ಕ್ರಿಕೆಟ್ ಲೋಕಕ್ಕೆ ಮತ್ತೆ ಕಾಲಿಡುತ್ತಿದ್ದಾರೆ Virat Kohli-Rohit Sharma ಬದ್ಧವೈರಿ: ಈತ ಆಟಕ್ಕಿಂತ ತೊಂದರೆ ಕೊಟ್ಟಿದ್ದೇ ಹೆಚ್ಚು!

Virat Kohli and Rohit Sharma: ಮುಂಬರುವ ಇಂಗ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ನ್ಯೂಜಿಲೆಂಡ್‌ನ 14 ಸದಸ್ಯರ ತಂಡದಲ್ಲಿ ಸೇರ್ಪಡೆಗೊಂಡ ನಂತರ, ವೇಗದ ಬೌಲರ್ ಕೈಲ್ ಜೇಮಿಸನ್ ಅವರು, “ತಂಡಕ್ಕೆ ಮರಳಲು ಥ್ರಿಲ್ ಆಗಿದ್ದೇನೆ. ನಾನು ಆರೋಗ್ಯವಾಗಿದ್ದೇನೆ” ಎಂದು ಹೇಳಿದ್ದಾರೆ.

Written by - Bhavishya Shetty | Last Updated : Feb 3, 2023, 05:10 PM IST
    • ಅಂತರಾಷ್ಟ್ರೀಯ ಕ್ರಿಕೆಟ್‌ ಗೆ ಮತ್ತೆ ಎಂಟ್ರಿ ಕೊಡಲಿದ್ದಾರೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ವೈರಿ
    • ನ್ಯೂಜಿಲೆಂಡ್‌ನ ಅಪಾಯಕಾರಿ ವೇಗದ ಬೌಲರ್ ಕೈಲ್ ಜೇಮಿಸನ್ ಘೋಷಣೆ
    • ಇಂಗ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ನ್ಯೂಜಿಲೆಂಡ್‌ನ 14 ಸದಸ್ಯರ ತಂಡದಲ್ಲಿ ಸೇರ್ಪಡೆ
ಕ್ರಿಕೆಟ್ ಲೋಕಕ್ಕೆ ಮತ್ತೆ ಕಾಲಿಡುತ್ತಿದ್ದಾರೆ Virat Kohli-Rohit Sharma ಬದ್ಧವೈರಿ: ಈತ ಆಟಕ್ಕಿಂತ ತೊಂದರೆ ಕೊಟ್ಟಿದ್ದೇ ಹೆಚ್ಚು! title=
Kyle Jamison

Virat Kohli and Rohit Sharma: ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ಅನುಭವಿ ಬ್ಯಾಟ್ಸ್‌ಮನ್‌ಗಳಿಗೆ ತೊಂದರೆ ನೀಡಿದ್ದ ನ್ಯೂಜಿಲೆಂಡ್‌ನ ಅಪಾಯಕಾರಿ ವೇಗದ ಬೌಲರ್ ಕೈಲ್ ಜೇಮಿಸನ್ ಅವರು, ಮತ್ತೆ ಕ್ರಿಕೆಟ್ ಲೋಕಕ್ಕೆ ಮರಳುವುದಾಗಿ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: ಅಂದು ಭಾರತಕ್ಕೆ ಪದಕ ತಂದುಕೊಟ್ಟ ಈ ರಾಷ್ಟ್ರೀಯ ಆಟಗಾರ, ಇಂದು ಕೂಲಿ ಕಾರ್ಮಿಕ! ಇದೆಂಥಾ ಪರಿಸ್ಥಿತಿ

ಮುಂಬರುವ ಇಂಗ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ನ್ಯೂಜಿಲೆಂಡ್‌ನ 14 ಸದಸ್ಯರ ತಂಡದಲ್ಲಿ ಸೇರ್ಪಡೆಗೊಂಡ ನಂತರ, ವೇಗದ ಬೌಲರ್ ಕೈಲ್ ಜೇಮಿಸನ್ ಅವರು, “ತಂಡಕ್ಕೆ ಮರಳಲು ಥ್ರಿಲ್ ಆಗಿದ್ದೇನೆ. ನಾನು ಆರೋಗ್ಯವಾಗಿದ್ದೇನೆ” ಎಂದು ಹೇಳಿದ್ದಾರೆ.

ಕೊಹ್ಲಿ-ರೋಹಿತ್‌ 'ಶತ್ರು':

ಕಳೆದ ವರ್ಷ ಜೂನ್‌ ನಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ಬೆನ್ನುನೋವಿಗೆ ಒಳಗಾದ ನಂತರ ಮತ್ತು ಈ ವರ್ಷದ ಜನವರಿಯಲ್ಲಿ ಆಕ್ಲೆಂಡ್‌ಗಾಗಿ ದೇಶೀಯ ಕ್ರಿಕೆಟ್‌ಗೆ ಮರಳಿದ ನಂತರ ಜೇಮಿಸನ್ ಮೊದಲ ಬಾರಿಗೆ ನ್ಯೂಜಿಲೆಂಡ್ ತಂಡದಲ್ಲಿ ಆಯ್ಕೆಯಾಗಿದ್ದಾರೆ. ಕೈಲ್ ಜೇಮಿಸನ್ ಈ ಬಗ್ಗೆ ಮಾತನಾಡಿದ್ದು, “ತಂಡವನ್ನು ಸೇರಲು ಸಂತೋಷವಾಗಿದೆ. ನಾನು ಆರೋಗ್ಯವಾಗಿದ್ದೇನೆ. ಮತ್ತೆ ತಂಡಕ್ಕೆ ಸೇರಲು ಉತ್ಸುಕನಾಗಿದ್ದೇನೆ. ಇನ್ನು ಆಗಾಗ್ಗೆ ಖಾಲಿ ನೆಟ್‌ನಲ್ಲಿ ಬೌಲಿಂಗ್ ಮಾಡುತ್ತಿದ್ದೆ” ಎಂದು SENZ ಬ್ರೇಕ್‌ಫಾಸ್ಟ್ ಶೋನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ:  IND vs AUS : ಟೀಂ ಇಂಡಿಯಾಗೆ ಎಂಟ್ರಿ ನೀಡಿದ ಸ್ಪಿನ್ ಸುಲ್ತಾನ್, ಕಾಂಗರೂಗಳಿಗೆ ಶುರುವಾಗಿದೆ ಭಯ!

ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವ ಘೋಷಣೆ:

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಜೇಮಿಸನ್ ಭಾಗಿಯಾಗುತ್ತಿದ್ದಾರೆ. ನ್ಯೂಜಿಲೆಂಡ್ ಕೊನೆಯ ಬಾರಿಗೆ 2021 ರಲ್ಲಿ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿತ್ತು. ಇದೀಗ ಇಂಗ್ಲೆಂಡ್ ವಿರುದ್ಧ ಜಯಗಳಿಸಲು ಸಾಕಷ್ಟು ತಯಾರಿಗಳನ್ನು ಮಾಡುತ್ತಿದೆ ಎಂದು ಜೇಮಿಸನ್ ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News