಜ್ ಹೊರಗೆ ನಡೆಯಿರಿ ಏನೂ ಉತ್ತರ ಕೊಡಲ್ಲ ಎಂದು ಏರುಧ್ವನಿಯಲ್ಲಿ ಗದರಿದ್ದು, ಜನರ ಪತ್ರಗಳಿಗೂ ತಾವೇ ಸಚಿವರ ಕೊಠಡಿಯಲ್ಲಿ ಸಹಿ ಹಾಕುತ್ತ ಕುಳಿತಿದ್ದರು. ನಂತರ ಸಹೋದರನ ವರ್ತನೆಗೆ  ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಾವೇ ಕ್ಷಮೆ ಕೇಳಿದರು.

ಕಾಂಗ್ರೆಸ್ ನಲ್ಲಿ ಗೃಹ ಲಕ್ಷ್ಮಿ ಫಾರಂ ಬಗ್ಗೆ ಗೊಂದಲ; ಸಚಿವರು ಒಪ್ಪಿದರು ಪಕ್ಷ ಒಪ್ಪದ ಪರಿಸ್ಥಿತಿ!
ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಗೃಹ ಲಕ್ಷ್ಮಿ ಅರ್ಜಿಯ ಡ್ರಾಫ್ಟ್ ಕಾಪಿ ವೈರಲ್ ಆಗಿದ್ದು ಸುಳ್ಳು ಎಂದು ಕಾಂಗ್ರೆಸ್ ಪಕ್ಷದ ತನ್ನ ಟ್ವೀಟರ್ ನ ಅಧಿಕೃತ ಖಾತೆ ಯಲ್ಲಿ ಹೇಳಿದರೆ, ಅತ್ತ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಇದು ಅಸಲಿ ಎಂದು ಒಪ್ಪಿಕೊಂಡಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News