WTC Final 2023: ಟೀಂ ಇಂಡಿಯಾ ಜೂನ್ 7 ರಿಂದ ಜೂನ್ 11 ರವರೆಗೆ ಇಂಗ್ಲೆಂಡ್‌ ನ ಓವಲ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ಅಂತಿಮ ಪಂದ್ಯವನ್ನು ಆಡಬೇಕಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ನ ಫೈನಲ್‌ ಗೆ ಬಿಸಿಸಿಐ ಪ್ರಬಲ ಹೆಜ್ಜೆಯನ್ನು ಇಟ್ಟು ಈಗಾಗಲೇ ತಂಡವನ್ನು ಘೋಷಣೆ ಮಾಡಿದೆ. ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ನ ಫೈನಲ್‌ ಗೆ, ಭಯಾನಕ ಬ್ಯಾಟ್ಸ್‌ ಮನ್‌ ಒಬ್ಬನನ್ನು ಬಿಸಿಸಿಐ ಸಜ್ಜು ಮಾಡಿದ್ದು, ಟೀಮ್ ಇಂಡಿಯಾದಲ್ಲಿ ಅವಕಾಶ ಸಿಕ್ಕರೆ, ಆತ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಬಹುದು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಈ ಆಟಗಾರ ರೋಹಿತ್ ಶರ್ಮಾಗೆ ಮಾರಕ ಅಸ್ತ್ರವಾಗಲಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Viral Video: ಅಪ್ಪನ ಮುಂದೆಯೇ ಸಿಗರೇಟ್ ಹಚ್ಚಿ ಅವಾಜ್‌ ಹಾಕಿದ ಮಗ.. ಹೇಗ್‌ ಬಿತ್ತು ನೋಡಿ ಒದೆ!


ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ ಮನ್ ಕೆಎಲ್ ರಾಹುಲ್ ಗಾಯದ ಕಾರಣ ಐಪಿಎಲ್ 2023 ರಿಂದ ಹೊರಗುಳಿದಿದ್ದಾರೆ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ (ಡಬ್ಲ್ಯುಟಿಸಿ) ಫೈನಲ್‌ ನಲ್ಲಿ ಆಡಲು ಅವರಿಗೆ ತುಂಬಾ ಕಷ್ಟವಾಗಬಹುದು. ಬ್ಯಾಟ್ಸ್‌ಮನ್‌ನ ಹೊರತಾಗಿ, ಕೆಎಲ್ ರಾಹುಲ್ ವಿಕೆಟ್ ಕೀಪರ್ ಆಗಿ ಸಹ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ನ ಫೈನಲ್‌ಗೆ ಟೀಮ್ ಇಂಡಿಯಾದ ಭರವಸೆಯಾಗಿದ್ದರು. ಆದರೆ ಒಂದು ವೇಳೆ ರಾಹುಲ್ ಆಡುವುದು ಅನುಮಾನ ಎಂದಾದರೆ, ಸ್ಫೋಟಕ ವಿಕೆಟ್-ಕೀಪರ್ ಕಂ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಅವರಿಗೆ WTC ಫೈನಲ್ ನಲ್ಲಿ ಅವಕಾಶ ನೀಡಲಾಗುತ್ತದೆ.


ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ಫೈನಲ್ (ಡಬ್ಲ್ಯುಟಿಸಿ ಫೈನಲ್) ನಂತಹ ಮಹತ್ವದ ಪಂದ್ಯಕ್ಕೆ ಟೀಮ್ ಇಂಡಿಯಾಗೆ ಇಶಾನ್ ಕಿಶನ್ ಅಗತ್ಯವಿದೆ. ಏಕೆಂದರೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ಕೆಎಸ್ ಭರತ್ ಇದುವರೆಗೆ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ಎರಡರಲ್ಲೂ ವೈಫಲ್ಯವನ್ನು ಕಂಡಿದ್ದಾರೆ. ಕೆಎಲ್ ರಾಹುಲ್ ಗಾಯಗೊಳ್ಳುವವರೆಗೂ, ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ನ (ಡಬ್ಲ್ಯುಟಿಸಿ ಫೈನಲ್) ಫೈನಲ್‌ ನಲ್ಲಿ ಆಡಲು ಟೀಮ್ ಇಂಡಿಯಾಗೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ಪ್ರಬಲ ಸ್ಪರ್ಧಿಯಾಗಿದ್ದರು, ಆದರೆ ಈಗ ಅವರ ಗಾಯದಿಂದಾಗಿ ಟೀಮ್ ಇಂಡಿಯಾಕ್ಕೆ ಸ್ಫೋಟಕ ವಿಕೆಟ್ ಕೀಪರ್ ಅಗತ್ಯವಿದೆ.


ರಿಷಬ್ ಪಂತ್ ಕೂಡ ಅಪಘಾತದ ಕಾರಣದಿಂದ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ಫೈನಲ್ (ಡಬ್ಲ್ಯುಟಿಸಿ ಫೈನಲ್) ನಿಂದ ಹೊರಗುಳಿಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸ್ಫೋಟಕ ವಿಕೆಟ್ ಕೀಪರ್ ಕಂ ಬ್ಯಾಟ್ಸ್‌ಮನ್ ಸ್ಥಾನವನ್ನು ಸರಿದೂಗಿಸಲು ಬಿಸಿಸಿಐ ಇಶಾನ್ ಕಿಶನ್‌ ಗೆ ಅವಕಾಶ ನೀಡಬಹುದು.


10 ಡಿಸೆಂಬರ್ 2022 ರಂದು ಚಿತ್ತಗಾಂಗ್‌ ನಲ್ಲಿ ನಡೆದ ಮೂರನೇ ODI ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಇಶಾನ್ ಕಿಶನ್ 131 ಎಸೆತಗಳಲ್ಲಿ 210 ರನ್ ಗಳಿಸಿದ್ದರು. 210 ರನ್‌ ಗಳ ಸ್ಫೋಟಕ ಇನ್ನಿಂಗ್ಸ್‌ನಲ್ಲಿ ಇಶಾನ್ ಕಿಶನ್ 24 ಬೌಂಡರಿ ಮತ್ತು 10 ಸಿಕ್ಸರ್‌ಗಳನ್ನು ಬಾರಿಸಿದ್ದರು.


ದ್ವಿಶತಕ ಗಳಿಸುವ ಸಾಮರ್ಥ್ಯ!


ಮಧ್ಯಮ ಕ್ರಮಾಂಕದಲ್ಲಿ ರಿಷಬ್ ಪಂತ್ ಅವರ ಎಕ್ಸ್ ಫ್ಯಾಕ್ಟರ್ ಕೊರತೆಯನ್ನು ಇಶಾನ್ ಕಿಶನ್ ನೀಗಿಸುವ ಸಾಧ್ಯತೆ ಇದೆ. ಇಶಾನ್ ಕಿಶನ್ ಅವರು ತನಗೆ ದೊಡ್ಡ ಇನ್ನಿಂಗ್ಸ್ ಆಡುವ ಶಕ್ತಿ ಇದೆ ಎಂದು ಆಯ್ಕೆದಾರರಿಗೆ ತೋರಿಸಿ ಕೊಟ್ಟಿದ್ದಾರೆ. ಇದೀಗ ಆ ಐತಿಹಾಸಿಕ ಇನ್ನಿಂಗ್ಸ್ ಆಧಾರದ ಮೇಲೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಅವಕಾಶ ಪಡೆಯಬಹುದು. ಶತಕ ಮತ್ತು ದ್ವಿಶತಕ ಬಾರಿಸುವ ಶಕ್ತಿ ಹೊಂದಿರುವ ಇವರು ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ಫೈನಲ್‌ ನಲ್ಲಿ ಭಾರತಕ್ಕೆ ಅಗತ್ಯವಿದ್ದಾರೆ ಎನ್ನಬಹುದು.


ಇದನ್ನೂ ಓದಿ: Palak Tiwari : ಪಾಲಕ್ ತಿವಾರಿಗೆ ಕಿಸ್‌ ಮಾಡುವಾಗ ಫ್ಯಾನ್ಸ್‌ ಕೈಗೆ ಸಿಕ್ಕಿಬಿದ್ದ ಸೈಫ್ ಅಲಿ ಖಾನ್ ಪುತ್ರ!


ಇಶಾನ್ ಕಿಶನ್ ಟೀಂ ಇಂಡಿಯಾ ಪರ ಆಡಿದ 14 ಏಕದಿನ ಪಂದ್ಯಗಳಲ್ಲಿ 1 ದ್ವಿಶತಕ ಮತ್ತು 3 ಅರ್ಧ ಶತಕ ಸೇರಿದಂತೆ 42.50 ರ ಅತ್ಯುತ್ತಮ ಬ್ಯಾಟಿಂಗ್ ಸರಾಸರಿಯಲ್ಲಿ 510 ರನ್ ಗಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.