Joginder Sharma Retirement: ಕ್ರಿಕೆಟ್ ಲೋಕಕ್ಕೆ ನಿವೃತ್ತಿ ಘೋಷಿಸಿದ ಟೀಂ ಇಂಡಿಯಾದ ಸ್ಟಾರ್ ಬೌಲರ್!

Joginder Sharma Announces Retirement: ಶರ್ಮಾ ಅವರು ಭಾರತದ ಪರ ನಾಲ್ಕು ODIಗಳಲ್ಲಿ ಮತ್ತು 2004 ರಿಂದ 2007 ರವರೆಗೆ ಅನೇಕ T20I ಗಳಲ್ಲಿ ಆಟವಾಡಿದ್ದರು. ಎರಡೂ ಸ್ವರೂಪಗಳಲ್ಲಿ ಐದು ವಿಕೆಟ್ ಗಳನ್ನು ಪಡೆದಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಲ್ಲಿ, ಅವರು ಮೊದಲ ನಾಲ್ಕು ಋತುಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಪ್ರತಿನಿಧಿಸಿದ್ದು, 16 ಪಂದ್ಯಗಳಲ್ಲಿ 12 ವಿಕೆಟ್ಗಳನ್ನು ಕಬಳಿಸಿದ್ದಾರೆ.

Written by - Bhavishya Shetty | Last Updated : Feb 3, 2023, 05:43 PM IST
    • ವೇಗದ ಬೌಲರ್ ಜೋಗಿಂದರ್ ಶರ್ಮಾ ಅವರು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
    • ಬೌಲಿಂಗ್ ನಲ್ಲಿಯೇ ಹೆಸರುವಾಸಿಯಾಗಿದ್ದ ಜೋಗಿಂದರ್
    • ಚೊಚ್ಚಲ ಪುರುಷರ ಟಿ20 ವಿಶ್ವಕಪ್‌ನಲ್ಲಿ ಭಾರತದ ಪರ ಬೌಲಿಂಗ್ ಮಾಡಿದ್ದ ಶರ್ಮಾ
Joginder Sharma Retirement: ಕ್ರಿಕೆಟ್ ಲೋಕಕ್ಕೆ ನಿವೃತ್ತಿ ಘೋಷಿಸಿದ ಟೀಂ ಇಂಡಿಯಾದ ಸ್ಟಾರ್ ಬೌಲರ್!  title=
Joginder Sharma

Joginder Sharma Announces Retirement: 2007ರ ಚೊಚ್ಚಲ ಪುರುಷರ ಟಿ20 ವಿಶ್ವಕಪ್‌ನಲ್ಲಿ ಭಾರತದ ಪರ ಬೌಲಿಂಗ್ ಮಾಡಿ, ಗೆಲುವಿನ ನಗೆ ಬೀರುವಂತೆ ಮಾಡಿದ್ದ ವೇಗದ ಬೌಲರ್ ಜೋಗಿಂದರ್ ಶರ್ಮಾ ಅವರು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಬೌಲಿಂಗ್ ನಲ್ಲಿಯೇ ಹೆಸರುವಾಸಿಯಾಗಿದ್ದ ಜೋಗಿಂದರ್ ಕ್ರಿಕೆಟ್ ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ.

"ಇಂದು ಅಪಾರ ಕೃತಜ್ಞತೆ ಮತ್ತು ನಮ್ರತೆಯಿಂದ ನಾನು ಎಲ್ಲಾ ರೀತಿಯ ಅಂತರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸುತ್ತೇನೆ. 2002 ರಿಂದ 2017 ರವರೆಗಿನ ನನ್ನ ಪ್ರಯಾಣವು ನನ್ನ ಜೀವನದ ಅತ್ಯಂತ ಅದ್ಭುತವಾದ ವರ್ಷಗಳಾಗಿದ್ದವು. ಕ್ರೀಡೆಯಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸುವ ಗೌರವ ನನ್ನದಾಗಿತ್ತು”ಎಂದು ಅವರು ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಗೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ: IND vs AUS : ಟೀಂ ಇಂಡಿಯಾಗೆ ಎಂಟ್ರಿ ನೀಡಿದ ಸ್ಪಿನ್ ಸುಲ್ತಾನ್, ಕಾಂಗರೂಗಳಿಗೆ ಶುರುವಾಗಿದೆ ಭಯ!

ಶರ್ಮಾ ಅವರು ಭಾರತದ ಪರ ನಾಲ್ಕು ODIಗಳಲ್ಲಿ ಮತ್ತು 2004 ರಿಂದ 2007 ರವರೆಗೆ ಅನೇಕ T20I ಗಳಲ್ಲಿ ಆಟವಾಡಿದ್ದರು. ಎರಡೂ ಸ್ವರೂಪಗಳಲ್ಲಿ ಐದು ವಿಕೆಟ್ ಗಳನ್ನು ಪಡೆದಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಲ್ಲಿ, ಅವರು ಮೊದಲ ನಾಲ್ಕು ಋತುಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಪ್ರತಿನಿಧಿಸಿದ್ದು, 16 ಪಂದ್ಯಗಳಲ್ಲಿ 12 ವಿಕೆಟ್ಗಳನ್ನು ಕಬಳಿಸಿದ್ದಾರೆ.

ಇನ್ನು ಜೋಹಾನ್ಸ್‌ಬರ್ಗ್‌ನಲ್ಲಿ ಪಾಕಿಸ್ತಾನ ವಿರುದ್ಧದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಅವರು ಕೊನೆಯ ಓವರ್‌ಗಳಲ್ಲಿ ಬೌಲಿಂಗ್ ಮಾಡಿದ್ದ ರೀತಿಯನ್ನು ಇಲ್ಲಿ ನೆನಪಿಸಲೇಬೇಕು. ಅಂತಿಮ ಓವರ್ ನಲ್ಲಿ ಬೌಲ್ ಮಾಡಲು ನಾಯಕ ಎಂ.ಎಸ್ ಧೋನಿ ಅವಕಾಶ ನೀಡಿದರು. ಜೋಗಿಂದರ್ ನಾಲ್ಕು ಎಸೆತಗಳಲ್ಲಿ ಒಂದು ವಿಕೆಟ್ ಬಾಕಿ ಇರುವಂತೆಯೇ ಆರು ರನ್‌ಗಳನ್ನು ರಕ್ಷಿಸಿಕೊಳ್ಳಬೇಕಾಗಿತ್ತು.

ವಿಶ್ವಕಪ್ ಗೆಲ್ಲುವ ಕನಸನ್ನು ಹೊತ್ತ ಜೋಗಿಂದರ್ ಅವರು ಮಿಸ್ಬಾ-ಉಲ್-ಹಕ್ ಅವರಿಗೆ ಎಸೆದ ಶಾರ್ಟ್ ಫೈನ್ ಲೆಗ್‌ ಬಾಲ್ ನೇರವಾಗಿ ಎಸ್ ಶ್ರೀಶಾಂತ್‌ ಕೈಗೆ ಬಂದು ತಲುಪಿತ್ತು. ಈ ಮೂಲಕ ಭಾರತ ಐದು ರನ್‌ಗಳಿಂದ ಫೈನಲ್‌ ವಿಶ್ವಕಪ್ ಮುಡಿಗೇರಿಸಿಕೊಂಡಿತ್ತು. ಇದು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಅಪ್ರತಿಮ ಕ್ಷಣಗಳಲ್ಲಿ ಒಂದಾಗಿದೆ.

"ಬಿಸಿಸಿಐ ವಿಕೆಟ್ ಅಸೋಸಿಯೇಶನ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಹರಿಯಾಣ ಸರ್ಕಾರವು ನನಗೆ ನೀಡಿದ ಅವಕಾಶಗಳಿಗಾಗಿ, ನನ್ನ ಎಲ್ಲಾ ತಂಡದ ತರಬೇತುದಾರರಿಗೆ, ಮಾರ್ಗದರ್ಶಕರು ಮತ್ತು ಸಹಾಯಕ ಸಿಬ್ಬಂದಿಗೆ ನನ್ನ ಕನಸನ್ನು ನನಸಾಗಿಸಲು ಸಹಾಯ ಮಾಡಿದ್ದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ" ಎಂದು ಬರೆದುಕೊಂಡಿದ್ದಾರೆ

“ಅಂತರರಾಷ್ಟ್ರೀಯ ಕ್ರೀಡೆಯ ಏರಿಳಿತಗಳ ಮೂಲಕ ನನ್ನನ್ನು ಬೆಂಬಲಿಸಿದ ಎಲ್ಲಾ ಕ್ರಿಕೆಟ್ ಅಭಿಮಾನಿಗಳಿಗೆ, ನಾನು ನಿಮ್ಮೆಲ್ಲರೊಂದಿಗೆ ಕಳೆದ ಕ್ಷಣಗಳನ್ನು ನಾನು ಶಾಶ್ವತವಾಗಿ ಪಾಲಿಸುತ್ತೇನೆ. ನಿಮ್ಮ ಬೆಂಬಲ ಯಾವಾಗಲೂ ನನಗೆ ಪ್ರೇರಣೆಯ ಮೂಲವಾಗಿದೆ” ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ.

"ಕೊನೆಯದಾಗಿ ನನ್ನ ವೃತ್ತಿಜೀವನದುದ್ದಕ್ಕೂ ನನ್ನ ಕುಟುಂಬ ಮತ್ತು ಸ್ನೇಹಿತರು ಲೆಕ್ಕವಿಲ್ಲದಷ್ಟು ಪ್ರೀತಿ ಮತ್ತು ಬೆಂಬಲ ನೀಡಿದ್ದೀರಿ. ಅದಕ್ಕೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಇವರೆಲ್ಲರು ನನ್ನ ಬೆನ್ನೆಲುಬುಗಳಾಗಿದ್ದಾರೆ. ಅವರಿಲ್ಲದಿದ್ದರೆ, ನಾನು ಇಂದು ಏನನ್ನು ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ" ಎಂದು ಅವರು ಬರೆದಿದ್ದಾರೆ.

ಇದನ್ನೂ ಓದಿ: ಕ್ರಿಕೆಟ್ ಲೋಕಕ್ಕೆ ಮತ್ತೆ ಕಾಲಿಡುತ್ತಿದ್ದಾರೆ Virat Kohli-Rohit Sharma ಬದ್ಧವೈರಿ: ಈತ ಆಟಕ್ಕಿಂತ ತೊಂದರೆ ಕೊಟ್ಟಿದ್ದೇ ಹೆಚ್ಚು!

ಶರ್ಮಾ ದೇಶೀಯ ಕ್ರಿಕೆಟ್‌ನಲ್ಲಿ ಹರಿಯಾಣ ಪರವಾಗಿ 49 ಪ್ರಥಮ ದರ್ಜೆ ಪಂದ್ಯಗಳು, 39 ಲಿಸ್ಟ್-ಎ ಪಂದ್ಯಗಳು ಮತ್ತು 43 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು ಕೊನೆಯದಾಗಿ 2017 ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಿದ್ದರು. ಬಳಿಕ ಹರ್ಯಾಣದ ಹಿಸಾರ್ ಜಿಲ್ಲೆಯಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಡಿಎಸ್‌ಪಿ) ಸೇವೆ ಸಲ್ಲಿಸಿದ್ದರು. ಇತ್ತೀಚೆಗೆ, ಅವರು ಲೆಜೆಂಡ್ಸ್ ಕ್ರಿಕೆಟ್ ಲೀಗ್‌ನ 2022ರ ಋತುವಿನಲ್ಲಿ ಆಡಿದ್ದರು.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News