T20 ವಿಶ್ವ ಕಪ್ ಟೀಂನಲ್ಲಿ ಅಕ್ಟೋಬರ್ 10 ರೊಳಗೆ ಆಗಲಿದೆ ಭಾರೀ ಬದಲಾವಣೆ , ಈ ಮೂವರು ಆಟಗಾರರ ಮೇಲೆ ತೂಗುಗತ್ತಿ
ICC ನಿಯಮಗಳ ಪ್ರಕಾರ, ಎಲ್ಲಾ ದೇಶಗಳು ಅಕ್ಟೋಬರ್ 10 ರವರೆಗೆ ತಂಡದಲ್ಲಿ ಬದಲಾವಣೆಗಳನ್ನು ಮಾಡಬಹುದು. ಅಂದರೆ, ತಂಡದಲ್ಲಿ ಬದಲಾವಣೆಗಳನ್ನುತರಲು BCCI ಬಳಿ ಕೆಲವೇ ದಿನಗಳು ಮಾತ್ರ ಉಳಿದಿವೆ.
ನವದೆಹಲಿ : ಟಿ 20 ವಿಶ್ವಕಪ್‌ಗಾಗಿ, ಟೀಂ ಇಂಡಿಯಾ ತಂಡವನ್ನು ಸೆಪ್ಟೆಂಬರ್ 8 ರಂದು ಪ್ರಕಟಿಸಲಾಯಿತು. ಆದರೆ, IPL 2021ರ ಎರಡನೇ ಹಂತದಲ್ಲಿ ಕೆಲವು ಆಟಗಾರರ ಕಳಪೆ ಪ್ರದರ್ಶನದಿಂದಾಗಿ, ತಂಡದಲ್ಲಿ ಕೆಲವು ಬದಲಾವಣೆಯ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿದೆ. ICC ನಿಯಮಗಳ ಪ್ರಕಾರ, ಎಲ್ಲಾ ದೇಶಗಳು ಅಕ್ಟೋಬರ್ 10 ರವರೆಗೆ ತಂಡದಲ್ಲಿ ಬದಲಾವಣೆಗಳನ್ನು ಮಾಡಬಹುದು. ಅಂದರೆ, ತಂಡದಲ್ಲಿ ಬದಲಾವಣೆಗಳನ್ನುತರಲು BCCI ಬಳಿ ಕೆಲವೇ ದಿನಗಳು ಮಾತ್ರ ಉಳಿದಿವೆ. ಅಕ್ಟೋಬರ್ 17 ರಿಂದ ಟಿ 20 ವಿಶ್ವಕಪ್ (T20 World cup) ಆರಂಭವಾಗಲಿದೆ.
ಇದೀಗ ಕಳಪೆ ಪ್ರದರ್ಶನದ ಕಾರಣ ಕೆಲವೊಂದು ಆಟಗಾರರ ಮೇಲೆ ತೂಗುಗತ್ತಿ ನೇತಾಡುತ್ತಿದೆ.
ಹಾರ್ದಿಕ್ ಪಾಂಡ್ಯ :
ಟಿ 20 ವಿಶ್ವಕಪ್ ಮೊದಲು ಹಾರ್ದಿಕ್ ಪಾಂಡ್ಯ (Haardik Pandya) ಫಿಟ್ನೆಸ್ ಸಮಸ್ಯೆ ಎದುರಿಸುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ಅವರ ಕಳಪೆ ಫಿಟ್ನೆಸ್ ಹೊರತಾಗಿಯೂ, ಭಾರತೀಯ ಆಯ್ಕೆಗಾರರು ಅವರನ್ನು ಟಿ 20 ವಿಶ್ವಕಪ್ (T20 World cup) ತಂಡಕ್ಕೆ ಆಯ್ಕೆ ಮಾಡಿದ್ದಾರೆ. ಏಕೆಂದರೆ ಪಂದ್ಯಗಳನ್ನು ತಮ್ಮತ್ತ ತಿರುಗಿಸುವ ಅವರ ಸಾಮರ್ಥ್ಯವೇ ಈ ನಿರ್ಧಾರಕ್ಕೆ ಕಾರಣ. ಹಾರ್ದಿಕ್ ಪಾಂಡ್ಯ ಫಿಟ್ ಆಗದೇ ಇರುವ ಕಾರಣ ಇದೀಗ ಅವರ ಜಾಗದಲ್ಲಿ ಶಾರ್ದೂಲ್ ಠಾಕೂರ್ (Shardul Thakur) ಸ್ಥಾನ ಪಡೆಯಬಹುದು. ಶಾರ್ದೂಲ್ ಠಾಕೂರ್ ಅವರ ಪ್ರಸ್ತುತ ಫಾರ್ಮ್ ಅದ್ಭುತವಾಗಿದೆ ಮತ್ತು ಅವರು ಟೀಮ್ ಇಂಡಿಯಾ (Team India) ಪಾಲಿಗೆ, ಪ್ರಬಲ ಆಲ್ ರೌಂಡರ್ ಆಗಿದ್ದಾರೆ. ಶಾರ್ದೂಲ್ ಠಾಕೂರ್ ಅವರನ್ನು ICC ಟಿ 20 ವಿಶ್ವಕಪ್ 2021 ತಂಡದಲ್ಲಿ ಸ್ಟ್ಯಾಂಡ್ ಬೈ ಪ್ಲೇಯರ್ ಆಗಿ ಇರಿಸಿಕೊಳ್ಳಲಾಗಿದೆ. ಹಾರ್ದಿಕ್ ಪಾಂಡ್ಯ ಆಡದಿದ್ದರೆ ಶಾರ್ದೂಲ್ ಠಾಕೂರ್ ಗೆ ಅವಕಾಶ ಸಿಗುವುದು ಖಚಿತ.
ಇದನ್ನೂ ಓದಿ : T20 World Cup: ಟಿ 20 ವಿಶ್ವಕಪ್‌ಗೂ ಮೊದಲು ಟೀಂ ಇಂಡಿಯಾಕ್ಕೆ ಆಘಾತ
ಭುವನೇಶ್ವರ್ ಕುಮಾರ್ :
ಟಿ 20 ವಿಶ್ವಕಪ್‌ಗೂ ಮುನ್ನ ಭುವನೇಶ್ವರ್ ಕುಮಾರ್ (Bhuvaneshwar Kumar) ಪ್ರದರ್ಶನ ಬಹಿರಂಗವಾಗಿದೆ. ಐಪಿಎಲ್ ನಲ್ಲಿ ಭುವನೇಶ್ವರ್ ಕುಮಾರ್ ಬೌಲಿಂಗ್ ನೋಡಿದಾಗ ಯಾವುದೇ ಬ್ಯಾಟ್ಸ್ ಮನ್ ಯಾವುದೇ ಸಮಸ್ಯೆ ಎದುರಿಸುತ್ತಿರುವಂತೆ ಕಂಡು ಬರಲಿಲ್ಲ. ಭುವನೇಶ್ವರ್ ಕುಮಾರ್ ಫಾರ್ಮ್‌ನಲ್ಲಿಲ್ಲ. ಭುವನೇಶ್ವರ್ ಕುಮಾರ್ ಅವರ ಪ್ರದರ್ಶನ ನೋಡಿದರೆ ಅವರಿಗೆ ಟಿ 20 ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗುವುಡು ಕಷ್ಟ ಎನ್ನಲಾಗಿದೆ. ಹೀಗಿರುವಾಗ ಆಯ್ಕೆದಾರರು, ಮೊಹಮ್ಮದ್ ಸಿರಾಜ್ (Mohammed Siraj) ಮತ್ತು ಟಿ ನಟರಾಜನಂತಹ ( T. Nataraj) ವೇಗದ ಬೌಲರ್‌ಗಳಿಗೆ ಅವಕಾಶಗಳನ್ನು ನೀಡಬಹುದು.
ಸೂರ್ಯಕುಮಾರ್ ಯಾದವ್ :
ಐಪಿಎಲ್ ನಲ್ಲಿ (IPL) ಸೂರ್ಯಕುಮಾರ್ ಯಾದವ್ ಅವರ ಕಳಪೆ ಪ್ರದರ್ಶನ ಮುಂದುವರಿದಿದೆ. ಈ ಕಳಪೆ ಪ್ರದರ್ಶನದಿಂದಾಗಿ ಅಭಿಮಾನಿಗಳು ಕೂಡ ನಿರಾಸೆಗೊಂಡಿದ್ದಾರೆ. ಭಾರತೀಯ ಅಭಿಮಾನಿಗಳ ಮನಸ್ಸಿನಲ್ಲಿ ಹಲವು ರೀತಿಯ ಪ್ರಶ್ನೆಗಳು ನಿರಂತರವಾಗಿ ಉದ್ಭವಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ, ಟಿ 20 ವಿಶ್ವಕಪ್ ತಂಡದಿಂದ ಸೂರ್ಯಕುಮಾರ್ ಯಾದವ್ (Surya Kumar Yadav) ಅವರನ್ನು ಹೊರಗಿಡುವ ಬೇಡಿಕೆ ಬಂದಿದೆ. ಟಿ 20 ವಿಶ್ವಕಪ್ 2021 ರ ತಯಾರಿಗಾಗಿ ಐಪಿಎಲ್ 2021 ರ ಎರಡನೇ ಹಂತವನ್ನು ವೀಕ್ಷಿಸಲಾಗುತ್ತಿದೆ. ಇಲ್ಲಿಯವರೆಗೆ, ಭಾರತದಿಂದ ಟಿ 20 ವಿಶ್ವಕಪ್‌ಗೆ ಆಯ್ಕೆಯಾದ ಕೆಲವು ಆಟಗಾರರ ಪ್ರದರ್ಶನವು ಎರಡನೇ ಹಂತದಲ್ಲಿ ತುಂಬಾ ಕಳಪೆಯಾಗಿದೆ. ವಿಶೇಷವಾಗಿ ಸೂರ್ಯಕುಮಾರ್ ಯಾದವ್ ಅವರನ್ನು ನೋಡಿದರೆ, ಯುಎಇ ಲೀಗ್ ನಲ್ಲಿ ಕಳಪೆ ಪ್ರದರ್ಶನ ನೀಡಿದ್ದರು. ಮತ್ತೊಂದೆಡೆ, ಶ್ರೇಯಸ್ ಅಯ್ಯರ್ (Shreyas Iyer) ಯುಎಇ ಪಿಚ್‌ಗಳಲ್ಲಿ ರನ್ ಮಳೆ ಸುರಿಯುತ್ತಿರುವ ರೀತಿಯನ್ನು ಗಮನದಲ್ಲಿಟ್ಟುಕೊಂಡು, 2021 ರ ಟಿ 20 ವಿಶ್ವಕಪ್‌ಗಾಗಿ ಘೋಷಿಸಲಾದ 15 ಸದಸ್ಯರ ತಂಡದ ಮಧ್ಯಮ ಕ್ರಮಾಂಕದಲ್ಲಿ ಪ್ರಮುಖ ಬದಲಾವಣೆಯನ್ನು ಮಾಡಬಹುದು. ಸೂರ್ಯಕುಮಾರ್ ಯಾದವ್ ಅವರ ಕಳಪೆ ಫಾರ್ಮ್ ಕಾರಣದಿಂದಾಗಿ, ಈ ಬದಲಾವಣೆಯನ್ನು ಭಾರತೀಯ ತಂಡದಲ್ಲಿ ಮಾಡಬಹುದು.
ಇದನ್ನೂ ಓದಿ : Rajasthan vs Mumbai: ನಾಥನ್ ಕೌಲ್ಟರ್-ನೈಲ್, ನೀಶಂ ದಾಳಿಗೆ ತತ್ತರಿಸಿದ ರಾಜಸ್ಥಾನ ರಾಯಲ್ಸ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.