IND vs ENG Test Cricket: ಬಿಸಿಸಿಐ ಕೇಂದ್ರ ಗುತ್ತಿಗೆ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಿದ್ದು, ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಸ್ಥಾನ ಪಡೆದಿಲ್ಲ. ಇವರಿಬ್ಬರಿಗೂ ಆಡಳಿತ ಮಂಡಳಿ ಏಕೆ ಗುತ್ತಿಗೆ ನೀಡಿಲ್ಲ ಎಂಬುದು ಇನ್ನೂ ತಿಳಿದು ಬಂದಿಲ್ಲವಾದರೂ ಇಬ್ಬರ ವಿರುದ್ಧವೂ ಶಿಸ್ತು ಕ್ರಮ ಜರುಗಿಸಲಾಗಿದೆ ಎಂಬ ಗುಮಾನಿ ವ್ಯಕ್ತವಾಗಿದೆ.


COMMERCIAL BREAK
SCROLL TO CONTINUE READING

ದಕ್ಷಿಣ ಆಫ್ರಿಕಾ ಪ್ರವಾಸದ ಮಧ್ಯೆ ಕಿಶನ್ ತವರಿಗೆ ಮರಳಿದ್ದರು. ಇಂಗ್ಲೆಂಡ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ನಂತರ ಅಯ್ಯರ್ ಅವರನ್ನು ತಂಡದಿಂದ ಕೈಬಿಡಲಾಯಿತು. ಇವರಿಬ್ಬರೂ ರಣಜಿ ಪಂದ್ಯದಲ್ಲೂ ಭಾಗವಹಿಸಿರಲಿಲ್ಲ. ಇದರಿಂದ ಮಂಡಳಿಯ ಅಸಮಾಧಾನ ಹೆಚ್ಚಿದ್ದು, ಇಬ್ಬರನ್ನೂ ಗುತ್ತಿಗೆ ಪಟ್ಟಿಗೆ ಸೇರಿಸಿಲ್ಲ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: ಕಾಂಗ್ರೆಸ್ ಆಡಳಿತದಲ್ಲಿ ಭಯೋತ್ಪಾದಾಕರ, ಉಗ್ರರ ಸ್ವರ್ಗವಾಗುತ್ತಿದೆ ಕರ್ನಾಟಕ: ಪ್ರಹ್ಲಾದ್ ಜೋಶಿ


ESPN-Cricinfo ಪ್ರಕಾರ, ತಂಡದ ಆಡಳಿತವು ಕಿಶನ್ ಜೊತೆ ಮಾತುಕತೆ ನಡೆಸಿತ್ತು. ಟೆಸ್ಟ್ ಪಂದ್ಯದಲ್ಲಿ ಆಡುವಂತೆ ಕೇಳಲಾಯಿತು. ಆದರೆ ಈ ಬಗ್ಗೆ ಇನ್ನೂ ಸಂಪೂರ್ಣವಾಗಿ ಸಿದ್ಧವಾಗಿಲ್ಲ ಎಂದು ಕಿಶನ್ ಹೇಳಿದ್ದರು. ಇದು ತಂಡದ ಆಡಳಿತ ಮಂಡಳಿಯ ಕೋಪವನ್ನು ಮತ್ತಷ್ಟು ಹೆಚ್ಚಿಸಿದೆ.


ಹಾರ್ದಿಕ್ ಐಪಿಎಲ್‌’ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದಾರೆ. ಕಿಶನ್ ಅವರದೇ ತಂಡದ ಸದಸ್ಯ. ದಕ್ಷಿಣ ಆಫ್ರಿಕಾ ಪ್ರವಾಸವನ್ನು ಮಧ್ಯದಲ್ಲೇ ಬಿಟ್ಟು ಭಾರತಕ್ಕೆ ವಾಪಸಾದ ಕಿಶನ್ ಬಹುಕಾಲ ಎಲ್ಲರಿಂದ ದೂರವೇ ಉಳಿದಿದ್ದರು. ನಂತರ ಇದ್ದಕ್ಕಿದ್ದಂತೆ ಕೆಲವು ಚಿತ್ರಗಳು ಮತ್ತು ವೀಡಿಯೊಗಳು ಕಾಣಿಸಿಕೊಂಡವು. ಅದರಲ್ಲಿ ಒಂದು ಕಿಶನ್ ಹಾರ್ದಿಕ್ ಅವರೊಂದಿಗೆ ತರಬೇತಿ ಪಡೆಯುತ್ತಿರುವುದು. ಇದಲ್ಲದೆ, ಜಿಮ್‌’ನಲ್ಲಿ ಇಬ್ಬರೂ ಒಟ್ಟಿಗೆ ವರ್ಕೌಟ್ ಕೂಡ ಮಾಡಿದ್ದರು.


ಹಾರ್ದಿಕ್ ಟೆಸ್ಟ್ ಪಂದ್ಯಗಳಿಂದ ದೂರವಿದ್ದು, ಸೀಮಿತ ಓವರ್‌’ಗಳ ಕ್ರಿಕೆಟ್‌ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಅವರಿಗೆ ರಣಜಿ ಟ್ರೋಫಿಯಲ್ಲಿ ಆಡುವುದು ಅನಿವಾರ್ಯವಲ್ಲ. ಆದರೆ ಕಿಶನ್ ಎಲ್ಲಾ ಮೂರು ಸ್ವರೂಪಗಳಲ್ಲಿ ತಂಡದ ಸದಸ್ಯರಾಗಿದ್ದಾರೆ. ಬಿಸಿಸಿಐ ರಣಜಿಯಲ್ಲಿ ಆಡುವಂತೆ ಸೂಚಿಸಿತ್ತು, ಆದರೆ ಅವರು ಅದರಿಂದ ದೂರವಿದ್ದರು.


ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಅಯ್ಯರ್ ಅವರು ಬೆನ್ನುನೋವಿನ ಸಮಸ್ಯೆಯ ಬಗ್ಗೆ ದೂರು ನೀಡಿದ್ದರು, ಆದರೆ ಬಿಸಿಸಿಐ ವೈದ್ಯಕೀಯ ತಂಡವು ಅವರು ಉತ್ತಮ ಸ್ಥಿತಿಯಲ್ಲಿದ್ದಾರೆ ಎಂದು ವರದಿ ನೀಡಿದೆ. ಇದಾದ ನಂತರವೂ ಅಯ್ಯರ್ ರಣಜಿಯಿಂದ ಅಂತರ ಕಾಯ್ದುಕೊಂಡಿದ್ದರು. ಬಿಸಿಸಿಐ ಎಲ್ಲಾ ಕ್ರಿಕೆಟಿಗರು ದೇಶೀಯ ಕ್ರಿಕೆಟ್‌’ನಲ್ಲಿ ಆಡುವಂತೆ ಆದೇಶ ಹೊರಡಿಸಿತ್ತು. ಇದಾದ ನಂತರ ಅಯ್ಯರ್ ರಣಜಿ ಪಂದ್ಯಕ್ಕೆ ಲಭ್ಯವಾದರು. ತಮಿಳುನಾಡು ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಅವರನ್ನು ಮುಂಬೈ ತಂಡದಲ್ಲಿ ಇರಿಸಲಾಗಿತ್ತು.


ಇದನ್ನೂ ಓದಿ: 42ನೇ ವಯಸ್ಸಿನಲ್ಲಿ 2ನೇ ಮದುವೆ… ಗಗನಯಾತ್ರಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರಖ್ಯಾತ ನಟಿ!


ಟಿ20 ವಿಶ್ವಕಪ್‌’ನಲ್ಲಿ ಅಯ್ಯರ್ ಮತ್ತು ಕಿಶನ್ ಆಡುತ್ತಾರಾ?


ಈ ವರ್ಷದ ಜೂನ್‌’ನಲ್ಲಿ ಟಿ20 ವಿಶ್ವಕಪ್‌ ಆಯೋಜನೆಯಾಗಲಿದೆ. ಪ್ರಸ್ತುತ ವಿವಾದವು ಅಯ್ಯರ್ ಮತ್ತು ಕಿಶನ್ ಅವರನ್ನು ಮತ್ತಷ್ಟು ತೊಂದರೆಗೊಳಿಸಬಹುದು. ಇದು ಇಬ್ಬರೂ ಟಿ20 ವಿಶ್ವಕಪ್‌’ಗೆ ಆಯ್ಕೆಯಾಗುವ ಸಾಧ್ಯತೆಗಳ ಮೇಲೆ ಗಂಭೀರವಾಗಿ ಪರಿಣಾಮ ಬೀರಲಿದೆ. ಏಕದಿನ ವಿಶ್ವಕಪ್‌ನಲ್ಲಿ ಅಯ್ಯರ್ ಅವರ ಪ್ರದರ್ಶನ ಉತ್ತಮವಾಗಿದ್ದು, 468 ರನ್ ಗಳಿಸಿದರು. ಕಿಶನ್ ಸೀಮಿತ ಓವರ್‌’ಗಳ ಕ್ರಿಕೆಟ್‌ನಲ್ಲಿ ಪರಿಣಿತ. ಆದ್ದರಿಂದ, ಟಿ20 ವಿಶ್ವಕಪ್ ಆಡದಿರುವುದು ಅವರ ವೃತ್ತಿಜೀವನಕ್ಕೆ ಬಹಳಷ್ಟು ಪೆಟ್ಟು ನೀಡುವ ಸಾಧ್ಯತೆ ಇದೆ.


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.