ಭಾರತದ ಟಿ 20 ತಂಡದಿಂದ ಹೊರಕ್ಕೆ ಹೋಗ್ತಾರಾ ವಿರಾಟ್ ಕೊಹ್ಲಿ?

ವಿರಾಟ್ ಕೊಹ್ಲಿ ಅವರು ತಮ್ಮ ಫಾರ್ಮ್ ಕಂಡುಕೊಳ್ಳಲು ಹೆಣಗಾಡುತ್ತಿರುವುದರಿಂದ ಈಗ ಟಿ20 ತಂಡದಲ್ಲಿ ಅವರು ಸ್ಥಾನ ಪಡೆಯುವುದು ಕಷ್ಟಕರವಾಗಿದೆ.

Written by - Manjunath N | Last Updated : Jul 7, 2022, 05:28 PM IST
  • ಆದರೆ ಅಂತಿಮವಾಗಿ ಬಿಸಿಸಿಐ ಟಿ20 ವಿಶ್ವಕಪ್ ನ್ನು ಗಮನದಲ್ಲಿಟ್ಟುಕೊಂಡು ಯಾವ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎನ್ನುವುದನ್ನು ಕಾಯ್ದು ನೋಡಬೇಕಾಗಿದೆ.
ಭಾರತದ ಟಿ 20 ತಂಡದಿಂದ ಹೊರಕ್ಕೆ ಹೋಗ್ತಾರಾ ವಿರಾಟ್ ಕೊಹ್ಲಿ? title=
file photo

ನವದೆಹಲಿ: ಭಾರತ ತಂಡದ ಸ್ಟಾರ್ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಅವರು ತಮ್ಮ ಫಾರ್ಮ್ ಕಂಡುಕೊಳ್ಳಲು ಹೆಣಗಾಡುತ್ತಿರುವುದರಿಂದ ಈಗ ಟಿ20 ತಂಡದಲ್ಲಿ ಅವರು ಸ್ಥಾನ ಪಡೆಯುವುದು ಕಷ್ಟಕರವಾಗಿದೆ.

ಇದೆ ರೀತಿ ಅವರು ಕಳಪೆ ಪ್ರದರ್ಶನ ನೀಡುವುದು ಮುಂದುವರೆದಲ್ಲಿ ಟಿ20 ವಿಶ್ವಕಪ್ ನಲ್ಲಿ 11 ರ ಬಳಗದಲ್ಲಿ ಸ್ಥಾನ ಪಡೆಯುವುದು ಕಷ್ಟಕರ ಎನ್ನಲಾಗಿದೆ.ಕಳೆದ ಮೂರು ವರ್ಷಗಳಿಂದ ವಿರಾಟ್ ಕೊಹ್ಲಿ ಎಲ್ಲಾ ಮಾದರಿಯ ಕ್ರಿಕೆಟ್ ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.

ಇತ್ತೀಚಿಗೆ ಅವರು ತಮ್ಮ ಕಳಪೆ ಪ್ರದರ್ಶನದಿಂದಾಗಿಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವದ ಜೊತೆಗೆ ಟೀಮ್ ಇಂಡಿಯಾದ ನಾಯಕತ್ವವನ್ನು ಅವರು ತ್ಯಜಿಸಬೇಕಾಗಿ ಬಂತು, ಆದಾಗ್ಯೂ ಅವರ ಪ್ರದರ್ಶನದಲ್ಲಿ ಅಂತಹ ಮಹತ್ವದ ಬದಲಾವಣೆ ಕಂಡಿಲ್ಲ. ಐ‌ಪಿ‌ಎಲ್ ನಲ್ಲಿ ಅವರು 16 ಪಂದ್ಯಗಳಿಂದ 22.73 ಸರಾಸರಿ ಹಾಗೂ 115.98 ಸ್ತ್ರೈಕ್ ರೇಟ್ ನಲ್ಲಿ ಎರಡು ಅರ್ಧಶತಕಗಳೊಂದಿಗೆ ಅವರು 341 ರನ್ ಗಳಿಸಿದ್ದರು.

ಇದನ್ನೂ ಓದಿ: Team India : ಟೀಂ ಇಂಡಿಯಾಗೆ ಹೊಸ ಕ್ಯಾಪ್ಟನ್ : ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾರತ ತಂಡ ಪ್ರಕಟ!

ಜೊತೆಗೆ ಟೆಸ್ಟ್ ಪಂದ್ಯದಲ್ಲಿಯೂ ಕೂಡ ಗಮನಾರ್ಹ ಪ್ರದರ್ಶನವನ್ನು ನೀಡುವಲ್ಲಿ ವಿಫಲರಾಗಿದ್ದಾರೆ.ಇದರಿಂದಾಗಿ ಅವರು ಐಸಿಸಿ ಶ್ರೇಯಾಂಕದಲ್ಲಿ ಮೊದಲ ಬಾರಿಗೆ ಟಾಪ್ 10 ಸ್ಥಾನದಿಂದ ಹೊರಕ್ಕೆ ಬಿದ್ದಿದ್ದರು.ಇದು ಈಗ ಕೊಹ್ಲಿ ಅವರ ಫಾರ್ಮ್ ಗೆ ಸಂಬಂಧಿಸಿದಂತೆ ಕಳವಳವನ್ನುಂಟು ಮಾಡಿದೆ.

ಈಗ ಮೂಲಗಳ ಪ್ರಕಾರ ಮುಂಬರುವ ಇಂಗ್ಲೆಂಡ್ ವಿರುದ್ಧದ ಟಿ20 ಹಾಗೂ ಏಕದಿನ ಪಂದ್ಯದ ಸರಣಿಯಲ್ಲಿ ಆಯ್ಕೆದಾರರು ಅವರ ಪ್ರದರ್ಶನದ ಮೇಲೆ ನಿಗಾ ಇಡಲಿದ್ದಾರೆ ಎನ್ನಲಾಗಿದೆ.ಈಗ ಭಾರತದ ಟೀಮ್ ಇಂಡಿಯಾದ  ತಂಡದ ಮಧ್ಯಮ ಕ್ರಮಾಂಕದಲ್ಲಿ ಕೊಹ್ಲಿ ಅವರ ಸ್ಥಾನ ಇನ್ನೂ ಖಚಿತಗೊಂಡಿಲ್ಲ.ಒಂದು ವೇಳೆ ಅವರು ಅವಕಾಶ ಪಡೆದರು ಕೂಡ ಆಯ್ಕೆದಾರರು ಅವರ ಪ್ರದರ್ಶನದ ಮೇಲೆ ನಿಗಾ ಇಡಲಿದ್ದಾರೆ ಎನ್ನಲಾಗಿದೆ.ಅವರು ಟಿ 20 ವಿಶ್ವಕಪ್ ನಲ್ಲಿ ಸ್ಥಾನ ಪಡೆಬೇಕೆಂದರೆ ಈಗ ತಮ್ಮ ಎಂದಿನ ಪ್ರದರ್ಶನಕ್ಕೆ ಮರಳಲೇ ಬೇಕಾದ ಅನಿವಾರ್ಯತೆ ಎದುರಾಗಿದೆ.

ಇದನ್ನೂ ಓದಿ: Ind vs Eng : ಟೀಂ ಇಂಡಿಯಾಗೆ ಅಸ್ತ್ರವಾಗಲಿದ್ದಾರೆ ಈ 23 ವರ್ಷದ ಆಟಗಾರ!

ಆದರೆ ಅಂತಿಮವಾಗಿ ಬಿಸಿಸಿಐ ಟಿ20 ವಿಶ್ವಕಪ್ ನ್ನು ಗಮನದಲ್ಲಿಟ್ಟುಕೊಂಡು ಯಾವ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎನ್ನುವುದನ್ನು ಕಾಯ್ದು ನೋಡಬೇಕಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News