Deepak Chahar Wife Fraud Case: ಟೀಂ ಇಂಡಿಯಾದ  ಸ್ಟಾರ್ ಆಟಗಾರನ ಪತ್ನಿ ವಂಚನೆಗೆ ಒಳಗಾಗಿದ್ದಾರೆ. ಈ ವಿಷಯ ಇದೀಗ ಮುನ್ನೆಲೆಗೆ ಬಂದಿದ್ದು, ಕ್ರಿಕೆಟ್ ಸಂಸ್ಥೆಯ ಮಾಜಿ ಅಧಿಕಾರಿಯೊಬ್ಬ ವಂಚನೆ ಎಸಗಿದ್ದಾನೆ ಎನ್ನಲಾಗಿದೆ. ಜೊತೆಗೆ ಆತನ ವಿರುದ್ಧ ಆಟಗಾರನ ತಂದೆ ಎಫ್‌ಐಆರ್ ಕೂಡ ದಾಖಲಿಸಿದ್ದಾರೆ. ಈ ವಂಚನೆಗೆ ಒಳಗಾಗಿದ್ದು ಭಾರತದ ವೇಗಿ ದೀಪಕ್ ಚಹಾರ್ ಪತ್ನಿ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಪೊಲೀಸ್ ಅಧಿಕಾರಿಯಾದ MS Dhoni: ಸಮವಸ್ತ್ರದ ಫೋಟೋ ಕಂಡು ಫ್ಯಾನ್ಸ್ ಶಾಕ್!


ಭಾರತದ ಸ್ಟಾರ್ ವೇಗಿ ದೀಪಕ್ ಚಹಾರ್ ಪತ್ನಿ ಜಯಾಗೆ 10 ಲಕ್ಷ ರೂಪಾಯಿ ವಂಚಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಜಯಾ ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ (ಎಚ್‌ಸಿಎ) ಮಾಜಿ ಅಧಿಕಾರಿಯಿಂದ ವಂಚನೆಗೊಳಗಾಗಿದ್ದಾರೆ. 30 ವರ್ಷದ ದೀಪಕ್ ಚಾಹರ್ ಅವರ ತಂದೆ, ಅಧಿಕಾರಿ ವಿರುದ್ಧ ದೂರು ನೀಡಿದ್ದು ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.


ಏನಿದು ಪ್ರಕರಣ: ವರದಿಗಳ ಪ್ರಕಾರ ಹೈದರಾಬಾದ್ ಕ್ರಿಕೆಟ್ ಸಂಸ್ಥೆಯಲ್ಲಿ ಪದಾಧಿಕಾರಿಗಳಾಗಿದ್ದ ಧ್ರುವ್ ಪಾರಿಖ್ ಮತ್ತು ಕಮಲೇಶ್ ಪಾರಿಖ್ ಅವರು ಜಯಾ ಜತೆ ಒಪ್ಪಂದ ಮಾಡಿಕೊಂಡಿದ್ದರು. ಈ ಒಪ್ಪಂದದ ಪ್ರಕಾರ, ಅಕ್ಟೋಬರ್ 7, 2022 ರಂದು ಜಯಾ ಅವರಿಂದ 10 ಲಕ್ಷ ರೂಪಾಯಿಗಳನ್ನು ತೆಗೆದುಕೊಳ್ಳಲಾಗಿದೆ. ಆದರೆ ಇನ್ನೂ ಹಿಂತಿರುಗಿಸಲಾಗಿಲ್ಲ. ಅಷ್ಟೇ ಅಲ್ಲ ಜಯಾ ಹಣದ ಬೇಡಿಕೆ ಇಟ್ಟಿದ್ದಕ್ಕೆ ನಿಂದಿಸಿದ್ದಲ್ಲದೆ ಆಕೆಗೆ ಜೀವ ಬೆದರಿಕೆ ಕೂಡ ಹಾಕಲಾಗಿತ್ತು.


ಇದನ್ನೂ ಓದಿ: IND vs AUS : ಟೆಸ್ಟ್‌ನಲ್ಲಿ ಈ ಐತಿಹಾಸಿಕ ದಾಖಲೆ ಮುರಿಯುವ ಹೊಸ್ತಿಲಲ್ಲಿ ಆರ್ ಅಶ್ವಿನ್!


ದೀಪಕ್ ತಂದೆಯಿಂದ ಕೇಸ್ ದಾಖಲು: ಇದೀಗ ದೀಪಕ್ ತಂದೆ ಲೋಕೇಂದ್ರ ಚಹಾರ್ ಆಗ್ರಾದ ಹರಿಪರ್ವತ್ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಎಫ್‌ಐಆರ್‌ನಲ್ಲಿ ಹೈದರಾಬಾದ್‌ನ ಪಾರಿಖ್ ಸ್ಪೋರ್ಟ್ಸ್ ಹೆಸರನ್ನು ಉಲ್ಲೇಖಿಸಲಾಗಿದೆ. ಈ ಸಂಸ್ಥೆಯ ಮಾಲೀಕರಾದ ಧ್ರುವ ಪಾರಿಖ್ ಮತ್ತು ಕಮಲೇಶ್ ಪಾರಿಖ್ ಅವರನ್ನು ಹೆಸರಿಸಲಾಗಿದೆ. ದೀಪಕ್ ಚಹರ್ ಅವರ ಕುಟುಂಬವು ಆಗ್ರಾದ ಶಹಗಂಜ್‌ನಲ್ಲಿರುವ ಮಾನಸ ಸರೋವರ ಕಾಲೋನಿಯಲ್ಲಿ ವಾಸಿಸುತ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ