ಐರ್ಲೆಂಡ್ ಸರಣಿಯಲ್ಲಿ ಈ ಕ್ರಿಕೆಟಿಗನಿಗೆ ಟಿ20 ಪದಾರ್ಪಣೆಗೆ ಅವಕಾಶ ನೀಡುವರೇ ಕ್ಯಾಪ್ಟನ್ ಬುಮ್ರಾ?

IND vs IRE, 3rd T20: ತಂಡದ ನಿರ್ವಹಣಾ ಸಮಿತಿಯು ಅವೇಶ್ ಖಾನ್, ಜಿತೇಶ್ ಶರ್ಮಾ ಮತ್ತು ಶಹಬಾಜ್ ಅಹ್ಮದ್ ಅವರಂತಹ ಆಟಗಾರರ ಸಾಮಾರ್ಥ್ಯವನ್ನು ಈ ಪಂದ್ಯದ ಮೂಲಕ ಪ್ರಯತ್ನಿಸಬೇಕಾಗಿದೆ.  

Written by - Bhavishya Shetty | Last Updated : Aug 23, 2023, 09:01 AM IST
    • ಭಾರತ ಮತ್ತು ಐರ್ಲೆಂಡ್ ನಡುವಿನ 3 ಪಂದ್ಯಗಳ T20 ಅಂತರಾಷ್ಟ್ರೀಯ ಸರಣಿ
    • ಮೂರನೇ ಪಂದ್ಯವು ಇಂದು ಭಾರತೀಯ ಕಾಲಮಾನ ರಾತ್ರಿ 7.30 ರಿಂದ ಡಬ್ಲಿನ್‌’ನಲ್ಲಿ ನಡೆಯಲಿದೆ
    • ಈ ಪಂದ್ಯದಲ್ಲಿ ಓರ್ವ ಆಟಗಾರ ತನಗೆ ಅವಕಾಶ ಸಿಗುವುದೇ? ಎಂದು ಕಾದು ಕುಳಿತಿದ್ದಾರೆ
ಐರ್ಲೆಂಡ್ ಸರಣಿಯಲ್ಲಿ ಈ ಕ್ರಿಕೆಟಿಗನಿಗೆ ಟಿ20 ಪದಾರ್ಪಣೆಗೆ ಅವಕಾಶ ನೀಡುವರೇ ಕ್ಯಾಪ್ಟನ್ ಬುಮ್ರಾ? title=
Jasprit Bumrah

IND vs IRE, 3rd T20 Playing XI: ಭಾರತ ಮತ್ತು ಐರ್ಲೆಂಡ್ ನಡುವಿನ 3 ಪಂದ್ಯಗಳ T20 ಅಂತರಾಷ್ಟ್ರೀಯ ಸರಣಿಯ ಮೂರನೇ ಪಂದ್ಯವು ಇಂದು ಭಾರತೀಯ ಕಾಲಮಾನ ರಾತ್ರಿ 7.30 ರಿಂದ ಡಬ್ಲಿನ್‌’ನಲ್ಲಿ ನಡೆಯಲಿದೆ. ಐರ್ಲೆಂಡ್ ವಿರುದ್ಧದ ಈ 3 ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿಯಲ್ಲಿ ಭಾರತ 2-0 ಮುನ್ನಡೆ ಕಾಯ್ದುಕೊಂಡಿದೆ. ಭಾರತ ತಂಡ ಐರ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಲು ಇಚ್ಛಿಸಿದ್ದು, ಇದೀಗ ಮೂರನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಓರ್ವ ಆಟಗಾರ ತನಗೆ ಅವಕಾಶ ಸಿಗುವುದೇ? ಎಂದು ಕಾದು ಕುಳಿತಿದ್ದಾರೆ.

ಇದನ್ನೂ ಓದಿ: "ಮಾನಸಿಕವಾಗಿ ಹೆಣಗಾಡುತ್ತಿದ್ದೇನೆ.." ಕ್ರಿಕೆಟ್ ಲೋಕಕ್ಕೆ ನಿವೃತ್ತಿ ಘೋಷಿಸಿದ ವಿಶ್ವಕಪ್ ವಿಜೇತ ಸ್ಟಾರ್ ಎಡಗೈ ಸ್ಪಿನ್ನರ್

ನಾಯಕ ಜಸ್ಪ್ರೀತ್ ಬುಮ್ರಾ ಬುಮ್ರಾ ಮೊದಲ ಎರಡು ಪಂದ್ಯಗಳಲ್ಲಿ ಎಂಟು ಓವರ್‌’ಗಳಲ್ಲಿ ಬೌಲಿಂಗ್ ಮಾಡಿದ್ದರು. ಇನ್ನು ಭಾರತ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದ್ದರೂ ಸಹ, ತಂಡದ ನಿರ್ವಹಣಾ ಸಮಿತಿಯು ಅವೇಶ್ ಖಾನ್, ಜಿತೇಶ್ ಶರ್ಮಾ ಮತ್ತು ಶಹಬಾಜ್ ಅಹ್ಮದ್ ಅವರಂತಹ ಆಟಗಾರರ ಸಾಮಾರ್ಥ್ಯವನ್ನು ಈ ಪಂದ್ಯದ ಮೂಲಕ ಪ್ರಯತ್ನಿಸಬೇಕಾಗಿದೆ.  

ವೆಸ್ಟ್ ಇಂಡೀಸ್ ವಿರುದ್ಧದ T20I ಸರಣಿಯಲ್ಲಿ ಅವೇಶ್ ತಂಡದ ಭಾಗವಾಗಿದ್ದರೂ ಸಹ ಈ ಸರಣಿ ಸೇರಿ ಸತತ ಏಳು ಪಂದ್ಯಗಳಲ್ಲಿ ಆಡಲು ಅವಕಾಶ ಸಿಕ್ಕಿರಲಿಲ್ಲ. ಒಂದು ವೇಳೆ ಈ ಬಾರಿಯೂ ಅವರನ್ನು ಹೊರಗಿಟ್ಟರೆ ಪಂದ್ಯದ ಅಭ್ಯಾಸವಿಲ್ಲದೆ ಏಷ್ಯನ್ ಗೇಮ್ಸ್‌’ನಲ್ಲಿ ಸಂಕಷ್ಟ ಅನುಭವಿಸುವುದು ಖಂಡಿತ.

ಈ ಆಟಗಾರರಿಗೆ ಟಿ20ಗೆ ಪದಾರ್ಪಣೆ ಮಾಡುವ ಅವಕಾಶ!

ಭಾರತ ತಂಡದ ಮ್ಯಾನೇಜ್‌’ಮೆಂಟ್ ಸಂಜು ಸ್ಯಾಮ್ಸನ್‌’ಗೆ ವಿಶ್ರಾಂತಿ ನೀಡಿ ಜಿತೇಶ್ ಶರ್ಮಾಗೆ ಅವಕಾಶ ನೀಡಿದರೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಮಾತ್ರ ಬದಲಾವಣೆಯಾಗಲಿದೆ. ವೇಗದ ಬೌಲರ್ ಅರ್ಷದೀಪ್ ಸಿಂಗ್‌’ಗೆ ನಿರಂತರವಾಗಿ ಅವಕಾಶಗಳು ಸಿಗುತ್ತಿದ್ದರೂ ಅವರ ಪ್ರದರ್ಶನದಲ್ಲಿ ಸ್ಥಿರತೆಯ ಕೊರತೆಯಿದೆ. ಹೀಗಿರುವಾಗ ಅವೇಶ್ ಖಾನ್ ಅಥವಾ ಮುಖೇಶ್ ಕುಮಾರ್ ಅವರನ್ನು ಮೂರನೇ ಪಂದ್ಯದಲ್ಲಿ ಪದಾರ್ಪಣೆಗೆ ಅವಕಾಶ ನೀಡಿದರೆ ಟೀಂ ಇಂಡಿಯಾಗೆ ಬಲ ಸಿಗಬಹುದು.

ರಿಂಕು ಸಿಂಗ್’ಗೆ ಮತ್ತೊಂದು ಅವಕಾಶ!

ರಿಂಕು ಸಿಂಗ್ ಅವರು ಎರಡನೇ ಪಂದ್ಯದಲ್ಲಿ 21 ಎಸೆತಗಳಲ್ಲಿ 38 ರನ್ ಗಳಿಸುವ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್‌’ನಲ್ಲಿ ತಮ್ಮ ಉತ್ಸಾಹಭರಿತ ಉಪಸ್ಥಿತಿಯನ್ನು ತೋರ್ಪಡಿಸಿದ್ದಾರೆ. ಸೂರ್ಯಕುಮಾರ್ ಯಾದವ್ ನಂತರ ಕಡಿಮೆ ಸ್ವರೂಪದ ಕ್ರಿಕೆಟ್’ಗೆ ಮತ್ತೋರ್ವ ಫಿನಿಶರ್ ಸಿಕ್ಕಂತಾಗಿದೆ. ರಿಂಕು, ಯಶಸ್ವಿ ಜೈಸ್ವಾಲ್ ಮತ್ತು ರುತುರಾಜ್ ಗಾಯಕ್ವಾಡ್ ಅವರಂತಹ ಆಟಗಾರರು ಭಾರತೀಯ T20 ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಏಕೆಂದರೆ ಭಾರತವು ನವೆಂಬರ್‌’ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಈ ಸ್ವರೂಪದಲ್ಲಿ ತಮ್ಮ ಸರಣಿಯನ್ನು ಆಡಲಿದೆ.

ಇದನ್ನೂ ಓದಿ: ಭರತನಾಟ್ಯ ಕಲಾವಿದೆ ಈ ಬಾಲಕಿ ಯಾರು ಗೊತ್ತಾ? ಭಾರತ ವಿಶ್ವಕಪ್ ಫೈನಲ್ ಪ್ರವೇಶಿಸಿದ್ದೇ ಈಕೆಯಿಂದ

ಮೂರನೇ ಟಿ20ಯಲ್ಲಿ ಭಾರತದ ಸಂಭಾವ್ಯ ಪ್ಲೇಯಿಂಗ್ XI: 1. ರುತುರಾಜ್ ಗಾಯಕ್ವಾಡ್ (ಉಪನಾಯಕ), 2. ಯಶಸ್ವಿ ಜೈಸ್ವಾಲ್, 3. ತಿಲಕ್ ವರ್ಮಾ, 4. ಸಂಜು ಸ್ಯಾಮ್ಸನ್, 5. ​​ರಿಂಕು ಸಿಂಗ್, 6. ಜಿತೇಶ್ ಶರ್ಮಾ (ವಿಕೆಟ್ ಕೀಪರ್), 7. ಶಿವಂ ದುಬೆ, 8. ರವಿ ಬಿಷ್ಣೋಯ್, 9. ಜಸ್ಪ್ರೀತ್ ಬುಮ್ರಾ, 10. ಪ್ರಸಿದ್ಧ ಕೃಷ್ಣ, 11. ಅರ್ಷದೀಪ್ ಸಿಂಗ್

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News