WTC Final 2023 IND vs AUS: ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ನ ಅಂತಿಮ ಪಂದ್ಯಕ್ಕೂ ಮುನ್ನ, ಆಸ್ಟ್ರೇಲಿಯಾದ ವೇಗದ ಬೌಲರ್ ಜೋಶ್ ಹೇಜಲ್‌ವುಡ್ ತಮ್ಮ ಗಾಯದ ಬಗ್ಗೆ ದೊಡ್ಡ ಅಪ್ಡೇಟ್ ನೀಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ ಮಧ್ಯದಲ್ಲಿಯೇ ಗಾಯದ ಕಾರಣದಿಂದ ಜೋಶ್ ಹೇಜಲ್‌ವುಡ್ ಮನೆಗೆ ಮರಳಿದ್ದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 14 ಪಂದ್ಯ, 27 ವಿಕೆಟ್…IPL ನಲ್ಲಿ ಧೂಳೆಬ್ಬಿಸಿದ್ದ ಈ ಆಟಗಾರ 8 ವರ್ಷಗಳ ಬಳಿಕ Team Indiaಗೆ ಮತ್ತೆ ಎಂಟ್ರಿ!


ಕೊಹ್ಲಿ-ರೋಹಿತ್ ದೊಡ್ಡ 'ಶತ್ರು' ಫಿಟ್


ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ (WTC Final 2023) ಫೈನಲ್‌ ಗೆ ಮೊದಲು ಆಸ್ಟ್ರೇಲಿಯಾದ ಕ್ರಿಕೆಟ್ ತಂಡವು ಫಾರ್ಮ್ಬಿಯಲ್ಲಿ ಅಭ್ಯಾಸ ನಡೆಸುತ್ತಿದೆ. ಜೋಶ್ ಹೇಜಲ್‌ ವುಡ್ ಸೋಮವಾರ ತಂಡದೊಂದಿಗೆ ಅಭ್ಯಾಸ ನಡೆಸಿದರು. ಈ ಮಹತ್ವದ ಪಂದ್ಯದ ಮುಂದೆ ಉತ್ತಮ ಭಾವನೆ ಹೊಂದಿರುವುದಾಗಿ ಅವರು ಹೇಳಿದ್ದಾರೆ. “ನನ್ನ ಫಿಟ್‌ನೆಸ್ ತುಂಬಾ ಚೆನ್ನಾಗಿದೆ ಮತ್ತು ಈಗ ಪಂದ್ಯದ ಆರಂಭದವರೆಗೂ ಪ್ರತಿ ಸೆಷನ್‌ನಲ್ಲಿ ಉತ್ತಮ ಪ್ರದರ್ಶನ ನೀಡುವುದಕ್ಕೆ ಸಾಧ್ಯವಾಗಬಹುದು” ಎಂದು ಹೇಳಿದ್ದಾರೆ. “ನನ್ನ ಸಂಪೂರ್ಣ ಸಾಮರ್ಥ್ಯಕ್ಕೆ ಬೌಲಿಂಗ್ ಮಾಡಲು ನಾನು ತುಂಬಾ ಫಿಟ್ ಆಗಿದ್ದೇನೆ. ಪ್ರತಿ ಮುಂದಿನ ಅಧಿವೇಶನದಲ್ಲಿ ನಾನು ಮೊದಲಿಗಿಂತ ಹೆಚ್ಚು ಅಭ್ಯಾಸ ಮಾಡುತ್ತಿದ್ದೇನೆ. ಹಾಗಾಗಿ ನಾನು ಉತ್ತಮ ಭಾವನೆ ಹೊಂದಿದ್ದೇನೆ” ಎಂದಿದ್ದಾರೆ>


ಜೂನ್ 7 ರಿಂದ ಓವಲ್‌ ನಲ್ಲಿ ಪ್ರಾರಂಭವಾಗುವ ಭಾರತ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ಫೈನಲ್‌ ಗೆ ಮುನ್ನ ಜೋಶ್ ಹ್ಯಾಜಲ್‌ ವುಡ್ ತಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ ಸಿ ಬಿ) ತಂಡದ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಹೊಗಳಿದ್ದಾರೆ. ಓವಲ್‌ ನಲ್ಲಿ ಕೊಹ್ಲಿಯ ವಿಕೆಟ್ ಪಡೆಯುವುದೇ ಅವರ ಗುರಿಯಾಗಲಿದೆಯಂತೆ. ಆದರೆ ಕೊಹ್ಲಿ ಕೆಲಸದ ಬಗ್ಗೆ  ಮಾತನಾಡಿದ ಅವರು, “ವಿರಾಟ್ ಕೊಹ್ಲಿ ಮಾಡುವ ಕಠಿಣ ಪರಿಶ್ರಮಕ್ಕೆ ಸಾಟಿಯಿಲ್ಲ ಎಂದು ನಾನು ಭಾವಿಸುತ್ತೇನೆ. ಮೊದಲನೆಯದಾಗಿ ಅವರ ಫಿಟ್ನೆಸ್, ನಂತರ ವಿಶೇಷವಾಗಿ ಬ್ಯಾಟಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಅವರ ಕೌಶಲ್ಯ. ಅಭ್ಯಾಸಕ್ಕೆ ಬರುವವರಲ್ಲಿ ಯಾವಾಗಲೂ ಮೊದಲಿಗನಾಗಿರುತ್ತಾರೆ, ಹಾಗೇ ಕೊನೆಯದಾಗಿ ಹೊರಡುತ್ತಾರೆ.  ತುಂಬಾ ಕಠಿಣ ಅಭ್ಯಾಸ ಮಾಡುತ್ತಾರೆ. ಅವರು ಇತರ ಆಟಗಾರರನ್ನು ಪ್ರೇರೇಪಿಸಬಹುದು” ಎಂದಿದ್ದಾರೆ.


ಇದನ್ನೂ ಓದಿ: Wrestlers Protest: ಕುಸ್ತಿಪಟುಗಳನ್ನು ಭೇಟಿಯಾದ ನರೇಶ್ ಟಿಕಾಯಿತ್, ಮೆಡಲ್ ಗಳನ್ನು ಗಂಗೆಗೆ ಅರ್ಪಿಸುವ ನಿರ್ಧಾರ ಕೈಬಿಟ್ಟ ಆಟಗಾರರು


ಮತ್ತೊಂದೆಡೆ, ಐಪಿಎಲ್‌ ನಲ್ಲಿ ಆರ್‌ ಸಿ ಬಿ ಪರ ಅತಿ ಹೆಚ್ಚು ವಿಕೆಟ್ ಪಡೆದ ಸಿರಾಜ್ ಕುರಿತು ಮಾತನಾಡಿದ ಹೇಜಲ್‌ವುಡ್, “ನಾನು ಈ ವರ್ಷದ ಕೊನೆಯಲ್ಲಿ ಆರ್‌ ಸಿ ಬಿ ಗೆ ಸೇರಿಕೊಂಡೆ. ಆದರೆ ಅದಕ್ಕೂ ಮೊದಲು ಅವರು ತಮ್ಮ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದರು. ಯಾವಾಗಲೂ ವಿಕೆಟ್‌ ಗಳನ್ನು ಪಡೆಯುತ್ತಾರೆ. ಅವರ ಎಕಾನಮಿ ರೇಟ್ ತುಂಬಾ ಉತ್ತಮವಾಗಿದೆ, ಕೆಲವೊಮ್ಮೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಕೆಟ್ ಪಡೆಯುವುದು ಅಸಾಧ್ಯವಾಗಿತ್ತು. ಅವರ ಬೌಲಿಂಗ್ ಮೇಲೆ ಅವರ ನಿಯಂತ್ರಣ ಅತ್ಯುತ್ತಮವಾಗಿದ್ದು, ಅದರ ಮೂಲಕ ಚೆನ್ನಾಗಿ ಬೌಲಿಂಗ್ ಮಾಡುತ್ತಿದ್ದರು” ಎಂದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ