IND vs PAK World Cup 2023: ವಿಶ್ವಕಪ್ 2023ರ ವೇಳಾಪಟ್ಟಿಯಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ವಿಶ್ವಕಪ್ 2023ರ ಹೈ-ಪ್ರೊಫೈಲ್ ಪಂದ್ಯದ ಜೊತೆ ಇತರ ದೊಡ್ಡ ಪಂದ್ಯಗಳ ದಿನಾಂಕಗಳು ಸಹ ಬದಲಾಗಲಿವೆ ಎಂದು ಹೇಳಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಇಶಾನ್ ಜೊತೆ ಶುಭ್ಮನ್ ಅಬ್ಬರ: ದೋಸ್ತಿಗಳ ಬ್ಯಾಟಿಂಗ್ ದಾಳಿಗೆ 6 ವರ್ಷ ಹಳೆಯ ದಾಖಲೆ ಉಡೀಸ್


ಮೂಲಗಳ ಪ್ರಕಾರ, ಭಾರತ ಮತ್ತು ಪಾಕಿಸ್ತಾನ ನಡುವಿನ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ಈಗ ಅಕ್ಟೋಬರ್ 15 ರಂದು ಅಲ್ಲ, ಅಕ್ಟೋಬರ್ 14 ರಂದು ಅಹಮದಾಬಾದ್‌ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ನವರಾತ್ರಿ ಹಬ್ಬದ ಕಾರಣ ಭಾರತ ಮತ್ತು ಪಾಕಿಸ್ತಾನ ನಡುವಿನ ಈ ಮಹಾ ಪಂದ್ಯದ ದಿನಾಂಕ ಬದಲಾಗಲಿದೆ.


ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ವಿಶ್ವಕಪ್ 2023 ರ ಹೈ-ಪ್ರೊಫೈಲ್ ಪಂದ್ಯದೊಂದಿಗೆ, ಒಟ್ಟು 6 ಪಂದ್ಯಗಳ ದಿನಾಂಕಗಳಲ್ಲಿ ಬದಲಾವಣೆ ಇರುತ್ತದೆ. RevSportz ವರದಿ ಪ್ರಕಾರ, ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ವಿಶ್ವಕಪ್ ಪಂದ್ಯವನ್ನು ಅಕ್ಟೋಬರ್ 12 ರ ಬದಲಿಗೆ ಅಕ್ಟೋಬರ್ 10 ರಂದು ನಡೆಸುವ ಸಾಧ್ಯತೆ ಇದೆ. ನ್ಯೂಜಿಲೆಂಡ್ ಮತ್ತು ನೆದರ್ಲೆಂಡ್ಸ್ ನಡುವಿನ ವಿಶ್ವಕಪ್ ಪಂದ್ಯವನ್ನು ಅಕ್ಟೋಬರ್ 9 ರ ಬದಲಿಗೆ ಅಕ್ಟೋಬರ್ 12 ರಂದು, ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯವನ್ನು ಅಕ್ಟೋಬರ್ 14 ರ ಬದಲಿಗೆ ಅಕ್ಟೋಬರ್ 15 ರಂದು ನಡೆಸುವ ಸಾಧ್ಯತೆ ಇದೆ,


2023 ರ ವಿಶ್ವಕಪ್‌ ನ ನವೀಕರಿಸಿದ ವೇಳಾಪಟ್ಟಿಯನ್ನು ಆಗಸ್ಟ್ 2 ಅಥವಾ 3 ರಂದು ಬಿಡುಗಡೆ ಮಾಡಬಹುದು. ಇತ್ತೀಚೆಗಷ್ಟೇ ಬಿಸಿಸಿಐ ಕಾರ್ಯದರ್ಶಿ 2023ರ ವಿಶ್ವಕಪ್‌ ನ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಬಹುದು ಎಂದು ಹೇಳಿದ್ದರು.


ICC ಕ್ರಿಕೆಟ್ ವಿಶ್ವಕಪ್ 5 ಅಕ್ಟೋಬರ್ 2023 ರಿಂದ 19 ನವೆಂಬರ್ 2023 ರವರೆಗೆ ಭಾರತದ ಆತಿಥ್ಯದಲ್ಲಿ ಆಡಲಾಗುತ್ತದೆ. ಪಂದ್ಯಾವಳಿಯಲ್ಲಿ 10 ತಂಡಗಳು ಭಾಗವಹಿಸಲಿವೆ. ಒಟ್ಟು 48 ಪಂದ್ಯಗಳು ನಡೆಯಲಿವೆ. ಭಾರತ ಆತಿಥ್ಯ ವಹಿಸಲಿರುವ ಈ ಹೈ ಪ್ರೊಫೈಲ್ ಕ್ರಿಕೆಟ್ ಪಂದ್ಯಾವಳಿಯ ಪಂದ್ಯಗಳ ತಾತ್ಕಾಲಿಕ ಸಮಯವನ್ನು ಬೆಳಗ್ಗೆ 10:30 ಮತ್ತು ಮಧ್ಯಾಹ್ನ 2 ಗಂಟೆಗೆ ಇರಿಸಲಾಗಿದೆ. ವಿಶ್ವಕಪ್ ಸಮೀಪಿಸುತ್ತಿದ್ದಂತೆ ಪಂದ್ಯಗಳ ಸಮಯದಲ್ಲೂ ಬದಲಾವಣೆಗಳನ್ನು ಮಾಡಬಹುದು.


2023ರ ವಿಶ್ವಕಪ್‌ ನಲ್ಲಿ ಭಾರತದ ವೇಳಾಪಟ್ಟಿ


  • ಭಾರತ vs ಆಸ್ಟ್ರೇಲಿಯಾ, 8 ಅಕ್ಟೋಬರ್, ಚೆನ್ನೈ

  • ಭಾರತ vs ಅಫ್ಘಾನಿಸ್ತಾನ, 11 ಅಕ್ಟೋಬರ್, ದೆಹಲಿ

  • ಭಾರತ vs ಪಾಕಿಸ್ತಾನ, 14 ಅಕ್ಟೋಬರ್, ಅಹಮದಾಬಾದ್

  • ಭಾರತ vs ಬಾಂಗ್ಲಾದೇಶ, 19 ಅಕ್ಟೋಬರ್, ಪುಣೆ

  • ಭಾರತ vs ನ್ಯೂಜಿಲೆಂಡ್. ಅಕ್ಟೋಬರ್ 22 ಧರ್ಮಶಾಲಾ

  • ಭಾರತ vs ಇಂಗ್ಲೆಂಡ್, 29 ಅಕ್ಟೋಬರ್, ಲಕ್ನೋ

  • ಭಾರತ ವಿರುದ್ಧ ನೆದರ್ಲ್ಯಾಂಡ್ಸ್, ನವೆಂಬರ್ 2, ಮುಂಬೈ


ಇದನ್ನೂ ಓದಿ: ವಿಂಡೀಸ್ ಮಂಡಳಿಯ ಕಳಪೆ ನಿರ್ವಹಣೆಯ ಬಗ್ಗೆ ಹಾರ್ದಿಕ್ ಪಾಂಡ್ಯ ಆಕ್ರೋಶ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ