ನವದೆಹಲಿ : ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ.  ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತರಾದ ನಂತರವೂ ಧೋನಿಯ (Dhoni) ಜನಪ್ರಿಯತೆ ಸ್ವಲ್ಪವೂ ಕಡಿಮೆಯಾಗಿಲ್ಲ. ಇಂದಿಗೂ ಅವರ  ಅಭಿಮಾನಿಗಳು ಧೋನಿಯನ್ನು ಬಹಲ್ ಪ್ರೀತಿಸುತ್ತಾರೆ. ಇಷ್ಟಿದ್ದರೂ ಇದೀಗ ನಡೆದಿರುವ ಘಟನೆ, ಧೋನಿ ಅಭಿಮಾನಿ ಬಳಗವನ್ನು ಕೆರಳಿಸಿದೆ. 


COMMERCIAL BREAK
SCROLL TO CONTINUE READING

ಧೋನಿಯ ಟ್ವಿಟ್ಟರ್ ನಿಂದ 'ಬ್ಲೂ ಟಿಕ್' ರಿಮೂವ್ :
ಧೋನಿಯ ಅಧಿಕೃತ ಟ್ವಿಟರ್ (Twitter) ಖಾತೆಯಿಂದ 'ಬ್ಲೂ ಟಿಕ್' ಅನ್ನು ತೆಗೆದುಹಾಕಲಾಗಿದೆ. ಪಬ್ಲಿಕ್ ಫಿಗರ್ ಗಳಿಗೆ ಖ್ಯಾತ ನಾಮರಿಗೆ ಸಾಮಾಜಿಕ ಮಾಧ್ಯಮದಲ್ಲಿ(Social media), 'ಬ್ಲೂ ಟಿಕ್' ನೀಡಲಾಗುತ್ತದೆ. ಆದರೆ, ಈಗ ಟ್ವಿಟರ್ ಅದನ್ನು ಧೋನಿಯ ಖಾತೆಯಿಂದ 'ಬ್ಲೂ ಟಿಕ್ ತೆಗೆದುಹಾಕಿದೆ.  ಟ್ವಿಟರ್ ನ ಈ ಕ್ರಮ ಧೋನಿ ಅಭಿಮಾನಿಗಳನ್ನು ಕೆರಳಿಸಿದೆ. 


'Rajiv Gandhi Khel Ratna Award' ಅನ್ನು ಇನ್ಮುಂದೆ 'Major Dhyan Chand Khel Ratna Award'ಎಂದು ಗುರುತಿಸಲಾಗುವುದು: PM Modi


ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಇತರ ಆಟಗಾರರಂತೆ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿಲ್ಲ. Instagram, Facebook ಅಥವಾ Twitter ಯಾವುದರಲ್ಲೂ ಎಲ್ಲಾ ಆಟಗಾರರಂತೆ ಸಕ್ರಿಯವಾಗಿಲ್ಲ.  ಜನವರಿ 8, 2021 ರಂದು ಅವರು ತಮ್ಮ ಕೊನೆಯ ಟ್ವಿಟ್ಟರ್ ಪೋಸ್ಟ್ ಅನ್ನು ಶೇರ್ ಮಾಡಿದ್ದರು. ಈ ಪೋಸ್ಟ್  ನಲ್ಲಿ ಧೋನಿ, ತಮ್ಮ ಜಮೀನಿನಲ್ಲಿ ಬೆಳೆದ ಸ್ಟ್ರಾಬೆರಿಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಟ್ವಿಟರ್‌ನಲ್ಲಿ ಹೆಚ್ಚು ಸಕ್ರಿಯವಾಗಿರದ ಕಾರಣ ಈ ರೀತಿ ಮಾಡಲಾಗಿದೆ ಎನ್ನಲಾಗಿದೆ.


ಟ್ವಿಟ್ಟರ್ ಕ್ರಮಕ್ಕೆ ಅಭಿಮಾನಿಗಳ ಸಿಟ್ಟು : 
ಭಾರತದ ಮಾಜಿ ನಾಯಕ ಧೋನಿ ಅವರ ಖಾತೆಯಿಂದ 'ಬ್ಲೂ ಟಿಕ್' ತೆಗೆ ಹಾಕಿರುವುದು ಧೋನಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.  ಅಭಿಮಾನಿಗಳು ಟ್ವಿಟರ್‌ ವಿರುದ್ಧ ತಮ್ಮ ಅಕ್ರೋಶ ಹೊರಹಾಕುತ್ತಿದ್ದಾರೆ.


 


ಇದನ್ನೂ ಓದಿ : Tokyo Olympics: ಕೈ ಜಾರಿದ ಕಂಚಿನ ಪದಕ, ಭಾರತೀಯ ಮಹಿಳಾ ಹಾಕಿ ತಂಡದ ಕನಸು ಭಗ್ನ


ಧೋನಿ ಜುಲೈ 2019 ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ವಿಶ್ವಕಪ್ ಸೆಮಿಫೈನಲ್‌ನಲ್ಲಿ ತಮ್ಮ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನು ಆದಿದ್ದರು.  15 ಆಗಸ್ಟ್ 2020 ರಂದು ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ಧೋನಿ ನಿವೃತ್ತರಾದರು. ಧೋನಿಯ ನಾಯಕತ್ವದಲ್ಲಿ, ಭಾರತವು ಐಸಿಸಿ ವರ್ಲ್ಡ್ ಟಿ 20 (Icc world t-20) (2007), ಕ್ರಿಕೆಟ್ ವಿಶ್ವಕಪ್ (2011) ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿ (2013) ಪ್ರಶಸ್ತಿಯನ್ನು ಗೆದ್ದಿದೆ. ಇದರ ಹೊರತಾಗಿ, ಭಾರತವು ಮೊದಲ ಬಾರಿಗೆ 2009 ರಲ್ಲಿ ಟೆಸ್ಟ್‌ಗಳಲ್ಲಿ ನಂಬರ್ ಒನ್ ಆಗಿತ್ತು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ