ನವದೆಹಲಿ: ವರುಣ್ ಚಕ್ರವರ್ತಿಯ ಮೊಣಕಾಲು ಈಗ ಅತ್ಯುತ್ತಮ ಸ್ಥಿತಿಯಲ್ಲಿ ಇಲ್ಲದಿರುವುದರಿಂದಾಗಿ ಮುಂಬರುವ ಟಿ20 ವಿಶ್ವಕಪ್ ನಲ್ಲಿ ಈಗ ಅವರ ಬದಲಾಗಿದೆ ಯುಜ್ವೆಂದ್ರ ಚಹಾಲ್ ಗೆ ಭಾರತೀಯ ತಂಡದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಅಕ್ಟೋಬರ್ 10 ನೇ ತಾರೀಕಿನ ವರೆಗೆ ವೈದ್ಯಕೀಯ ತಂಡವು ಅವರ ಮೇಲೆ ನಿಗಾವಹಿಸಲಿದೆ. ಒಂದು ವೇಳೆ ಗುಣಮುಖರಾಗದೆ ಇದ್ದಲ್ಲಿ ಯುಜ್ವೆಂದ್ರ ಚಹಾಲ್ (Yuzvendra Chahal) ಗೆ ಸ್ಥಾನ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: 2022 ರ ಬರ್ಮಿಂಗ್ ಹ್ಯಾಮ್ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಮಹಿಳಾ ಕ್ರಿಕೆಟ್...!
ಅಕ್ಟೋಬರ್ 24 ರಂದು ಪಾಕ್ ವಿರುದ್ಧ ಪಂದ್ಯದಲ್ಲಿ ವರುಣ್ ಅವರನ್ನು ಉಳಿಸಿಕೊಳ್ಳಲು ವೈದ್ಯಕೀಯ ತಂಡವು ತೀವ್ರ ಹರಸಾಹಸಪಡುತ್ತಿದೆ.ಆದರೆ ಅವರೂ ಮೂರು ವಾರಗಳ ಕಾಲ ನಡೆಯುವ ಟೂರ್ನಿಗೆ ಎಷ್ಟರ ಮಟ್ಟಿಗೆ ಸದೃಡವಾಗಿರಲಿದ್ದಾರೆ ಎನ್ನುವುದು ಇನ್ನೂ ಖಚಿತವಾಗಿಲ್ಲ.
'100 ರಷ್ಟು ಫಿಟ್ ಆಗಿರಲು, ನಂತರ ಅವರಿಗೆ ವ್ಯಾಪಕವಾದ ಪುನರ್ವಸತಿ ಬೇಕಾಗಬಹುದು ಆದರೆ ಇದೀಗ, ಟಿ 20 ವಿಶ್ವಕಪ್ ಸಮಯದಲ್ಲಿ ಅವರ ನೋವು ನಿರ್ವಹಣೆಯ ಮೇಲೆ ಗಮನ ಕೇಂದ್ರೀಕರಿಸಲಾಗುವುದು."ಎಂದು ಮೂಲಗಳು ತಿಳಿಸಿವೆ,
ವರುಣ್ ಇದುವರೆಗಿನ ಐಪಿಎಲ್ ಪಂದ್ಯದಲ್ಲಿ 13 ಪಂದ್ಯಗಳಲ್ಲಿ 15 ವಿಕೆಟ್ ಗಳೊಂದಿಗೆ 6.73 ಎಕಾನಮಿ ದರದಲ್ಲಿ ಹೊಂದಿದ್ದಾರೆ. ಅದಕ್ಕಿಂತ ಹೆಚ್ಚಾಗಿ, ಅವರು ಹೆಚ್ಚಿನ ತಂಡಗಳಿಗೆ ಶತ್ರುಗಳಾಗಿದ್ದಾರೆ, ಹಾಗಾಗಿ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಪಾತ್ರವಹಿಸಬಹುದು ಎನ್ನುವುದು ತಂಡದ ಆಡಳಿತ ಮಂಡಳಿಯ ವಿಚಾರವಾಗಿದೆ.
ಐಪಿಎಲ್ 2021 ರಲ್ಲಿ ಇದುವರೆಗೆ ಹೆಚ್ಚಿನ ವಿಕೆಟ್ ಪಡೆದಿರುವ ಸ್ಪಿನರ್ ಗಳು ಸ್ಪಿನ್ನರ್ಗಳಿಂದ ಹೆಚ್ಚಿನ ವಿಕೆಟ್ಗಳು:
10 - ಯುಜ್ವೇಂದ್ರ ಚಾಹಲ್
8 - ಅಕ್ಸರ್ ಪಟೇಲ್
8 - ವರುಣ್ ಚಕ್ರವರ್ತಿ
7 - ಸುನಿಲ್ ನರೈನ್
7 - ರವಿ ಬಿಷ್ಣೋಯ್
'ನನಗೆ ತಿಳಿದಿರುವಂತೆ, ಕೆಕೆಆರ್ನ ಸಹಾಯಕ ಸಿಬ್ಬಂದಿ ವರುಣ್ಗಾಗಿ ವಿಸ್ತೃತವಾದ ಶಕ್ತಿ ಮತ್ತು ಕಂಡೀಷನಿಂಗ್ ಚಾರ್ಟ್ ಅನ್ನು ಸಿದ್ಧಪಡಿಸಿದ್ದಾರೆ, ಇದು ಅವರ ದೊಡ್ಡ ಗಾಯ ನಿರ್ವಹಣಾ ಕಾರ್ಯಕ್ರಮದ ಭಾಗವಾಗಿದೆ. ಅವರಿಗೆ ನೋವು ನಿವಾರಕ ಚುಚ್ಚುಮದ್ದನ್ನು ನೀಡಲಾಗಿದೆ' ಎಂದು ಮೂಲಗಳು ಹೇಳಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ