ನವದೆಹಲಿ : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ (West Bengal Assembly Election) ಮಮತಾ ಬ್ಯಾನರ್ಜಿ (Mamta Banerjee) ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) 200 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೊಮ್ಮೆ ಸರ್ಕಾರ ರಚಿಸಿದೆ. ಈ ಬಾರಿ ಭಾರತದ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಕೂಡ ಟಿಎಂಸಿಯಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಮನೋಜ್ ತಿವಾರಿ 32 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದರು.
ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಮನೋಜ್ ತಿವಾರಿ :
ಭಾರತದ ಮಾಜಿ ಬ್ಯಾಟ್ಸ್‌ಮನ್ ಮನೋಜ್ ತಿವಾರಿ (Manoj Tiwary) ಪಶ್ಚಿಮ ಬಂಗಾಳ ಚುನಾವಣೆಗೆ ಮುನ್ನ ತೃಣಮೂಲ ಕಾಂಗ್ರೆಸ್ (TMC) ಸೇರಿದ್ದರು. ಶಿಬಪುರ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮನೋಜ್ ತಿವಾರಿ, ಬಿಜೆಪಿಯ (BJP) ರತಿನ್ ಚಕ್ರವರ್ತಿ ವಿರುದ್ಧ 32 ಸಾವಿರಕ್ಕೂ ಅಧಿಕ ಮತಗಳಿಂದ ಜಯ ಗಳಿಸಿದ್ದಾರೆ. 'ನಾನು ಚುನಾವಣೆ ಗೆಲುವಿಗೆ ಬೇಕಾಗುವ ಎಲ್ಲಾ ಸಿದ್ಧತೆ ನಡೆಸಿದ್ದೆ, ನನ್ನ ಗೆಲುವಿಗಾಗಿ ಬಹಳ ಶ್ರಮ ವಹಿಸಿದ್ದೆ ಎಂದು ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಮನೋಜ್ ತಿವಾರಿ ಹೇಳಿದ್ದರು.
This swearing-in ceremony has been an unprecedented experience for me. I would like to thank our favourite DIDI @MamataOfficial & my brother @abhishekaitc for having faith on me and giving this opportunity to serve the people of Bengal.
A new journey begins!#AITC #JoyBangla pic.twitter.com/WvbkfVrsSr
— MANOJ TIWARY (@tiwarymanoj) May 10, 2021
ಇದನ್ನೂ ಓದಿ : Wrestler Mruder Case: ಪರಾರಿಯಾದ ಪೈಲ್ವಾನ್ ಸುಶೀಲ್ ಕುಮಾರ್ ವಿರುದ್ಧ ದೆಹಲಿ ಪೋಲೀಸರ Lookout Notice
ಮನೋಜ್ ತಿವಾರಿಗೆ ಸಚಿವ ಸ್ಥಾನ :
ಚುನಾವಣೆಯಲ್ಲಿ ಜಯಗಳಿಸಿದ ಮನೋಜ್ ತಿವಾರಿಗೆ, ಮಮತಾ ಬ್ಯಾನರ್ಜಿ ದೊಡ್ಡ ಜವಾಬ್ದಾರಿಯನ್ನು ನೀಡಿದ್ದಾರೆ. 43 ನಾಯಕರ ಪ್ರಮಾಣ ವಚನ ಸ್ವೀಕಾರದ ವೇಳೆ, ಮನೋಜ್ ತಿವಾರಿ ಕೂಡಾ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಮಮತಾ (Mamta Banerjee) ಸರ್ಕಾರದಲ್ಲಿ ಮನೋಜ್ ತಿವಾರಿಗೆ ರಾಜ್ಯ ಕ್ರೀಡಾ ಸಚಿವರಾಗಿ ಜವಾಬ್ದಾರಿ ನೀಡಲಾಗಿದೆ.
ಇದನ್ನೂ ಓದಿ : ಕರೋನಾ ಲಸಿಕೆ ಹಾಕಿಸಿಕೊಂಡ ವಿರಾಟ್ ಕೊಹ್ಲಿ; ಅಭಿಮಾನಿಗಳೊಂದಿಗೆ ಫೋಟೋ ಶೇರ್ ಮಾಡಿಕೊಂಡ ಆಟಗಾರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.