Actress Lena Secret Marriage: ದಕ್ಷಿಣ ಭಾರತದ ಖ್ಯಾತ ನಟಿ ಸೌತ್ ನಟಿ ಲೀನಾ ಗೌಪ್ಯವಾಗಿ ದಾಂಪತ್ಯ ಜೀವನಕ್ಕೆ ಕಾಲಿಟಿದ್ದಾರೆ. ಇದೀಗ ತನ್ನ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ವಿಷಯವನ್ನು ಬಹಿರಂಗಪಡಿಸಿದ್ದಾರೆ ಮಲಯಾಳಂ ನಟಿ.
ತಿರುವನಂತಪುರಂನ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ, ದೇಶದ ಮೊದಲ ಮಾನವ ಮಿಷನ್ ಗಗನ್ಯಾನ್ ತರಬೇತಿ ಪಡೆಯುತ್ತಿರುವ ನಾಲ್ವರು ಗಗನಯಾತ್ರಿಗಳ ಹೆಸರನ್ನು ಪ್ರಧಾನಿ ಘೋಷಿಸಿದ್ದರು. ಅದೇ ವೇಳೆ ನಾಲ್ಕು ಮಿಷನ್ ಯಾತ್ರಿಗಳ ಎದೆಯ ಮೇಲೆ ಬ್ಯಾಡ್ಜ್ ಹಾಕುವ ಮೂಲಕ ಮೋದಿ ಗೌರವಿಸಿದ್ದರು. ಈ ನಾಲ್ವರು ಮಿಷನ್ ಗಗನಯಾತ್ರಿಗಳಲ್ಲಿ ಒಬ್ಬರು ನಟಿ ಲೀನಾ ಅವರ ಪತಿ. ಅವರ ಹೆಸರು ಪ್ರಶಾಂತ್ ಬಾಲಕೃಷ್ಣನ್ ನಾಯರ್.
ಇದನ್ನೂ ಓದಿ: ಚಾಮರಾಜನಗರದಲ್ಲಿ ಬಹುನಿರೀಕ್ಷಿತ ಯುವ ಟೈಟಲ್ ಸಾಂಗ್ ರಿಲೀಸ್
ಬ್ಯಾಚ್ ಸಮಾರಂಭದ ನಂತರ, ಪ್ರಶಾಂತ್ ಬಾಲಕೃಷ್ಣನ್ ನಾಯರ್ ಅವರೊಂದಿಗಿನ ರಹಸ್ಯ ವಿವಾಹವಾಗಿರುವ ಬಗ್ಗೆ ನಟಿ Instagram ನಲ್ಲಿ ಬಹಿರಂಗಪಡಿಸಿದ್ದಾರೆ.
ಪೋಸ್ಟ್ ಶೇರ್ ಮಾಡಿರುವ ಅವರು, “ನಾನು ಪ್ರಶಾಂತ್ ಬಾಲಕೃಷ್ಣನ್ ನಾಯರ್ ಅವರನ್ನು ಮದುವೆಯಾಗಿದ್ದೇನೆ” ಎಂದು ನಟಿ ಬರೆದಿದ್ದಾರೆ.
“ನಮ್ಮ ಮದುವೆ ಕಳೆದ ತಿಂಗಳು ಜನವರಿ 17 ರಂದು ನಡೆಯಿತು. ನನ್ನ ಪತಿ ಭಾರತದ ಮೊದಲ ಮಾನವ ಬಾಹ್ಯಾಕಾಶ ಯಾನದಲ್ಲಿ ಭಾಗಿಯಾಗಿರುವುದರಿಂದ, ಈ ಸಮಾರಂಭದ ಮೊದಲು ನಾವು ನಮಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಗೌಪ್ಯವಾಗಿಟ್ಟಿದ್ದೇವೆ. ನನ್ನ ಜೀವನದ ವಿಶೇಷ ಕ್ಷಣಗಳನ್ನು ನನ್ನ ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದೆ” ಎಂದಿದ್ದಾರೆ.
ಇನ್ಸ್ಟಾಗ್ರಾಮ್ ಪೋಸ್ಟ್ ಜೊತೆಗೆ, ನಟಿ ಇಸ್ರೋಗೆ ಸಂಬಂಧಿಸಿದ ವೀಡಿಯೊವನ್ನು ಮತ್ತು ಅವರ ಮದುವೆಯ ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ. ಇವರಿಬ್ಬರು ಕುಟುಂಬಸ್ಥರು ಹಾಗೂ ವಿಶೇಷ ಸ್ನೇಹಿತರ ಸಮ್ಮುಖದಲ್ಲಿ ಮದುವೆಯಾದುದನ್ನು ಚಿತ್ರಗಳಲ್ಲಿ ಕಾಣಬಹುದು.
ಮದುವೆಯ ಚಿತ್ರದಲ್ಲಿ, ನಟಿ ದಕ್ಷಿಣ ಭಾರತದ ಮದುವೆಯ ಉಡುಪಿನಲ್ಲಿ ಕಾಣಿಸಿಕೊಂಡಿದ್ದು, ಕೆಂಪು ಮದುವೆಯ ಉಡುಪಿನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ.
ಪ್ರಶಾಂತ್ ಬಾಲಕೃಷ್ಣನ್ ನಾಯರ್ ಕೆನೆ ಬಣ್ಣದ ಸಾಂಪ್ರದಾಯಿಕ ಮದುವೆಯ ಉಡುಪನ್ನು ಧರಿಸಿದ್ದಾರೆ. ಇದರೊಂದಿಗೆ ಜೋಡಿಯ ಪೋಸ್ಟ್ ವೆಡ್ಡಿಂಗ್ ಚಿತ್ರಗಳೂ ರಿವೀಲ್ ಆಗಿದೆ.
ಇದನ್ನೂ ಓದಿ: ಕಾಂಗ್ರೆಸ್ ಆಡಳಿತದಲ್ಲಿ ಭಯೋತ್ಪಾದಾಕರ, ಉಗ್ರರ ಸ್ವರ್ಗವಾಗುತ್ತಿದೆ ಕರ್ನಾಟಕ: ಪ್ರಹ್ಲಾದ್ ಜೋಶಿ
ಅಂದಹಾಗೆ ನಟಿ ಲೀನಾ ಅವರಿಗೆ 42 ವರ್ಷ ವಯಸ್ಸಾಗಿದ್ದು, ಇದು ಎರಡನೇ ಮದುವೆ. 2004 ರಲ್ಲಿ ಅಭಿಲಾಷ್ ಕುಮಾರ್ ಎಂಬವರ ಜೊತೆ ವಿವಾಹವಾಗಿದ್ದರು. ಆದರೆ ಮದುವೆಯಾದ 9 ವರ್ಷಗಳ ನಂತರ, 2013 ರಲ್ಲಿ ವಿಚ್ಛೇದನ ಪಡೆದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.