ನವದೆಹಲಿ: ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2021 ಟೂರ್ನಿಯ 51 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ರಾಜಸ್ಥಾನ ರಾಯಲ್ಸ್ ವಿರುದ್ಧ ಎಂಟು ವಿಕೆಟ್ ಗಳ ಸುಲಭ ಗೆಲುವನ್ನು ಸಾಧಿಸಿದೆ.
ಇದನ್ನೂ ಓದಿ-IPL 2021: ಎಂ.ಎಸ್.ಧೋನಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಮುಂಬೈ ಇಂಡಿಯನ್ಸ್ (Mumbai Indians) ತಂಡವು ಆರಂಭದಲ್ಲಿಯೇ ತನ್ನ ನಿರ್ಧಾರ ಸರಿ ಎನ್ನುವಂತೆ ಬೌಲಿಂಗ್ ದಾಳಿಯನ್ನು ಮಾಡಿತು. 27 ರನ್ ಗಳಾಗುವಷ್ಟರಲ್ಲಿ ಜೈಶ್ವಾಲ್ ವಿಕೆಟ್ ಕಳೆದುಕೊಂಡ ರಾಜಸ್ಥಾನ ತಂಡವು ನಂತರ ಮೇಲೇಳಲೆ ಇಲ್ಲ, ಮುಂಬೈ ಇಂಡಿಯನ್ಸ್ ಪರವಾಗಿ ಮಾರಕ ಬೌಲಿಂಗ್ ದಾಳಿ ನಡೆಸಿದ ನಾಥನ್ ಕೌಲ್ಟರ್-ನೈಲ್, ಜೀಶಂ ಕ್ರಮವಾಗಿ 4 ಮತ್ತು 3 ವಿಕೆಟ್ ಗಳನ್ನು ಕಬಳಿಸುವ ಮೂಲಕ ರಾಜಸ್ಥಾನ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.
ಇದನ್ನೂ ಓದಿ- IND VS SL: ಕೊರೊನಾ ಕಾರಣ ಭಾರತ-ಶ್ರೀಲಂಕಾ ಸರಣಿ ಮೇಲೆ ಬಿತ್ತು ಬ್ರೇಕ್! ಇಲ್ಲಿದೆ ಹೊಸ ಶೆಡ್ಯೂಲ್!
ರಾಜಸ್ತಾನದ ಪರವಾಗಿ ಲೆವಿಸ್ ಗಳಿಸಿದ 24 ರನ್ ಗಳೇ ವೈಯಕ್ತಿಕ ಗರಿಷ್ಟ ಮೊತ್ತವಾಗಿತ್ತು. 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಳ್ಳುವ ಮೂಲಕ ಕೇವಲ 90 ರನ್ ಗಳನ್ನು ಗಳಿಸಲಷ್ಟೇ ಶಕ್ತವಾಯಿತು.
5⃣0⃣* Runs
2⃣5⃣ Balls
5⃣ Fours
3⃣ Sixes@ishankishan51 set the stage on fire 🔥 🔥 & hammered a sensational match-winning half-century. 💪 💪 #VIVOIPL #RRvMI @mipaltanWatch that stroke-filled display 🎥 🔽https://t.co/nrcD87jm1g
— IndianPremierLeague (@IPL) October 5, 2021
ಇನ್ನೊಂದೆಡೆಗೆ ರಾಜಸ್ಥಾನ ತಂಡವು ನೀಡಿದ 91 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು ಇಶಾನ್ ಕಿಶನ್ ಅವರ ಭರ್ಜರಿ ಬ್ಯಾಟಿಂಗ್ ನಿಂದಾಗಿ ಕೇವಲ 8.2 ಓವರ್ ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 94 ರನ್ ಗಳನ್ನು ಗಳಿಸಿತು.ಇಶಾನ್ ಕಿಶನ್ ಕೇವಲ 25 ಎಸೆತಗಳಲ್ಲಿ ಮೂರು ಭರ್ಜರಿ ಸಿಕ್ಸರ್ ಹಾಗೂ ಐದು ಬೌಂಡರಿಗಳ ಮೂಲಕ 50 ರನ್ ಗಳಿಸಿದರು.
ಇದನ್ನೂ ಓದಿ-"ರಾಹುಲ್ ದ್ರಾವಿಡ್ ಭಾರತ ಕ್ರಿಕೆಟ್ ತಂಡಕ್ಕೆ ಪೂರ್ಣಾವಧಿ ಕೋಚ್ ಆಗಬಾರದು"
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.