Team India Next T20I Captain: ರೋಹಿತ್ ಶರ್ಮಾ ತಮ್ಮ ನಾಯಕತ್ವದಲ್ಲಿ ಟೀಂ ಇಂಡಿಯಾಕ್ಕೆ T20 ವಿಶ್ವಕಪ್ 2024 ಟ್ರೋಫಿಯನ್ನು ಗೆಲ್ಲುವ ಮೂಲಕ T20I ಸ್ವರೂಪಕ್ಕೆ ವಿದಾಯ ಹೇಳಿದ್ದಾರೆ. ರೋಹಿತ್ ಶರ್ಮಾ ಜೊತೆಗೆ, ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತು ಆಲ್‌ ರೌಂಡರ್ ರವೀಂದ್ರ ಜಡೇಜಾ ಕೂಡ ಟಿ 20 ಐ ಫಾರ್ಮ್ಯಾಟ್‌’ನಿಂದ ನಿವೃತ್ತಿ ಘೋಷಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ದೈವ ಕಾರ್ಯದಷ್ಟೇ ಶ್ರೇಷ್ಠವಾದದ್ದು ವೈದ್ಯರ ಕಾರ್ಯ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್


ಈಗ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂದಿರುವ ದೊಡ್ಡ ಕೆಲಸವೆಂದರೆ ಟೀಮ್ ಇಂಡಿಯಾದ ಹೊಸ T20I ನಾಯಕನನ್ನು ಆಯ್ಕೆ ಮಾಡುವುದು. ಹೊಸ ನಾಯಕನ ಆಯ್ಕೆಯು ಬಹಳ ಮಹತ್ವದ್ದಾಗಿದೆ, ಏಕೆಂದರೆ ಎರಡು ವರ್ಷಗಳ ನಂತರ T20 ವಿಶ್ವಕಪ್ 2026 ಪಂದ್ಯಾವಳಿಗೆ ಭಾರತ ಮತ್ತು ಶ್ರೀಲಂಕಾ ಆತಿಥ್ಯ ವಹಿಸಲಿದೆ.


ಟೀಂ ಇಂಡಿಯಾದ ನೂತನ ಟಿ20 ನಾಯಕನ ಕುರಿತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಹತ್ವದ ಸುಳಿವು ನೀಡಿದ್ದಾರೆ. 2024ರ ಟಿ 20 ವಿಶ್ವಕಪ್‌’ನಲ್ಲಿ ಹಾರ್ದಿಕ್ ಪಾಂಡ್ಯ ಅವರ ಆಲ್‌ರೌಂಡ್ ಪ್ರದರ್ಶನ ಮತ್ತು ರೋಹಿತ್ ನಂತರ ಅವರು ನಾಯಕರಾಗುವ ಸಾಧ್ಯತೆಯ ಕುರಿತು, ಜಯ ಶಾ ಪ್ರತಿಕ್ರಿಯೆ ನೀಡಿದ್ದು, “ಆಯ್ಕೆದಾರರು ನಾಯಕತ್ವದ ಬಗ್ಗೆ ನಿರ್ಧರಿಸುತ್ತಾರೆ. ಅವರ ಜತೆ ಮಾತನಾಡಿದ ನಂತರ ಪ್ರಕಟಿಸುತ್ತೇವೆ. ಹಾರ್ದಿಕ್ ಪಾಂಡ್ಯ ಅವರ ಫಾರ್ಮ್ ಬಗ್ಗೆ ಬಹಳಷ್ಟು ಪ್ರಶ್ನೆಗಳು ಭುಗಿಲೆದ್ದಿದ್ದವು. ಆದರೆ ಈಗ ನನ್ನನ್ನು ಸೇರಿದಂತೆ ಆಯ್ಕೆಗಾರರಿಗೆ ಪಾಂಡ್ಯ ಮೇಲೆ ನಂಬಿಕೆ ಬಂದಿದೆ” ಎಂದು ಹೇಳುವ ಮೂಲಕ ರೋಹಿತ್ ಶರ್ಮಾ ನಂತರ ಹಾರ್ದಿಕ್ ಪಾಂಡ್ಯ ಭಾರತದ ಹೊಸ ಟಿ 20 ನಾಯಕರಾಗುತ್ತಾರೆ ಎಂಬ ಸುಳಿವು ನೀಡಿದ್ದಾರೆ.


ಇದನ್ನೂ ಓದಿ: ಗೌತಮ್ ಗಂಭೀರ್ ಅಲ್ಲ, ಟೀಂ ಇಂಡಿಯಾದ ಮುಂದಿನ ಹೆಡ್ ಕೋಚ್ ಇವರೆಂದು ಖಚಿತಪಡಿಸಿದ ಜಯ್ ಶಾ! ಯಾರವರು?


ಹಾರ್ದಿಕ್ ಪಾಂಡ್ಯ ನಾಯಕನಾಗುವ ಎಲ್ಲಾ ಗುಣಗಳನ್ನು ಹೊಂದಿದ್ದಾರೆ. ಬ್ಯಾಟಿಂಗ್’ನಲ್ಲಿನ ಸಂಯಮ, ಗಂಟೆಗೆ 140 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುವ ಪ್ರತಿಭೆ, ಫೀಲ್ಡಿಂಗ್‌’ನಲ್ಲೂ ಚಾಣಾಕ್ಷತನ ನೋಡಿದರೆ ಪಾಂಡ್ಯಗೆ ಸರಿಸಾಟಿ ಯಾರೂ ಇಲ್ಲ.


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ