Australia Temple Vandalized: ಆಸ್ಟ್ರೇಲಿಯಾದಲ್ಲಿ ಮತ್ತೊಮ್ಮೆ ಖಲಿಸ್ತಾನಿ ಬೆಂಬಲಿಗರು ಹಿಂದೂ ದೇವಾಲಯದಲ್ಲಿ ಗಲಭೆ ಸೃಷ್ಟಿಸಿರುವ ಪ್ರಕರಣ ಮುನ್ನೆಲೆಗೆ ಬಂದಿದೆ. ಈ ವೇಳೆ ಸಿಡ್ನಿಯಲ್ಲಿರುವ ಸ್ವಾಮಿನಾರಾಯಣ ದೇವಸ್ಥಾನವನ್ನು ಧ್ವಂಸ ಮಾಡಲಾಗಿದ್ದು, ಗೂಂಡಾಗಳು ದೇವಸ್ಥಾನದ ಮೇಲೆ ಖಲಿಸ್ತಾನ್ ಧ್ವಜವನ್ನು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ.
ಸುದ್ದಿ ಸಂಸ್ಥೆ ANI ಪ್ರಕಾರ, ಪಶ್ಚಿಮ ಸಿಡ್ನಿಯ ರೋಸ್ ಹಿಲ್ ಉಪನಗರದಲ್ಲಿರುವ ಸ್ವಾಮಿನಾರಾಯಣ ದೇವಾಲಯದಲ್ಲಿ ಶುಕ್ರವಾರ ಮುಂಜಾನೆ ದೇವಾಲಯದ ಆಡಳಿತ ಮಂಡಳಿಯು ನೋಡಿದಾಗ, ದೇವಾಲಯದ ಮುಂಭಾಗದ ಗೋಡೆಯನ್ನು ಒಡೆದುಹಾಕಿದ್ದು ಮಾತ್ರವಲ್ಲದೆ, ಖಲಿಸ್ತಾನ್ ಧ್ವಜವನ್ನು ನೇತು ಹಾಕಿರುವುದು ಕಂಡುಬಂದಿದೆ. ಈ ಬಗ್ಗೆ ಸಿಡ್ನಿಯ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದನ್ನೂ ಓದಿ: Photos: ಕಲಬುರ್ಗಿಯಲ್ಲಿ ಪ್ರಿಯಾಂಕಾ ಗಾಂಧಿ ರೋಡ್ ಶೋ ಗೆ ಹರಿದು ಬಂದ ಜನಸಾಗರ
ಇತ್ತೀಚಿಗೆ ಆಸ್ಟ್ರೇಲಿಯಾದಲ್ಲಿ ಖಲಿಸ್ತಾನ್ ಬೆಂಬಲಿಗರು ಹಿಂದೂ ದೇವಾಲಯಗಳನ್ನು ಧ್ವಂಸ ಮಾಡುವ ಘಟನೆಗಳು ಮುನ್ನೆಲೆಗೆ ಬರುತ್ತಿವೆ. ಮಾರ್ಚ್ 4 ರಂದು ಆಸ್ಟ್ರೇಲಿಯಾದ ಬ್ರಿಸ್ಬೇನ್ ನಲ್ಲಿರುವ ಪ್ರಮುಖ ಹಿಂದೂ ದೇವಾಲಯವನ್ನು ಖಲಿಸ್ತಾನ್ ಬೆಂಬಲಿಗರು ಧ್ವಂಸಗೊಳಿಸಿದ್ದರು. ಈ ಘಟನೆಯು ಬ್ರಿಸ್ಬೇನ್ ನ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದಲ್ಲಿ ನಡೆದಿತ್ತು. ಇದಕ್ಕೂ ಮೊದಲು ಜನವರಿ 23 ರಂದು ಮೆಲ್ಬೋರ್ನ್ ನ ಆಲ್ಬರ್ಟ್ ಪಾರ್ಕ್ ನಲ್ಲಿರುವ ಐಕಾನಿಕ್ ಇಸ್ಕಾನ್ ದೇವಾಲಯದ ಗೋಡೆಗಳ ಮೇಲೆ 'ಹಿಂದೂಸ್ತಾನ್ ಮುರ್ದಾಬಾದ್' ಎಂದು ವಿರೋಧಿ ಬರಹಗಳನ್ನು ಸಹ ಬರೆಯಲಾಗಿತ್ತು.
ಜನವರಿಯಲ್ಲಿ ಎರಡು ದೇವಾಲಯಗಳ ಧ್ವಂಸ!
ಜನವರಿ 16 ರಂದು, ವಿಕ್ಟೋರಿಯಾದ ಕ್ಯಾರಂ ಡೌನ್ಸ್ ನಲ್ಲಿರುವ ಐತಿಹಾಸಿಕ ಶ್ರೀ ಶಿವ ವಿಷ್ಣು ದೇವಾಲಯವನ್ನು ಇದೇ ರೀತಿಯಲ್ಲಿ ಧ್ವಂಸಗೊಳಿಸಲಾಯಿತು. ಜನವರಿ 12 ರಂದು, ಮೆಲ್ಬೋರ್ನ್ ನ ಸ್ವಾಮಿನಾರಾಯಣ ದೇವಸ್ಥಾನವನ್ನು ಭಾರತ ವಿರೋಧಿ ಘೋಷಣೆಗಳೊಂದಿಗೆ ಸಮಾಜ ವಿರೋಧಿ ಘೋಷಣೆ ಕೂಡ ಬರೆದು ವಿರೂಪಗೊಳಿಸಿದ್ದರು.
ಆಸ್ಟ್ರೇಲಿಯಾ ಪ್ರಧಾನಿ ಜೊತೆ ಪ್ರಧಾನಿ ಮೋದಿ ವಿಷಯ ಪ್ರಸ್ತಾಪ:
ಮಾರ್ಚ್ ನಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ದೇವಾಲಯಗಳ ಮೇಲಿನ ದಾಳಿಯ ವಿಷಯವನ್ನು ಪ್ರಸ್ತಾಪಿಸಿದರು. ಕಳೆದ ಕೆಲವು ವಾರಗಳಿಂದ ಆಸ್ಟ್ರೇಲಿಯದಲ್ಲಿ ದೇವಸ್ಥಾನಗಳ ಮೇಲಿನ ದಾಳಿಯ ಸುದ್ದಿಗಳು ನಿಯಮಿತವಾಗಿ ಬರುತ್ತಿರುವುದು ವಿಷಾದದ ಸಂಗತಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇಂತಹ ಸುದ್ದಿಗಳು ಭಾರತದ ಎಲ್ಲಾ ಜನರನ್ನು ಚಿಂತೆಗೀಡುಮಾಡುವುದು ಮಾತ್ರವಲ್ಲದೆ, ನಮ್ಮ ಮನಸ್ಸನ್ನು ಕಲಕುವುದು ಸಹಜ ಎಂದಿದ್ದಾರೆ.
ಇದನ್ನೂ ಓದಿ: ಇನ್ನೊಂದು ವಾರದಲ್ಲಿ ಈ ರಾಶಿಯವರ ಜೀವನದಲ್ಲಿ ಎಲ್ಲವೂ ಮಂಗಳಮಯ ! ಚಿಂತೆಗೆ ಜಾಗವೇ ಇಲ್ಲ
ಘಟನೆ ಸಂಬಂಧ ಮಾತನಾಡಿಸ ಪ್ರಧಾನಿ ಮೋದಿ, “ನಮ್ಮ ಈ ಭಾವನೆಗಳನ್ನು ಮತ್ತು ಕಾಳಜಿಗಳನ್ನು ಪ್ರಧಾನಿ ಅಲ್ಬನೀಸ್ ಅವರ ಮುಂದೆ ಇಡುತ್ತೇನೆ. ಮತ್ತು ಭಾರತೀಯ ಸಮುದಾಯದ ಸುರಕ್ಷತೆಯು ಅವರಿಗೆ ವಿಶೇಷ ಆದ್ಯತೆಯಾಗಿದೆ ಎಂದು ಅವರು ನನಗೆ ಭರವಸೆ ನೀಡಿದ್ದಾರೆ. ನಮ್ಮ ತಂಡಗಳು ಈ ವಿಷಯದಲ್ಲಿ ನಿಯಮಿತವಾಗಿ ಸಂಪರ್ಕದಲ್ಲಿರುತ್ತವೆ ಮತ್ತು ಸಾಧ್ಯವಾದಷ್ಟು ಸಹಕರಿಸುತ್ತವೆ” ಎಂದು ಭರವಸೆ ನೀಡಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.