Supreme Court Verdict: ಬಿಸಿಸಿಐನ ಪ್ರಸ್ತುತ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರ ಅವಧಿಯನ್ನು ವಿಸ್ತರಿಸಲು ಅವಕಾಶ ನೀಡುವ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ  ಪ್ರಸ್ತಾವಿತ ತಿದ್ದುಪಡಿಗೆ ಭಾರತದ ಸುಪ್ರೀಂ ಕೋರ್ಟ್ ಬುಧವಾರ ಅಂಗೀಕಾರ ನೀಡಿದೆ. ಬಿಸಿಸಿಐ ಸಂವಿಧಾನದಲ್ಲಿನ 'ಕೂಲಿಂಗ್ ಆಫ್ ಪಿರಿಯಡ್' ಷರತ್ತಿನಿಂದಾಗಿ ಗಂಗೂಲಿ ಮತ್ತು ಶಾ ಅವರ ಮೊದಲ ಅವಧಿಯು ಈ ತಿಂಗಳ ಆರಂಭದಲ್ಲಿ ಮುಕ್ತಾಯಗೊಂಡಿತ್ತು . ಇದರರ್ಥ ಸೌರವ್ ಗಂಗೂಲಿ ಮೂರು ವರ್ಷಗಳ ಕಾಲ ಬಿಸಿಸಿಐ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಮತ್ತು ಜಯ್ ಶಾ ಮುಂದಿನ ಮೂರು ವರ್ಷಗಳವರೆಗೆ ಬಿಸಿಸಿಐ ಕಾರ್ಯದರ್ಶಿಯಾಗಿರಲಿದ್ದಾರೆ.


COMMERCIAL BREAK
SCROLL TO CONTINUE READING

ಬಿಸಿಸಿಐ ತನ್ನ ಪ್ರಸ್ತಾವಿತ ಸಂವಿಧಾನ ತಿದ್ದುಪಡಿಯಲ್ಲಿ ತನ್ನ ಪದಾಧಿಕಾರಿಗಳಿಗೆ ಇದ್ದ 'ಕೂಲಿಂಗ್ ಆಫ್ ಪಿರಿಯಡ್' ಅನ್ನು ರದ್ದುಗೊಳಿಸಲು ಮನವಿ ಮಾಡಿತ್ತು. ಇದರಿಂದ ತಮಗೆ ಸಂಬಂಧಿಸಿದ ರಾಷ್ಯಗಳ ಕ್ರಿಕೆಟ್ ಸಂಸ್ಥೆಗಳಲ್ಲಿ ಆರು ವರ್ಷಗಳನ್ನು ಪೂರೈಸಿದ್ದರೂ ಕೂಡ ಸೌರವ್ ಗಂಗೂಲಿ ಹಾಗೂ ಜಯ್ ಶಾ ಅಧ್ಯಕ್ಷ ಹಾಗೂ ಕಾರ್ಯದರ್ಶಿಯಾಗಿ ಮುಂದುವರೆಯಲಿದ್ದಾರೆ. ಈ ಕುರಿತು ಬುಧವಾರ (ಸೆಪ್ಟೆಂಬರ್ 14)  ತನ್ನ ತೀರ್ಪು ಪ್ರಕಟಿಸಿರುವ ಸರ್ವೋಚ್ಚ ನ್ಯಾಯಾಲಯ ಬಿಸಿಸಿಐನ ಪದಾಧಿಕಾರಿಯೊಬ್ಬರು ರಾಜ್ಯ ಅಸೋಸಿಯೇಷನ್‌ನಲ್ಲಿ ಒಂದು ಅವಧಿಗೆ ಅಧಿಕಾರದಲ್ಲಿದ್ದರೂ, ಸತತ ಎರಡು ಅವಧಿಗೆ ಅಧಿಕಾರ ನಡೆಸಲು ಅವಕಾಶ ನೀಡುವುದಾಗಿ ಹೇಳಿದೆ. ಪದಾಧಿಕಾರಿಗಳ ಅವಧಿ ಸತತ 12 ವರ್ಷ ಇರಬಹುದೆಂದು ಸುಪ್ರೀಂ ಕೋರ್ಟ್ ಹೇಳಿದೆ. ಇದರಲ್ಲಿ ಆರು ವರ್ಷ ರಾಜ್ಯ ಸಂಘದಲ್ಲಿ ಮತ್ತು ಆರು ವರ್ಷ ಬಿಸಿಸಿಐನಲ್ಲಿ ಇರಲಿದೆ.


ಇದನ್ನೂ ಓದಿ-ICC T20 Rankings : ಐಸಿಸಿ ಟಿ20 ರ‍್ಯಾಕಿಂಗ್ ಪಟ್ಟಿಯಲ್ಲಿ ಮಿಂಚಿದ ವಿರಾಟ್ ಕೊಹ್ಲಿ


ಇದಕ್ಕೂ ಮುನ್ನ ನ್ಯಾಯಮೂರ್ತಿ ಆರ್ ಎಂ ಲೋಧಾ ನೇತೃತ್ವದ ಸಮಿತಿ ಬಿಸಿಸಿಐನಲ್ಲಿ ಸುಧಾರಣೆಗೆ ಶಿಫಾರಸು ಮಾಡಿದ್ದು, ಅದನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿದೆ. 


ಇದನ್ನೂ ಓದಿ-WorldSkills Competition 2022: ಪ್ರೋಟೋಟೈಪ್ ಮಾಡೆಲಿಂಗ್‍ನಲ್ಲಿ ಭಾರತದ ಲಿಖಿತ್ ಕುಮಾರ್ ವೈ.ಪಿ.ಗೆ ಕಂಚು..!


ಬಿಸಿಸಿಐ ಸಂವಿಧಾನದ ಪ್ರಕಾರ, ಒಬ್ಬ ಪದಾಧಿಕಾರಿಯು ರಾಜ್ಯ ಅಸೋಸಿಯೇಷನ್ ​​ಅಥವಾ ಬಿಸಿಸಿಐ ಅಥವಾ ಎರಡೂ ಜಂಟಿಯಾಗಿ ಸತತ ಎರಡು ಅವಧಿಗಳ ನಡುವೆ ಮೂರು ವರ್ಷಗಳ ಕೂಲಿಂಗ್-ಆಫ್ ಅವಧಿಗೆ ಒಳಗಾಗಬೇಕಾಗುತ್ತಿತ್ತು. ಬಿಸಿಸಿಐ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ದೇಶದಲ್ಲಿ ಕ್ರಿಕೆಟ್ ಆಟ ಸಾಕಷ್ಟು ವ್ಯವಸ್ಥಿತವಾಗಿದೆ ಎಂದು ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠಕ್ಕೆ ಮಾಹಿತಿ ನೀಡಿದ್ದಾರೆ. ಬಿಸಿಸಿಐ ಸ್ವಾಯತ್ತ ಸಂಸ್ಥೆಯಾಗಿದ್ದು, ಕ್ರಿಕೆಟ್ ಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (ಎಜಿಎಂ) ಎಲ್ಲಾ ಬದಲಾವಣೆಗಳನ್ನು ಪರಿಗಣಿಸಲಾಗಿದೆ ಎಂದು ಅವರು ಹೇಳಿದ್ದಾರೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.