Sourav Ganguly Birthday : ಭಾರತೀಯ ಕ್ರಿಕೆಟ್ ಮಂಡಳಿ(ಬಿಸಿಸಿಐ)ಯ ಮುಖ್ಯಸ್ಥ ಮತ್ತು ಟೀಂ ಇಂಡಿಯಾ ಮಾಜಿ ಆಟಗಾರ ಸೌರವ್ ಗಂಗೂಲಿ ಇಂದು (ಜುಲೈ 8) ತಮ್ಮ 50 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸೌರವ್ ಗಂಗೂಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ವಿದೇಶದ ನೆಲದಲ್ಲಿ ಗೆಲ್ಲುವುದನ್ನ ಕಲಿತಿದೆ. ಗಂಗೂಲಿ ತಮ್ಮ ನಾಯಕತ್ವದ ಸಮಯದಲ್ಲಿ ಭಾರತ ತಂಡವನ್ನ ಹೊಸ ಎತ್ತರಕ್ಕೆ ಕೊಂಡೊಯ್ದವರು. ಸಧ್ಯ ಸೌರವ್ ಗಂಗೂಲಿ ತಮ್ಮ ಹುಟ್ಟುಹಬ್ಬದಂದು ಭರ್ಜರಿ ಡಾನ್ಸ್ ಮಾಡಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. 


COMMERCIAL BREAK
SCROLL TO CONTINUE READING

ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆದ ವಿಡಿಯೋ


ಸೌರವ್ ಗಂಗೂಲಿ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಲಂಡನ್‌ನಲ್ಲಿದ್ದಾರೆ. ಇದೀಗ ಅವರ ವೀಡಿಯೋವೊಂದು ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿ ಗಂಗೂಲಿ ತಮ್ಮ 21 ವರ್ಷದ ಮಗಳು ಸನಾ ಗಂಗೂಲಿ ಮತ್ತು ಪತ್ನಿ ಡೋನಾ ಗಂಗೂಲಿ ಮತ್ತೆ ಕೆಲವು ಸ್ನೇಹಿತರ ಜೊತೆ ಹಿಂದಿ  'ಓಂ ಶಾಂತಿ ಓಂ' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಅಲ್ಲದೆ, 'ಮೈನ್ ತೇರಾ ಹೀರೋ' ಹಾಡಿಗೆ ಸ್ವಿಂಗ್ ಮಾಡಿರುವುದನ್ನ ವಿಡಿಯೋದಲ್ಲಿ ಕಾಣಬಹುದು. 


ಇದನ್ನೂ ಓದಿ : ಹೇಗಿತ್ತು ಸೌರವ್ ಗಂಗೂಲಿ 50ನೇ ಹುಟ್ಟುಹಬ್ಬದ ಸಂಭ್ರಮ?


ಟೀಂ ಇಂಡಿಯಾಗಾಗಿ ಹಲವು ಪಂದ್ಯಗಳನ್ನು ಗೆದ್ದ ಗಂಗೂಲಿ


ಸೌರವ್ ಗಂಗೂಲಿ 1996 ರಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾಗೆ ಚೊಚ್ಚಲ ಟೆಸ್ಟ್ ಅದಿದ್ದರೆ. ಗಂಗೂಲಿ 2000 ರಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ಆಗಿ ಆಯ್ಕೆ ಆದರು. ಟೀಂ ಇಂಡಿಯಾ ಪರ 113 ಟೆಸ್ಟ್ ಪಂದ್ಯಗಳಲ್ಲಿ 7212 ರನ್ ಹಾಗೂ 311 ODIಗಳಲ್ಲಿ 11363 ರನ್ ಗಳಿಸಿದ್ದಾರೆ. ಗಂಗೂಲಿ ಕ್ರೀಸ್‌ನಲ್ಲಿದ್ದಾಗ ಭಾರತದ ಅಭಿಮಾನಿಗಳನ್ನು ಗೆಲ್ಲಿಸುವ ಭರವಸೆ ಮೂಡುತ್ತಿತ್ತು. ಗಂಗೂಲಿ ಲಾಂಗ್ ಸಿಕ್ಸ್ ಬಾರಿಸುವುದರಲ್ಲಿ ಹೆಸರುವಾಸಿಯಾಗಿದ್ದರು.


ಪಾಕಿಸ್ತಾನದಲ್ಲಿ ಗೆಲುವು


ಸೌರವ್ ಗಂಗೂಲಿ ನಾಯಕತ್ವದಲ್ಲಿ ಭಾರತ ತಂಡ ಪಾಕಿಸ್ತಾನ ಪ್ರವಾಸದಲ್ಲಿ ಏಕದಿನ ಸರಣಿಯನ್ನು 3-2 ಮತ್ತು ಟೆಸ್ಟ್ ಸರಣಿಯನ್ನು 2-1 ರಿಂದ ಗೆದ್ದುಕೊಂಡಿತು. ಹಾಗೆ, ದಾದಾ ನಾಯಕತ್ವದಲ್ಲಿ, ಟೀಂ ಇಂಡಿಯಾ 2003 ರ ವಿಶ್ವಕಪ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿತ್ತು, ಆದರೆ ಅಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಗಂಗೂಲಿ ನಾಯಕತ್ವದಲ್ಲಿ ಭಾರತವು ಯುವರಾಜ್ ಸಿಂಗ್, ವೀರೇಂದ್ರ ಸೆಹ್ವಾಗ್, ಜಹೀರ್ ಖಾನ್ ಮತ್ತು ಹರ್ಭಜನ್ ಸಿಂಗ್ ಅವರಂತಹ ಆಟಗಾರರನ್ನು ಪಡೆದರು.


ಇದನ್ನೂ ಓದಿ : ಭಾರತದ ಟಿ 20 ತಂಡದಿಂದ ಹೊರಕ್ಕೆ ಹೋಗ್ತಾರಾ ವಿರಾಟ್ ಕೊಹ್ಲಿ?


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ