MS Dhoni: ಅಭಿಮಾನಿಗಳ ಹೃದಯ ಗೆಲ್ಲುತ್ತೆ ಎಂಎಸ್ ಧೋನಿಯ ಈ ಶೈಲಿ

'ಕ್ಯಾಪ್ಟನ್ ಕೂಲ್' ಎಂ.ಎಸ್.ಧೋನಿಗೆ ಎಲ್ಲೆಡೆ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು ತಮ್ಮ ಅದ್ಭುತ ಬ್ಯಾಟಿಂಗ್‌ನಿಂದ ಮಾತ್ರವಲ್ಲ ಅವರ ಗುಣದಿಂದಲೂ ಕೂಡ ಎಲ್ಲರ ಹೃದಯವನ್ನು ಗೆಲ್ಲುತ್ತಾರೆ. 

Written by - Yashaswini V | Last Updated : Jul 5, 2021, 08:10 AM IST
  • ಎಂ.ಎಸ್.ಧೋನಿ ಅವರ ಅಭಿಮಾನಿಗಳ ಕುತೂಹಲಕಾರಿ ಕಥೆ
  • 2008 ರಲ್ಲಿ ಮಹಿಯನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ
  • ಎಂ.ಎಸ್.ಧೋನಿ ಅವರನ್ನು ಭೇಟಿಯಾಗಲು ಶಿಮ್ಲಾದಿಂದ ರತ್ನಾಗಿರಿಗೆ ವರ್ಗಾವಣೆ ಪಡೆದಿದ್ದರು
MS Dhoni: ಅಭಿಮಾನಿಗಳ ಹೃದಯ ಗೆಲ್ಲುತ್ತೆ ಎಂಎಸ್ ಧೋನಿಯ ಈ ಶೈಲಿ title=
Image courtesy: Instagram/MeenaBaghHomes

ನವದೆಹಲಿ: ಟೀಮ್ ಇಂಡಿಯಾದ ಮಾಜಿ ನಾಯಕ ಎಂ.ಎಸ್.ಧೋನಿ (MS Dhoni) ಅವರ ಅಂತರರಾಷ್ಟ್ರೀಯ ವೃತ್ತಿಜೀವನವು ಒಂದು ವರ್ಷದ ಹಿಂದೆ ಕೊನೆಗೊಂಡಿರಬಹುದು, ಆದರೆ ಅವರ ಜನಪ್ರಿಯತೆ ಮಾತ್ರ ಕೊಂಚವೂ ಕಡಿಮೆಯಾಗಿಲ್ಲ. ಇದಕ್ಕೆ  ಮತ್ತೊಮ್ಮೆ ಸಾಕ್ಷಿ ಕಂಡುಬಂದಿದೆ.

ಇತ್ತೀಚಿಗೆ ಹಿಮಾಚಲಕ್ಕೆ ತೆರಳಿದ್ದ ಧೋನಿ:
ಎಂ.ಎಸ್.ಧೋನಿ (MS Dhoni)  ಇತ್ತೀಚೆಗೆ ತಮ್ಮ ಕುಟುಂಬದೊಂದಿಗೆ ಹಿಮಾಚಲ ಪ್ರದೇಶದ (Himachala Pradesh) ರತ್ನಾಗಿರಿಯಲ್ಲಿ ವಿಹಾರಕ್ಕೆ ಹೋಗಿದ್ದರು. ಅಲ್ಲಿ ಅವರು ಮೀನಾಬಾಗ್ ಹೋಟೆಲ್‌ನಲ್ಲಿ ತಂಗಿದ್ದರು. 

ಇದನ್ನೂ ಓದಿ- MS Dhoni: ಸ್ನೇಹಿತನ ಪ್ರಾಣ ಉಳಿಸಲು ಹೆಲಿಕಾಪ್ಟರ್ ಕಳುಹಿಸಿದ್ದ ಧೋನಿ, ಆದರೆ...

ಧೋನಿ ಅವರನ್ನು ಭೇಟಿ ಮಾಡಲು ಉತ್ಸುಕರಾಗಿದ್ದ ಸಿಬ್ಬಂದಿ:
ಎಂ.ಎಸ್.ಧೋನಿ  (MS Dhoni) ಅವರನ್ನು ಭೇಟಿಯಾಗುವುದು ಮೀನಾಬಾಗ್ ಹೋಟೆಲ್‌ನ  (MeenaBagh Hotel)  ಎಲ್ಲ ಸಿಬ್ಬಂದಿಗೆ ಒಂದು ಸ್ಮರಣೀಯ ಕ್ಷಣವಾಗಿದೆ. ಅವರಲ್ಲಿ ಓರ್ವ ಸಿಬ್ಬಂದಿಗೆ (ದೇವ್ ಎಂಬ ವ್ಯಕ್ತಿಗೆ) 13 ವರ್ಷಗಳ ಕನಸಾಗಿತ್ತು. ಅದಕ್ಕಾಗಿಯೇ ದೇವ್ ಅವರು ಶಿಮ್ಲಾ (Shimla) ದಿಂದ ರತ್ನಾಗಿರಿಗೆ ವರ್ಗಾವಣೆಯನ್ನು ಪಡೆದರು, ಇದರಿಂದಾಗಿ ಅವರು ಮಹಿಯನ್ನು ಭೇಟಿಯಾಗುವ ಅವಕಾಶ ಪಡೆದರು.

2008 ರಲ್ಲಿ ಆಸೆ ಈಡೇರಿರಲಿಲ್ಲ:
2008 ರಲ್ಲಿ ಟೂರ್ನಮೆಂಟ್ ಆಡಲು ಎಂ.ಎಸ್.ಧೋನಿ ಹಿಮಾಚಲ ಪ್ರದೇಶದ ರೋಹರು ಪ್ರದೇಶಕ್ಕೆ ಬಂದಿದ್ದರು. ಆ ಸಮಯದಲ್ಲಿ ದೇವ್ ಅಲ್ಲಿದ್ದರು, ಅದಾಗ್ಯೂ ಅವರು 'ಕ್ಯಾಪ್ಟನ್ ಕೂಲ್' (Captain Cool) ಧೋನಿ ಅವರನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಪೊಲೀಸರ ಕಟ್ಟುನಿಟ್ಟಾದ ಕಾವಲಿನಿಂದಾಗಿ ಧೋನಿ ಅವರ ಭೇಟಿ ಸಾಧ್ಯವಾಗಿರಲಿಲ್ಲ.

MS Dhoni Reuters

ಇದನ್ನೂ ಓದಿ- Video: MS Dhoni ಮನೆಗೆ ಪುಟ್ಟ ಅತಿಥಿ ಆಗಮನ, ವಿಡಿಯೋ ಶೇರ್ ಮಾಡಿ 'ಟಚ್‌ವುಡ್' ಎಂದ ಸಾಕ್ಷಿ

ಮಹಿ ಆಟೋಗ್ರಾಫ್ :
ಇದೀಗ ಕೊನೆಗೂ 13 ವರ್ಷಗಳ ನಂತರ, ದೇವ್ ಅವರ ಕನಸು ಈಡೇರಿದೆ. ಅವರು ಎಂ.ಎಸ್.ಧೋನಿ ಅವರನ್ನು ಭೇಟಿಯಾಗಿದ್ದಲ್ಲದೆ, ತಮ್ಮ ಮೊಬೈಲ್ ಕವರ್‌ನಲ್ಲಿ ಮಹಿ ಅವರ ಆಟೋಗ್ರಾಫ್ ಕೂಡ ಪಡೆದಿದ್ದಾರೆ. ಇದರ ಚಿತ್ರವನ್ನು ಮೀನಾಬಾಗ್ ಹೋಟೆಲ್ ಸ್ವತಃ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News