ಮುಂಬೈ : ಇಂಗ್ಲೆಂಡ್ ಪ್ರವಾಸ ಸಂಬಂಧ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಆಟಗಾರರು ಕೊರೋನಾ ನಿರ್ಲಕ್ಷಿಸದಂತೆ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿದೆ.


COMMERCIAL BREAK
SCROLL TO CONTINUE READING

ಬ್ರಿಟನ್ ವಿಮಾನ ಏರುವ ಮೊದಲು ಯಾರಿಗಾದರೂ ಪಾಸಿಟಿವ್(Covid positive) ದೃಢಪಟ್ಟರೆ, ಅವರನ್ನು ಇಡೀ ಸರಣಿಯಿಂದ ದೂರ ಇರಿಸಲಾಗುವುದು ಎಂದು ಎಚ್ಚರಿಸಿದೆ. ಕುಟುಂಬ ಸದಸ್ಯರನ್ನು ಕೂಡ ಜಾಗೃತೆಯಿಂದ ನೋಡಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದೆ.


ಇದನ್ನೂ ಓದಿ : ದೀದಿ ಸರ್ಕಾರದಲ್ಲಿ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿಗೆ ಸಚಿವ ಸ್ಥಾನ


ಐಪಿಎಲ್(IPL) ಅನ್ನು ಅನಿರ್ದಿಷ್ಟಾವಧಿಗೆ ಮುಂದೂಡಿರುವುದರಿಂದ ಬಿಸಿಸಿಐ ಹೆಚ್ಚು ಜಾಗೃತೆ ವಹಿಸಲಿದೆ ಎಂದು ಸಂಬಂಧಿತ ಅಧಿಕಾರಿಗಳು ತಿಳಿಸಿವೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಗೆ ಇಂಗ್ಲೆಂಡ್ ವಿರುದ್ಧದ ಸುದೀರ್ಘ ಫಾರ್ಮಾಟ್ ಗಾಗಿ ಜಂಬೊ ತಂಡವನ್ನು ಬಿಸಿಸಿಐ ಆಯ್ಕೆ ಮಾಡಿದೆ.


ಇದನ್ನೂ ಓದಿ : Wrestler Mruder Case: ಪರಾರಿಯಾದ ಪೈಲ್ವಾನ್ ಸುಶೀಲ್ ಕುಮಾರ್ ವಿರುದ್ಧ ದೆಹಲಿ ಪೋಲೀಸರ Lookout Notice


ಪ್ರಸ್ತುತ ಎಲ್ಲಾ ಆಟಗಾರರು(Cricket Players) ತಮ್ಮ ಮನೆಗಳಲ್ಲಿದ್ದಾರೆ. ಸರಣಿ ದೀರ್ಘ ಅವಧಿಯಾಗಿರುವ ಕಾರಣ ಐಸೋಲೇಷನ್ ನಂತಹ ನಿರ್ಬಂಧಗಳೊಂದಿಗೆ ಕುಟುಂಬ ಸದಸ್ಯರಿಗೂ ಅನುಮತಿಸಲಾಗಿದೆ. ಕೆಲವೇ ದಿನಗಳಲ್ಲಿ ತಂಡ ವಿಶೇಷ ವಿಮಾನದಲ್ಲಿ ಬ್ರಿಟನ್ ಗೆ ಹಾರಲಿದೆ. ಮುಂಬೈಗೆ ಆಗಮಿಸಿದ ನಂತರ 14 ದಿನಗಳ ಕ್ವಾರಂಟೈನ್ ಗೆ ಒಳಗಾಗಿ ನಂತರ ಆಟಗಾರರು ವಿಮಾನ ಏರಲಿದ್ದಾರೆ.


ಇದನ್ನೂ ಓದಿ : ಕರೋನಾ ಲಸಿಕೆ ಹಾಕಿಸಿಕೊಂಡ ವಿರಾಟ್ ಕೊಹ್ಲಿ; ಅಭಿಮಾನಿಗಳೊಂದಿಗೆ ಫೋಟೋ ಶೇರ್ ಮಾಡಿಕೊಂಡ ಆಟಗಾರ


ಮುಂಬೈ(Mumbai) ಆಗಮಿಸಿದ ಆಟಗಾರರಿಗೆ ಎರಡು ಬಾರಿ ಆರ್ಟಿಪಿಸಿಆರ್ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಯಾರಿಗಾದರೂ ಪಾಸಿಟಿವ್ ಬಂದರೆ ಅವರು ಭಾರತದಲ್ಲಿಯೇ ಉಳಿಯಬೇಕಾಗುತ್ತದೆ. ಚೇತರಿಕೆಯ ಬ್ರಿಟನ್ಗ ತೆರಳಲು ಚಾರ್ಟರ್ ವಿಮಾನಗಳ ವ್ಯವಸ್ಥೆ ಮಾಡುವುದಿಲ್ಲ ಎಂದು ಬಿಸಿಸಿಐ ಕಡ್ಡಿಮುರಿದಂತೆ ಹೇಳಿದೆ. ಹಾಗಾಗಿ ಆಟಗಾರರು ಮುಂಬೈ ತಲುಪುವವರೆಗೂ ಎಲ್ಲಿಗೂ ತೆರಳದೆ, ಮನೆಯಲ್ಲಿಯೇ ಇರಬೇಕೆಂದು ಟೀಮ್ ಇಂಡಿಯಾ ಫಿಸಿಯೋ ಯೋಗೇಶ್ ಪಾಮರ್ ಸೂಚಿಸಿದ್ದಾರೆ. ಟೀಮ್ ಇಂಡಿಯಾ ತಂಡ ಬ್ರಿಟನ್ ಗೆ ತೆರಳಿದ ನಂತರ ಅಲ್ಲಿ ಇನ್ನೂ 10 ದಿನಗಳ ಕಾಲ ಕ್ವಾರಂಟೈನ್ನಲ್ಲಿ ಇರಬೇಕಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.