T20 World Cup : ಟಿ20 ವಿಶ್ವಕಪ್‌ಗೂ ಮುನ್ನ BCCI ಪರಿಶೀಲನಾ ಸಭೆ, ಟೀಂ ಕೊರತೆ ನೀಗಿಸಲು ಟೆನ್ಷನ್‌ನಲ್ಲಿ ಮಂಡಳಿ

ರೋಹಿತ್ ಶರ್ಮಾ ನೇತೃತ್ವದ ತಂಡವು ಏಷ್ಯಾಕಪ್‌ನ ಸೂಪರ್-4 ಸುತ್ತಿನವರೆಗೆ ಮಾತ್ರ ಪ್ರದರ್ಶನ ನೀಡಲು ಮಾತ್ರ ಸಾಧ್ಯವಾಯ್ತು.

Written by - Channabasava A Kashinakunti | Last Updated : Sep 14, 2022, 01:39 PM IST
  • ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಗಳು
  • ಕಳವಳ ವ್ಯಕ್ತಪಡಿಸಿದ ಗಂಗೂಲಿ ಮತ್ತು ಜಯ್ ಶಾ
  • ಮಧ್ಯಮ ಓವರ್‌ಗಳಲ್ಲಿ ಬ್ಯಾಟಿಂಗ್ ವಿಫಲವಾಗಿದೆ
T20 World Cup : ಟಿ20 ವಿಶ್ವಕಪ್‌ಗೂ ಮುನ್ನ BCCI ಪರಿಶೀಲನಾ ಸಭೆ, ಟೀಂ ಕೊರತೆ ನೀಗಿಸಲು ಟೆನ್ಷನ್‌ನಲ್ಲಿ ಮಂಡಳಿ title=

BCCI Meeting after Asia Cup 2022 : ಆಸ್ಟ್ರೇಲಿಯಾ ಆತಿಥ್ಯದಲ್ಲಿ ಅಕ್ಟೋಬರ್ 16 ರಿಂದ ಪ್ರಾರಂಭವಾಗುವ ಐಸಿಸಿ ಟಿ20 ವಿಶ್ವಕಪ್‌ಗೆ ಮೊದಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಯ ಪ್ರಮುಖ ಸಭೆಯನ್ನು ನಡೆಸಲಾಗಿದೆ. ಈ ಸಭೆಯಲ್ಲಿ ಏಷ್ಯಾಕಪ್-2022ರಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನದ ಬಗ್ಗೆ ಕಳವಳ ವ್ಯಕ್ತಪಡಿಸಲಾಯಿತು. ರೋಹಿತ್ ಶರ್ಮಾ ನೇತೃತ್ವದ ತಂಡವು ಏಷ್ಯಾಕಪ್‌ನ ಸೂಪರ್-4 ಸುತ್ತಿನವರೆಗೆ ಮಾತ್ರ ಪ್ರದರ್ಶನ ನೀಡಲು ಮಾತ್ರ ಸಾಧ್ಯವಾಯ್ತು.

ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಗಳು

ಬಿಸಿಸಿಐನ ಏಷ್ಯಾ ಕಪ್ ನಂತರ ನಡೆದ ಈ ಪರಿಶೀಲನಾ ಸಭೆಯಲ್ಲಿ, 7-15 ಓವರ್‌ಗಳ ನಡುವಿನ ಭಾರತೀಯ ಬ್ಯಾಟ್ಸ್‌ಮನ್‌ಗಳ ಪ್ರದರ್ಶನದ ಬಗ್ಗೆ ಕಳವಳ ವ್ಯಕ್ತಪಡಿಸಲಾಯಿತು. ಭಾರತ ತಂಡ ಟಿ20 ವಿಶ್ವಕಪ್‌ಗೂ ಮುನ್ನ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಆಡಬೇಕಿದೆ. ಅಕ್ಟೋಬರ್ 23 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯದೊಂದಿಗೆ ಟೀಂ ಇಂಡಿಯಾ ಟಿ20 ವಿಶ್ವಕಪ್‌ನಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಸೋಮವಾರ, ಬಿಸಿಸಿಐ ಟಿ 20 ವಿಶ್ವಕಪ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸೆಪ್ಟೆಂಬರ್ 20 ರಿಂದ ನಡೆಯಲಿರುವ 6 ಟಿ 20 ಪಂದ್ಯಗಳಿಗೆ ತಂಡವನ್ನು ಪ್ರಕಟಿಸಿದೆ.

ಇದನ್ನೂ ಓದಿ : Virat Kohli : ವಿಶ್ವದಾಖಲೆ ನಿರ್ಮಿಸಿದ ಕಿಂಗ್ ಕೊಹ್ಲಿ, ಈ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ ವಿರಾಟ್!

ಕಳವಳ ವ್ಯಕ್ತಪಡಿಸಿದ ಗಂಗೂಲಿ ಮತ್ತು ಜಯ್ ಶಾ 

ಸಭೆಯಲ್ಲಿ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರನ್ನು ಹೊರತುಪಡಿಸಿ, ರಾಷ್ಟ್ರೀಯ ಆಯ್ಕೆ ಸಮಿತಿಯು ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾದ ಕಳಪೆ ಪ್ರದರ್ಶನದ ಬಗ್ಗೆ ಚರ್ಚಿಸಿತು. ಗೌಪ್ಯತೆಯ ಷರತ್ತಿನ ಕುರಿತು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ, “ಹೌದು, ಏಷ್ಯಾಕಪ್‌ನಲ್ಲಿ ಭಾರತ ತಂಡದ ಪ್ರದರ್ಶನದ ಬಗ್ಗೆ ಚರ್ಚಿಸಲಾಗಿದೆ. ನಿಸ್ಸಂಶಯವಾಗಿ ಸಮಸ್ಯೆಗಳಿಗಿಂತ ಪರಿಹಾರಗಳ ಮೇಲೆ ಕೇಂದ್ರೀಕರಿಸಲಾಗಿದೆ ಮತ್ತು ಟಿ20 ವಿಶ್ವಕಪ್‌ನಲ್ಲಿ ಯಾವ ಕ್ಷೇತ್ರಗಳಲ್ಲಿ ಸುಧಾರಣೆ ಅಗತ್ಯವಿದೆ ಎಂಬುದರ ಕುರಿತು ಚರ್ಚೆ ನಡೆಯಿತು. ಉತ್ತಮ ತಂಡಗಳ ವಿರುದ್ಧ ಮಧ್ಯಮ ಓವರ್‌ಗಳಲ್ಲಿ ಭಾರತ ತೋರಿದ ಪ್ರದರ್ಶನವು ಕಳವಳಕಾರಿಯಾಗಿದೆ ಎಂದು ಎಲ್ಲರೂ ಒಪ್ಪಿಕೊಂಡರು, ಇದು ಏಷ್ಯಾಕಪ್‌ನಲ್ಲಿ ಸೋಲಿಗೆ ಕಾರಣವಾಯಿತು.

ಮಧ್ಯಮ ಓವರ್‌ಗಳಲ್ಲಿ ಬ್ಯಾಟಿಂಗ್ ವಿಫಲವಾಗಿದೆ

ಇನ್ನೂ ಮುಂದುವರೆದು ಮಾತನಾಡಿದ ಬಿಸಿಸಿಐ ಅಧಿಕಾರಿ, 'ಮಧ್ಯಮ ಓವರ್‌ಗಳಲ್ಲಿ ವಿಶೇಷವಾಗಿ 7-15 ಓವರ್‌ಗಳಲ್ಲಿ ಬ್ಯಾಟಿಂಗ್ ಸಮಸ್ಯೆಯಾಗಿತ್ತು. ಏಷ್ಯಾಕಪ್‌ನಲ್ಲಿ ನಾವು ಉತ್ತಮ ಪ್ರದರ್ಶನ ನೀಡಲಿಲ್ಲ. ಟೀಂ ಥಿಂಕ್ ಟ್ಯಾಂಕ್‌ಗೆ ಇದು ಗೊತ್ತಾಗಿದೆ. ನಮ್ಮಲ್ಲಿ ಕೆಲವು ವಿಶ್ವ ದರ್ಜೆಯ ಆಟಗಾರರು ಇದ್ದಾರೆ, ಅವರು ತಂಡದ ಅಗತ್ಯಗಳಿಗೆ ಅನುಗುಣವಾಗಿ ತಮ್ಮ ಆಟವನ್ನು ಬದಲಾಯಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.

ಏಷ್ಯಾಕಪ್‌ನಲ್ಲಿ ಭರವಸೆ ಕಳೆದುಕೊಂಡ ಟೀಂ ಇಂಡಿಯಾ

ಯುಎಇ ಆತಿಥ್ಯದಲ್ಲಿ ನಡೆದ ಏಷ್ಯಾಕಪ್‌ನಲ್ಲಿ ಭಾರತ ತಂಡ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಲೀಗ್ ಹಂತದಲ್ಲಿ ಪಾಕಿಸ್ತಾನ ಮತ್ತು ಹಾಂಕಾಂಗ್ ತಂಡಗಳನ್ನು ಸೋಲಿಸುವ ಮೂಲಕ ಸೂಪರ್-4 ಸುತ್ತಿಗೆ ಪ್ರವೇಶಿಸಿದರು. ಆದರೆ, ಈ ಸುತ್ತಿನಲ್ಲಿ ರೋಹಿತ್ ಶರ್ಮಾ ಬಳಗ ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಸತತ ಸೋಲು ಎದುರಿಸಬೇಕಾಯಿತು. ಇದರ ನಂತರ, ಅವರು ಅಫ್ಘಾನಿಸ್ತಾನವನ್ನು 101 ರನ್‌ಗಳಿಂದ ಸೋಲಿಸುವ ಮೂಲಕ ತಮ್ಮ ಅಭಿಯಾನವನ್ನು ಪೂರ್ಣಗೊಳಿಸಿದರು.

ಇದನ್ನೂ ಓದಿ : ಟಿ20 ವಿಶ್ವಕಪ್‌ಗೆ ಹೀಗಿದೆ ಟೀಂ ಇಂಡಿಯಾ Playing 11 : ಯಾರಿಗೆಲ್ಲ ಸ್ಥಾನ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News