Virat Kohli yo-yo test score: ಏಷ್ಯಾಕಪ್‌ 2023 ಗೆ ಟೀಂ ಇಂಡಿಯಾ ಸಜ್ಜಾಗುತ್ತಿದೆ. ಸಿದ್ಧತಾ ಶಿಬಿರದ ಅಂಗವಾಗಿ ಭಾರತ ತಂಡ ಬೆಂಗಳೂರಿನಲ್ಲಿ ಬಿಡುವಿಲ್ಲದ ಸಮಯವನ್ನು ಕಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಎಲ್ಲಾ ಆಟಗಾರರಿಗೆ ಯೋಯೋ ಟೆಸ್ಟ್ ನಡೆಸಿದೆ. ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಗುರುವಾರ ತಮ್ಮ ಯೋಯೊ ಸ್ಕೋರ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇದರಿಂದ ಬಿಸಿಸಿಐ ಕೋಪಗೊಂಡಿದೆ ಎಂದು ವರದಿಯಾಗಿದೆ. ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಯಾವುದೇ ಗೌಪ್ಯ ಪೋಸ್ಟ್‌ಗಳನ್ನು ಮಾಡದಂತೆ ಮೌಖಿಕವಾಗಿ ಕೊಹ್ಲಿಗೆ ಸೂಚನೆ ನೀಡಲಾಗಿದೆ ಎಂದು ವರದಿಯಾಗಿದೆ.


COMMERCIAL BREAK
SCROLL TO CONTINUE READING

ವಿರಾಟ್ ಕೊಹ್ಲಿ ಯಾವಾಗಲೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುತ್ತಾರೆ. ಅವರು ಸಾಂದರ್ಭಿಕವಾಗಿ ತಮ್ಮ ಫಿಟ್ನೆಸ್ ವಿಡಿಯೋಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಯೋಯೋ ಸ್ಕೋರ್‌ನ್ನು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಬಿಸಿಸಿಐ ಕೋಪಕ್ಕೆ ಕಾರಣವಾಗಿದೆ. ಯೋಯೋ ಟೆಸ್ಟ್‌ನಲ್ಲಿ ಕೊಹ್ಲಿ 17.2 ಅಂಕ ಗಳಿಸಿದ್ದರು. ಕೊಹ್ಲಿಯ ಈ ಕ್ರಮ ಬಿಸಿಸಿಐಗೆ ಇಷ್ಟವಾಗಲಿಲ್ಲ. 


ಇದನ್ನೂ ಓದಿ: ಕ್ರಿಕೆಟ್ ಪಂದ್ಯದ ವೇಳೆ ಆಟಗಾರರು ಏನು ತಿನ್ನುತ್ತಾರೆ? ದೊಡ್ಡ ರಹಸ್ಯ ಬಹಿರಂಗ


ನಿಯಮಗಳ ಪ್ರಕಾರ.. ಯಾವುದೇ ಕ್ರಿಕೆಟಿಗ ತನ್ನ ಯೋಯೋ ಟೆಸ್ಟ್ ಸ್ಕೋರ್ ಬಿಡುಗಡೆ ಮಾಡುವಂತಿಲ್ಲ. ಕೊಹ್ಲಿ ಪೋಸ್ಟ್ ಬೆನ್ನಲ್ಲೇ ಬಿಸಿಸಿಐ ಅಸಮಾಧಾನಗೊಂಡಿದ್ದು, ಉಳಿದ ಆಟಗಾರರಿಗೂ ಎಚ್ಚರಿಕೆ ನೀಡಿದೆ ಎಂದು ಹೇಳಲಾಗಿದೆ. ಯೋಯೋ ಟೆಸ್ಟ್‌ನ ವಿವರಗಳನ್ನು ಬಹಿರಂಗಪಡಿಸದಂತೆ ಎಲ್ಲಾ ಆಟಗಾರರಿಗೆ ಬಿಸಿಸಿಐ ಸೂಚನೆ ನೀಡಿದೆ ಎಂದು ವರದಿಯಾಗಿದೆ. ನಾಯಕ ರೋಹಿತ್ ಶರ್ಮಾ ಮತ್ತು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಸ್ಟಾರ್ ಆಟಗಾರರು ಕೂಡ ಮೊದಲ ದಿನ ಕಠಿಣ ಫಿಟ್‌ನೆಸ್ ಪರೀಕ್ಷೆಯಲ್ಲಿ ಭಾಗವಹಿಸಿದ್ದರು. ಐರ್ಲೆಂಡ್ ಸರಣಿಯಲ್ಲಿ ಆಡದ ಆಟಗಾರರಿಗೆ 13 ದಿನಗಳ ಫಿಟ್ನೆಸ್ ಕಾರ್ಯಕ್ರಮವನ್ನು ನಡೆಸುತ್ತಿದೆ.


ಏಷ್ಯಾಕಪ್ ಇದೇ ತಿಂಗಳ 30 ರಿಂದ ಆರಂಭವಾಗಲಿದೆ. ಈ ಟೂರ್ನಿ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವೆ ನಡೆಯಲಿದೆ. ಮುಲ್ತಾನ್‌ನಲ್ಲಿ ಪಾಕಿಸ್ತಾನ ಮತ್ತು ನೇಪಾಳ ನಡುವಿನ ಪಂದ್ಯದೊಂದಿಗೆ ಟೂರ್ನಿ ಆರಂಭವಾಗಲಿದೆ. ಭಾರತ ಸೆಪ್ಟೆಂಬರ್ 2 ರಂದು ಪಾಕಿಸ್ತಾನದ ವಿರುದ್ಧ ತನ್ನ ಪಂದ್ಯವನ್ನು ಪ್ರಾರಂಭಿಸಲಿದೆ. ವಿಶ್ವಕಪ್‌ಗೆ ಪೂರ್ವ ತಯಾರಿಯಾಗಿ ಈ ಪಂದ್ಯಾವಳಿಯು ಏಕದಿನ ಮಾದರಿಯಲ್ಲಿ ನಡೆಯಲಿದೆ. ಇತ್ತೀಚೆಗಷ್ಟೇ ಐರ್ಲೆಂಡ್ ಸರಣಿಯಲ್ಲಿ ಭಾಗವಹಿಸಿದ್ದ ಆಟಗಾರರು ತರಬೇತಿ ಶಿಬಿರಕ್ಕೆ ಸೇರಲಿದ್ದಾರೆ. ಕೆ.ಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಗಾಯದ ನಂತರ ಮರು ಪ್ರವೇಶ ಪಡೆದರೆ, ತಿಲಕ್ ವರ್ಮಾ ಮೊದಲ ಬಾರಿಗೆ ಏಕದಿನ ತಂಡಕ್ಕೆ ಆಯ್ಕೆಯಾದರು.


ಇದನ್ನೂ ಓದಿ: ಐರ್ಲೆಂಡ್ ಸರಣಿಯಲ್ಲಿ ಈ ಕ್ರಿಕೆಟಿಗನಿಗೆ ಟಿ20 ಪದಾರ್ಪಣೆಗೆ ಅವಕಾಶ ನೀಡುವರೇ ಕ್ಯಾಪ್ಟನ್ ಬುಮ್ರಾ? 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.