ಕರೋನಾ ಲಸಿಕೆ ಹಾಕಿಸಿಕೊಂಡ ವಿರಾಟ್ ಕೊಹ್ಲಿ; ಅಭಿಮಾನಿಗಳೊಂದಿಗೆ ಫೋಟೋ ಶೇರ್ ಮಾಡಿಕೊಂಡ ಆಟಗಾರ

ವಿರಾಟ್ ಕೊಹ್ಲಿ ಸೋಮವಾರ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ  ಫೋಟೋವನ್ನು ಹಂಚಿಕೊಂಡಿದ್ದಾರೆ. ತಾವು ಕರೋನಾ ಲಸಿಕೆ ಹಾಕಿಸಿಕೊಂಡಿರುವ ಮಾಹಿತಿಯನ್ನು ಕೊಹ್ಲಿ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅಲ್ಲದೆ ಎಲ್ಲರೂ ಶೀಘ್ರ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.  

Written by - Ranjitha R K | Last Updated : May 10, 2021, 02:22 PM IST
  • ಕರೋನಾ ಲಸಿಕೆ ಹಾಕಿಸಿಕೊಂಡ ಟೀಂ ಇಂಡಿಯಾ ನಾಯಕ
  • ಅಭಿಮಾನಿಗಳೊಂದಿಗೆ ಫೋಟೋ ಶೇರ್ ಮಾಡಿದ ಕೊಹ್ಲಿ
  • ಶೀಘ್ರ ಎಲ್ಲರೂ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ
ಕರೋನಾ ಲಸಿಕೆ ಹಾಕಿಸಿಕೊಂಡ ವಿರಾಟ್ ಕೊಹ್ಲಿ; ಅಭಿಮಾನಿಗಳೊಂದಿಗೆ ಫೋಟೋ ಶೇರ್ ಮಾಡಿಕೊಂಡ ಆಟಗಾರ title=
ಕರೋನಾ ಲಸಿಕೆ ಹಾಕಿಸಿಕೊಂಡ ಟೀಂ ಇಂಡಿಯಾ ನಾಯಕ (photo instagram)

ನವದೆಹಲಿ : ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, (Virat Kohli) ಕರೋನಾ ಲಸಿಕೆಯ ಮೊದಲ ಡೋಸ್ ಅನ್ನು ಹಾಕಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ 2021ನಲ್ಲಿ (IPL) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಾಯಕತ್ವ ವಹಿಸಿದ್ದರು. ಲೀಗ್‌ನ ಬಯೋ ಬಬಲ್‌ನಲ್ಲಿ ಹಲವಾರು ಕರೋನ (Covid-19) ಪ್ರಕರಣಗಳು ವರದಿಯಾದ ನಂತರ ಪಂದ್ಯವನ್ನು ಅನಿರ್ದಿಷ್ಟವಾಗಿ ಮುಂದೂಡಲಾಯಿತು.

ವಿರಾಟ್ ಕೊಹ್ಲಿ (Virat Kohli) ಸೋಮವಾರ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ  ಫೋಟೋವನ್ನು ಹಂಚಿಕೊಂಡಿದ್ದಾರೆ. ತಾವು ಕರೋನಾ ಲಸಿಕೆ (COVID Vaccine) ಹಾಕಿಸಿಕೊಂಡಿರುವ ಮಾಹಿತಿಯನ್ನು ಕೊಹ್ಲಿ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅಲ್ಲದೆ ಎಲ್ಲರೂ ಶೀಘ್ರ ಲಸಿಕೆ (Vaccine) ಹಾಕಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.  

 
 
 
 

 
 
 
 
 
 
 
 
 
 
 

A post shared by Virat Kohli Simp Account. (@virat.kohli.galaxy)

 

ಇದನ್ನೂ ಓದಿ : ವಿರುಷ್ಕಾ Ketto campaign ಗೆ ಸಿಗುತ್ತಿದೆ ಭಾರೀ ಸ್ಪಂದನೆ ; 24 ಗಂಟೆಯಲ್ಲಿ 3.6 ಕೋಟಿ ಸಂಗ್ರಹ

ವಿರಾಟ್ ಕೊಹ್ಲಿ ಮೊದಲು ಶಿಖರ್ ಧವನ್ , ಅಜಿಂಕ್ಯ ರಹಾನೆ (Ajinkya Rahane)  ಮತ್ತು ಉಮೇಶ್ ಯಾದವ್ ಕೂಡ ಕರೋನಾ ಲಸಿಕೆ ಪಡೆದಿದ್ದಾರೆ. ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ನಾಗರಿಕರಿಗೆ ಸರ್ಕಾರ ಲಸಿಕೆ ನೀಡಲು ಪ್ರಾರಂಭಿಸಿದೆ.

ಟೀಮ್ ಇಂಡಿಯಾ (Team India) ಜೂನ್ 2 ರಂದು ಇಂಗ್ಲೆಂಡ್‌ (England) ಪ್ರವಾಸ ಕೈಗೊಳ್ಳಲಿದೆ. ಇದಕ್ಕೂ ಮೊದಲು ತಂಡದ ಆಟಗಾರರಿಗೆ ಲಸಿಕೆ ಹಾಕಿಸಲಾಗುತ್ತಿದೆ.  ಜೂನ್ 18 ರಿಂದ 22 ರವರೆಗೆ ಟೀಮ್ ಇಂಡಿಯಾ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ನ ಫೈನಲ್ ಪಂದ್ಯವನ್ನು ಆಡಲಿದೆ. ಇದರ ನಂತರ, ಅವರು ಆಗಸ್ಟ್-ಸೆಪ್ಟೆಂಬರ್ ನಲ್ಲಿ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಕೂಡಾ ಆಡಲಿದೆ. 

ಇದನ್ನೂ ಓದಿ : ಉಳಿದಿರುವ ಐಪಿಎಲ್ ಪಂದ್ಯಗಳನ್ನು ನಡೆಸಲು ಸಿದ್ದವೆಂದ ಶ್ರೀಲಂಕಾ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News