Hardik Pandya on West Indies Management: ಮೂರನೇ ಏಕದಿನ ಪಂದ್ಯವನ್ನು ಭಾರತ 200 ರನ್ ಗಳಿಂದ ಗೆದ್ದು ಸರಣಿಯನ್ನು 2-1 ರಿಂದ ವಶಪಡಿಸಿಕೊಂಡಿದೆ. ಮೂರನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಹಾರ್ದಿಕ್ ಪಾಂಡ್ಯ ನಾಯಕತ್ವ ವಹಿಸಿದ್ದರು. ಮತ್ತೊಮ್ಮೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ (Rohit Sharma-Virat Kohli)ಗೆ ವಿಶ್ರಾಂತಿ ನೀಡಲಾಗಿತ್ತು.
ಇದನ್ನೂ ಓದಿ: ಒಂದೇ ಪಂದ್ಯದಲ್ಲಿ 10 ಬೌಂಡರಿ, 13 ಸಿಕ್ಸರ್, 137 ರನ್ ಚಚ್ಚಿದ ಈ ದಾಂಡಿಗ ಟಿ20 ಸರಣಿಗೆ ಕಂ-ಬ್ಯಾಕ್
ಈ ಎಲ್ಲಾ ಬದಲಾವಣೆಗಳ ಬಳಿಕವೂ ಟೀಂ ಇಂಡಿಯಾ ಅಮೋಘ ಆಟ ಪ್ರದರ್ಶಿಸಿ ಜಯಭೇರಿ ಬಾರಿಸಿತ್ತು. ಭಾರತ ತಂಡ ಗೆದ್ದರೂ ಭಾರತ ತಂಡದ ಹಂಗಾಮಿ ನಾಯಕ ಹಾರ್ದಿಕ್ ಪಾಂಡ್ಯ ವೆಸ್ಟ್ ಇಂಡೀಸ್ ಬೋರ್ಡ್ ಬಗ್ಗೆ ಅಸಮಾಧಾನ ತೋರಿದ್ದಾರೆ. ಪಂದ್ಯದ ನಂತರ ಹಾರ್ದಿಕ್ ವೆಸ್ಟ್ ಇಂಡೀಸ್ ಬೋರ್ಡ್ ಗೆ ದೂರು ನೀಡಿ ತಂಡಗಳು ಬಂದಾಗ ವೆಸ್ಟ್ ಇಂಡೀಸ್ ಬೋರ್ಡ್ ಏನು ಮಾಡಬೇಕು ಎಂಬುದನ್ನು ಹೇಳಿದ್ದಾರೆ.
“ಈ ಮೈದಾನದಲ್ಲಿ ಆಡುವುದು ಅದ್ಭುತ ವಿಷಯವೇ. ಇದು ಜಗತ್ತಿನ ಅತ್ಯುತ್ತಮ ಮೈದಾನಗಳಲ್ಲಿ ಒಂದು. ಆದರೆ ಮುಂದಿನ ಬಾರಿ ನಾವು ವೆಸ್ಟ್ ಇಂಡೀಸ್’ಗೆ ಬಂದಾಗ ಎಲ್ಲವೂ ಉತ್ತಮವಾಗಿರಬಹುದು ಎಂದು ಭಾವಿಸುತ್ತೇನೆ. ಪ್ರಯಾಣದಿಂದ ಹಿಡಿದು ಬಹಳಷ್ಟು ವಿಷಯಗಳನ್ನು ನಿರ್ವಹಿಸುವವರೆಗೆ… ವೆಸ್ಟ್ ಇಂಡೀಸ್ ಕ್ರಿಕೆಟ್’ಗೆ ಇವೆಲ್ಲವನ್ನೂ ಪರಿಶೀಲಿಸುವ ಸಮಯ ಇದು ಎಂದು ನಾನು ಭಾವಿಸುತ್ತೇನೆ. ನಮಗೆ ಐಷಾರಾಮಿ ಬೇಕಾಗಿಲ್ಲ, ಆದರೆ ಅವರು ಕೆಲವು ಮೂಲಭೂತ ಅಗತ್ಯಗಳನ್ನು ನೋಡಿಕೊಳ್ಳಬೇಕು" ಎಂದು ಅಸಮಾಧಾನ ಹೊರಹಾಕಿದ್ದಾರೆ.
ಮತ್ತೊಂದೆಡೆ, ರೋಹಿತ್ ಮತ್ತು ಕೊಹ್ಲಿಗೆ ವಿಶ್ರಾಂತಿ ನೀಡಿರುವ ಬಗ್ಗೆ ಹಂಗಾಮಿ ನಾಯಕ ಹಾರ್ದಿಕ್ ಮಾತನಾಡಿ, "ವಿರಾಟ್ ಮತ್ತು ರೋಹಿತ್ ತಂಡದ ಪ್ರಮುಖ ಭಾಗವಾಗಿದ್ದಾರೆ. ಆದರೆ ರಿತುರಾಜ್ ಗಾಯಕ್ವಾಡ್ ಅವರಂತಹ ಆಟಗಾರರಿಗೆ ಅವಕಾಶ ಸಿಗಲಿ ಎಂಬ ಕಾರಣಕ್ಕೆ ಅವರಿಗೆ ವಿಶ್ರಾಂತಿ ನೀಡುವುದು ಅಗತ್ಯವಾಗಿತ್ತು” ಎಂದು ಹೇಳಿದ್ದಾರೆ.
ಪಂದ್ಯದ ಬಗ್ಗೆ ಮಾತನಾಡುವುದಾದರೆ, ಶುಭ್ಮನ್ ಗಿಲ್ 92 ಎಸೆತಗಳಲ್ಲಿ 85 ರನ್ ಗಳಿಸಿದ್ದಾರೆ. ಜೊತೆಗೆ ಇಶಾನ್ ಕಿಶನ್ (63 ಎಸೆತಗಳಲ್ಲಿ 77 ರನ್) ಜೊತೆಯಲ್ಲಿ 143 ರನ್ ಜೊತೆಯಾಟ ನಡೆಸಿದರು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಐದು ವಿಕೆಟ್’ಗೆ 351 ರನ್ ಗಳಿಸಿತ್ತು.
ಇದನ್ನೂ ಓದಿ: ಇಶಾನ್ ಜೊತೆ ಶುಭ್ಮನ್ ಅಬ್ಬರ: ದೋಸ್ತಿಗಳ ಬ್ಯಾಟಿಂಗ್ ದಾಳಿಗೆ 6 ವರ್ಷ ಹಳೆಯ ದಾಖಲೆ ಉಡೀಸ್
ಸಂಜು ಸ್ಯಾಮ್ಸನ್ 41 ಎಸೆತಗಳಲ್ಲಿ 51 ರನ್ ಗಳಿಸುವ ಮೂಲಕ ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ಭದ್ರಪಡಿಸಿದರು, ನಾಯಕ ಹಾರ್ದಿಕ್ ಪಾಂಡ್ಯ 52 ಎಸೆತಗಳಲ್ಲಿ ಐದು ಸಿಕ್ಸರ್ ಮತ್ತು ನಾಲ್ಕು ಬೌಂಡರಿಗಳ ಸಹಾಯದಿಂದ ಅಜೇಯ 70 ರನ್ ಗಳಿಸಿದರು. ಇದಕ್ಕೆ ಉತ್ತರ ನೀಡಲೆಂದು ಬಂದ ಕೆರಿಬಿಯನ್ ತಂಡ 35.3 ಓವರ್ ಗಳಲ್ಲಿ 151 ರನ್ ಗಳಿಗೆ ಆಲೌಟ್ ಆಯಿತು. ಮುಖೇಶ್ ಕುಮಾರ್ ಏಳು ಓವರ್ ಗಳಲ್ಲಿ 30 ರನ್ ನೀಡಿ ಮೂರು ವಿಕೆಟ್ ಪಡೆದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ