Indian Cricket Team: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌’ನ ಅಂತಿಮ ಪಂದ್ಯವನ್ನು ಆಡಲು ಟೀಮ್ ಇಂಡಿಯಾ ಐಪಿಎಲ್ 2023ರ ಬಳಿಕ ಇಂಗ್ಲೆಂಡ್‌’ಗೆ ಪ್ರಯಾಣಿಸಬೇಕಿದೆ. ಈ ವರ್ಷದ ಸೆಪ್ಟೆಂಬರ್‌’ನಲ್ಲಿ ಏಷ್ಯಾ ಕಪ್ ಮತ್ತು ಅಕ್ಟೋಬರ್-ನವೆಂಬರ್’ನಲ್ಲಿ ODI ವಿಶ್ವಕಪ್ ಕೂಡ ನಡೆಯಲಿದೆ. ಆದರೆ ಈ ಟೂರ್ನಿಗಳಿಗೂ ಮುನ್ನ ಟೀಂ ಇಂಡಿಯಾಗೆ ಭಾರೀ ಹೊಡೆತ ಬಿದ್ದಿದೆ. ಭಾರತ ತಂಡದ ಮ್ಯಾಚ್ ವಿನ್ನರ್ ಆಟಗಾರ ಏಷ್ಯಾಕಪ್ ಮತ್ತು ODI ವಿಶ್ವಕಪ್‌’ನಂತಹ ದೊಡ್ಡ ಪಂದ್ಯಾವಳಿಗಳಿಂದ ಹೊರಗುಳಿದಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Health Tips: ಒಂದಲ್ಲ, ಎರಡಲ್ಲ…11 ಔಷಧೀಯ ಗುಣವುಳ್ಳ ಈ ಬಣ್ಣದ ಅಕ್ಕಿಯ ಗಂಜಿ ಕ್ಯಾನ್ಸರ್ ರೋಗವನ್ನು ಬುಡಸಮೇತ ಕಿತ್ತುಹಾಕುತ್ತೆ!


ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಕಂ ಬ್ಯಾಟ್ಸ್‌ಮನ್ ರಿಷಬ್ ಪಂತ್, 30 ಡಿಸೆಂಬರ್ 2022 ರಂದು ಕಾರು ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡಿದ್ದರು. ಮಾಧ್ಯಮ ವರದಿಗಳ ಪ್ರಕಾರ, ಸೆಪ್ಟೆಂಬರ್‌’ನಲ್ಲಿ ನಡೆಯಲಿರುವ ಏಷ್ಯಾ ಕಪ್ 2023 ಮತ್ತು ಅಕ್ಟೋಬರ್-ನವೆಂಬರ್‌’ನಲ್ಲಿ ನಡೆಯಲಿರುವ 2023ರ ODI ವಿಶ್ವಕಪ್‌’ನಿಂದ ಪಂತ್ ಹೊರಗುಳಿದಿದ್ದಾರೆ.


ಕ್ರಿಕ್‌’ಬಝ್‌ ವರದಿಯ ಪ್ರಕಾರ, ಪಂತ್ ಅವರ ಮರಳುವಿಕೆಗೆ ಇನ್ನಷ್ಟು ಸಮಯ ತೆಗೆದುಕೊಳ್ಳುತ್ತದೆ. ಬೇಗ ಚೇತರಿಕೆ ಕಂಡರೆ ಅವರು ಜನವರಿ ವೇಳೆಗೆ ಮೈದಾನಕ್ಕೆ ಬರುವ ಸಾಧ್ಯತೆ ಇದೆ. ಇನ್ನು ಪಂತ್ ನಿರೀಕ್ಷೆಗಿಂತ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಅವರು ಫಿಟ್ ಆಗಲು ಇನ್ನೂ ಕೂಡ ಏಳರಿಂದ ಎಂಟು ತಿಂಗಳು ಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ.


ರಿಷಬ್ ಪಂತ್ ಇತ್ತೀಚೆಗೆ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಕದೆಹಲಿ ಕ್ಯಾಪಿಟಲ್ಸ್ ಪಂದ್ಯವನ್ನು ನೋಡಲೆಂದು ಆಗಮಿಸಿದ್ದರು. ಈ ವೇಳೆ ಅವರು ಊರುಗೋಲುಗಳ ಸಹಾಯದಿಂದ ನಡೆಯುತ್ತಿರುವುದು ಕಂಡುಬಂದಿತ್ತು. ಯಾವುದೇ ಸಹಾಯವಿಲ್ಲದೆ ನಡೆಯಲು ಕನಿಷ್ಠ ಕೆಲವು ವಾರಗಳನ್ನು ತೆಗೆದುಕೊಳ್ಳುತ್ತದೆ ಎಂದು ಅವರ ಆಪ್ತ ಮೂಲಗಳು ಹೇಳಿವೆ,  


2013ರ ನಂತರ ಟೀಂ ಇಂಡಿಯಾ ಒಂದೇ ಒಂದು ಐಸಿಸಿ ಟ್ರೋಫಿಯನ್ನು ಗೆದ್ದಿಲ್ಲ. ಆದ್ದರಿಂದ ಭಾರತೀಯ ಅಭಿಮಾನಿಗಳು ಈ ಬಾರಿ ಟೀಂ ಇಂಡಿಯಾ ಮೇಲೆ ಹೆಚ್ಚಿನ ನಿರೀಕ್ಷೆಯನ್ನು ಹೊಂದಿದ್ದಾರೆ. ಆದರೆ ಈ ದೊಡ್ಡ ಟೂರ್ನಿಯಲ್ಲಿ ಟೀಂ ಇಂಡಿಯಾ ರಿಷಬ್ ಪಂತ್ ಅವರನ್ನು ಮಿಸ್ ಮಾಡಿಕೊಳ್ಳುವುದು ಖಚಿತ.


ಇದನ್ನೂ ಓದಿ: Team India ನಾಯಕ ರೋಹಿತ್ ಶರ್ಮಾ ಪ್ರತೀ ಪಂದ್ಯಕ್ಕೆ ಪಡೆಯೋ ಸಂಭಾವನೆ ಎಷ್ಟು ಗೊತ್ತಾ? ತಿಳಿದರೆ ಶಾಕ್ ಆಗೋದು ಪಕ್ಕಾ


ಡಿಸೆಂಬರ್ 30 ರಂದು ಮುಂಜಾನೆ 5.30ರ ಸುಮಾರಿಗೆ ರೂರ್ಕಿಯ ನರ್ಸನ್ ಗಡಿಯಲ್ಲಿರುವ ಹಮ್ಮದ್‌ಪುರ್ ಝಲ್ ಬಳಿ ರಿಷಬ್ ಪಂತ್ ಅವರ ಕಾರು ರೈಲಿಂಗ್‌’ಗೆ ಡಿಕ್ಕಿ ಹೊಡೆದಿತ್ತು. ಈ ಅಪಘಾತದ ನಂತರ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಅಪಘಾತದಲ್ಲಿ ಪಂತ್ ಗಂಭೀರವಾಗಿ ಗಾಯಗೊಂಡಿದ್ದರು. ಈ ಘಟನೆ ನಡೆದ ತಕ್ಷಣ ಅವರನ್ನು ಡೆಹ್ರಾಡೂನ್‌ ಆಸ್ಪತ್ರೆಗೆ ದಾಖಲಿಸಲಾಯಿತು. ಇದಾದ ಬಳಿಕ ಅವರನ್ನು ಮುಂಬೈಗೆ ವಿಮಾನ ಮೂಲಕ ಕರೆದುಕೊಂಡು ಹೋಗಿ ಅಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.