ಕೋಚ್ ರಾಹುಲ್ ದ್ರಾವಿಡ್’ಗೆ ನಾಳೆಯೇ ಕೊನೆಯ ಪಂದ್ಯ: ವಿದಾಯಕ್ಕೂ ಮುನ್ನ ‘ದಿ ವಾಲ್’ ಹೇಳಿದ್ದೇನು? ವಿಡಿಯೋ
Rahul Dravid Video: ಬಿಸಿಸಿಐ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಅವರ ವೀಡಿಯೊವನ್ನು ಪೋಸ್ಟ್ ಮಾಡಿದ್ದು ರಾಹುಲ್ ತಮ್ಮ ಈ ಸುದೀರ್ಘ ಪ್ರಯಾಣದ ಬಗ್ಗೆ ಮಾತನಾಡಿದ್ದಾರೆ
Rahul Dravid Video: ಭಾರತ ತಂಡ ಟಿ20 ವಿಶ್ವಕಪ್’ನಲ್ಲಿ ತನ್ನ ಕೊನೆಯ ಪಂದ್ಯವನ್ನು ಜೂನ್ 29 ಶನಿವಾರದಂದು ಆಡಲಿದೆ. ಈ ಪಂದ್ಯದ ಫಲಿತಾಂಶ ಏನೇ ಆಗಿರಬಹುದು. ಆದರೆ ಫೈನಲ್ ಫೈಟ್ ಮುಗಿಯುತ್ತಿದ್ದಂತೆ ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ವಿದಾಯ ಘೋಷಿಸಲಿದ್ದಾರೆ.
ಇದಕ್ಕೂ ಮೊದಲು, ಬಿಸಿಸಿಐ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಅವರ ವೀಡಿಯೊವನ್ನು ಪೋಸ್ಟ್ ಮಾಡಿದ್ದು ರಾಹುಲ್ ತಮ್ಮ ಈ ಸುದೀರ್ಘ ಪ್ರಯಾಣದ ಬಗ್ಗೆ ಮಾತನಾಡಿದ್ದಾರೆ
ಇದನ್ನೂ ಓದಿ: ಟೆಸ್ಟ್’ನಲ್ಲಿ ದ್ವಿಶತಕ ಬಾರಿಸಿ ವಿಶ್ವದಾಖಲೆ ಸೃಷ್ಟಿಸಿದ ಶೆಫಾಲಿ!
2021ರ ಟಿ20 ವಿಶ್ವಕಪ್ ಬಳಿಕ ದ್ರಾವಿಡ್ ತಕ್ಷಣ ತಂಡದ ಜವಾಬ್ದಾರಿ ವಹಿಸಿಕೊಂಡರು. ಅವರ ಕೋಚ್ ಅಡಿಯಲ್ಲಿ ಟೀಮ್ ಇಂಡಿಯಾ ICC ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ODI ವಿಶ್ವಕಪ್’ನ ಫೈನಲ್ ಪ್ರವೇಶಿಸಿದೆ. ಆದರೆ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಇದೀಗ ಭಾರತ ಟಿ20 ವಿಶ್ವಕಪ್-2024ರ ಫೈನಲ್’ಗೆ ಲಗ್ಗೆ ಇಟ್ಟಿದ್ದು, ಟ್ರೋಫಿ ಗೆಲ್ಲುತ್ತಾ ಎಂದು ಕಾದುನೋಡಬೇಕಿದೆ.
ಬಿಸಿಸಿಐ ದ್ರಾವಿಡ್ ಅವರನ್ನು ಸಂದರ್ಶನ ಮಾಡಿದೆ. ಆದರೆ ಅದರಲ್ಲಿ ಸ್ವಲ್ಪ ಭಾಗವನ್ನು ಮಾತ್ರ ಬಿಡುಗಡೆ ಮಾಡಿದೆ. ಪೂರ್ಣ ಸಂದರ್ಶನ ಇನ್ನಷ್ಟೇ ಹೊರಬರಲಿದೆ.
ದ್ರಾವಿಡ್ ಮಾತನಾಡಿದ್ದು, "ನಾನು ನನ್ನ ಪ್ರಯಾಣವನ್ನು ಆನಂದಿಸಿದ್ದೇನೆ. ಇದು ನನಗೆ ಉತ್ತಮ ಕಲಿಕೆಯ ಅನುಭವ. ಈ ಪ್ರಯಾಣದಲ್ಲಿ ನನ್ನ ಕುಟುಂಬವೂ ನನಗೆ ಬೆಂಬಲ ನೀಡಿದೆ. ಕಳೆದ ಎರಡೂವರೆ ವರ್ಷಗಳಿಂದ ನಾನು ತಂಡದೊಂದಿಗೆ ಇದ್ದೇನೆ. ನನ್ನ ಜೊತೆ ನನ್ನ ಕುಟುಂಬವೂ ನಿಂತಿದೆ” ಎಂದು ಹೇಳಿದ್ದಾರೆ.
"ನನ್ನ ಜೊತೆ ಕೆಲಸ ಮಾಡಿದ ಕೋಚಿಂಗ್ ಸಿಬ್ಬಂದಿ, ಸಂಪೂರ್ಣ ಸಹಾಯಕ ಸಿಬ್ಬಂದಿ ಎಲ್ಲರೂ ನನಗೆ ಉತ್ತಮ ಅನುಭವ ನೀಡಿದ್ದಾರೆ. ನಾವು ಅನೇಕ ಉತ್ತಮ ಫಲಿತಾಂಶಗಳನ್ನು ಸಾಧಿಸಿದ್ದೇವೆ. ಕೆಲವೊಮ್ಮೆ ನಮ್ಮ ಪರವಾಗಿ ಇರದಿರಬಹುದು. ಆದರೆ ಅದರ ಭಾಗವಾಗಿದ್ದೇವೆ ಎಂಬುದು ಸಂತಸ. ಕೋಚ್ ಆಗಿ ಮತ್ತು ಕ್ರಿಕೆಟ್ ತಂಡದ ಪ್ರಯಾಣದಲ್ಲಿ ನನಗೆ ಅತ್ಯಂತ ಮುಖ್ಯವಾದ ವಿಷಯವೆಂದರೆ ನಾನು ಸಂಪಾದಿಸಿದ ಸ್ನೇಹ” ಎಂದು ಹೇಳಿದ್ದಾರೆ.
ರಾಹುಲ್ ದ್ರಾವಿಡ್ ಟೀಂ ಇಂಡಿಯಾದೊಂದಿಗೆ ಎರಡೂವರೆ ವರ್ಷಗಳಿಂದ ಅದ್ಭುತ ಬಾಂಧವ್ಯ ಹೊಂದಿದ್ದಾರೆ. ಕೋಚ್ ಆಗುವುದಕ್ಕೂ ಮುನ್ನ ಈ ದಿಗ್ಗಜ ಬ್ಯಾಟ್ಸ್’ಮನ್ ದೀರ್ಘಕಾಲದವರೆಗೆ ಭಾರತೀಯ ಕ್ರಿಕೆಟ್’ಗೆ ಕೊಡುಗೆ ನೀಡಿದ್ದಾರೆ. ದ್ರಾವಿಡ್ ಅಂಡರ್-19 ತಂಡದ ಕೋಚ್ ಆಗಿದ್ದು ಅಲ್ಲಿಂದ ರಿಷಬ್ ಪಂತ್, ಇಶಾನ್ ಕಿಶನ್, ಕುಲದೀಪ್ ಯಾದವ್, ಸರ್ಫರಾಜ್ ಖಾನ್ ರಂತಹ ಆಟಗಾರರು ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಕೊಡುಗೆಯಾಗಿ ನೀಡಿದ ಕೀರ್ತಿ ಅವರದ್ದು.
ಇದನ್ನೂ ಓದಿ: ಔಷಧಿಯೇ ಇಲ್ಲದೆ ಯೂರಿಕ್ ಆಸಿಡ್ ಕಡಿಮೆಯಾಗಬೇಕೇ? ಮನೆಯಂಗಳದಲ್ಲೇ ಸಿಗುವ ಈ ಎಲೆಯನ್ನು ಜಗಿಯಿರಿ!
ಭಾರತ-ಎ ತಂಡದ ಕೋಚ್ ಆಗಿದ್ದಾಗ ಅನೇಕ ಆಟಗಾರರಿಗೆ ತರಬೇತಿ ನೀಡಿದ್ದಾರೆ. ಇನ್ನು ದ್ರಾವಿಡ್ ದೀರ್ಘಕಾಲ ಎನ್ ಸಿ ಎ ಮುಖ್ಯಸ್ಥರಾಗಿದ್ದರು. ದೇಶೀಯ ಕ್ರಿಕೆಟ್’ಗೆ ಸಾಕಷ್ಟು ಕೊಡುಗೆ ನೀಡಿರುವ ದ್ರಾವಿಡ್, ಟೀಂ ಇಂಡಿಯಾದ ಕೋಚ್ ಹುದ್ದೆಯಿಂದ ಕೆಳಗಿಳಿದ ಬಳಿಕ ಏನು ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ