3rd T20: ಇಂಗ್ಲೆಂಡ್‌ ಮತ್ತು ವೆಸ್ಟ್‌ ಇಂಡೀಸ್‌ ತಂಡಗಳ ಟಿ20 ಸರಣಿ ಆರಂಭವಾಗಿದ್ದು, ಈಗಾಗಲೆ  ಮೂರು ಪಂದ್ಯಗಳು ನಡೆದಿವೆ. 5 ಪಂದ್ಯಗಳ ಈ ಸರಣಿಯಲ್ಲಿ ವೆಸ್ಟ್‌ ಇಂಡೀಸ್‌ ತಂಡವು 2 ಪಂದ್ಯಗಳಲ್ಲಿ ಜಯಗಳಿಸಿದ್ದರೆ ಇಂಗ್ಲೆಂಡ್‌ ತಂಡವು ನಿನ್ನೆ ನಡೆದ ಮೂರನೇ ಟಿ20 ಪಂದ್ಯದಲ್ಲಿ ಮೊದಲ ಜಯಗಳಿಸಿದೆ. ಗ್ರೇನಾಡ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ  ನಡೆದ ವೆಸ್ಟ್‌ ಇಂಡೀಸ್‌ ವಿರುಧ್ದದ 3ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್‌ ರೋಚಕ ಜಯಗಳಿಸಿದೆ. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗೆಲುವು ದಾಖಲಿಸುವ ಮೂಲಕ ಇಂಗ್ಲೆಂಡ್‌ ತಂಡವು ಸರಣಿ ಗೆಲ್ಲುವ ಕನಸು ಉಳಿಸಿಕೊಂಡಿದ್ದೆ.


COMMERCIAL BREAK
SCROLL TO CONTINUE READING

ಮೊದಲು ಟಾಸ್‌ ಸೋತು ಬ್ಯಾಟ್‌ ಮಾಡಿದ ವೆಸ್ಟ್‌ ಇಂಡೀಸ್‌ ಪರ ನಿಕೋಲಸ್‌ ಪೂರನ್‌  ಕೇವಲ 45 ಬಾಲ್‌ಗಳಲ್ಲಿ 82 ರನ್‌ ಕಲೆ ಹಾಕಿ ತಂಡಕ್ಕೆ 222 ರನ್‌ಗಳ ಭದ್ರ ಬುನಾದಿ ಹಾಕಿಕೊಟ್ಟರು. 223 ರನ್‌ಗಳ ಬೃಹತ್‌  ಗುರಿ ಬೆನ್ನಟ್ಟಲು ಇಂಗ್ಲೆಂಡ್‌ ತಂಡದ ಪರ ಆರಂಭಿಕರಾಗಿ ಪಿಲಿಪ್‌ ಸಾಲ್ಟ್‌ ಮತ್ತು ನಾಯಕ ಜೋಶ್‌ ಬಟ್ಲರ್‌ ಕಣಕಿಳಿದರು. ಇವರಿಬ್ಬರ ನಡುವೆ 100 ರನ್‌ಗಳ ಜೊತೆಯಾಟ ಆಡಿದ್ದ ಜೋಶ್‌ ಬಟ್ಲರ್‌ (51) ರಸೆಲ್‌ ಬೌಲಿಂಗ್‌ನಲ್ಲಿ ಕ್ಯಾಚ್‌ ನೀಡಿ ಔಟ್‌ ಆಗಬೇಕಾಯಿತು.


ಇದನ್ನು ಓದಿ:ಮತ್ತೆ ಬರ್ತಿದ್ದಾರೆ ಜೂ. ಧೋನಿ… ವರ್ಷದ ಬಳಿಕ ತಂಡಕ್ಕೆ ಮರಳಿದ 26ರ ಹರೆಯದ ಈ ಆಟಗಾರನಿಗೆ ನಾಯಕತ್ವ!


ಇದರ ಜೊತೆಯಲ್ಲೆ ಬಿರುಸಿನ ಆಟಕ್ಕೆ ಮುಂದಾದ ಲಿವಿಂಗ್‌ ಸ್ಟೋನ್‌ 18 ಬಾಲ್‌ಗಳಲ್ಲಿ 30 ರನ್‌ಗಳಿಸಿ ಪೆವಿಲಿಯನ್‌ ಗೆ ಮರಳಿದರು.  ಇನ್ನೊಂದು ಕಡೆ ಆರಂಭಿಕರಾಗಿ ಕಣಕಿಳಿದಿದ್ದ ಪಿಲಿಪ್‌ ಸಾಲ್ಟ್ ಏಕಾಂಗಿ ಹೋರಾಟಕ್ಕೆ ಮುಂದಾಗಿದ್ದರೆ, ಅವರಿಗೆ ಸಾತ್‌ ನೀಡಲು ಹ್ಯಾರಿ ಬ್ರೂಕ್‌ ಅಂಕಣಕ್ಕೆ ಮರಳಿದರು. ಸಾಲ್ಟ್‌ ಶತಕ ಸಿಡಿಸಿ ಸಂಭ್ರಮಿಸಿದರೆ ಹ್ಯಾರಿ ಬ್ರೂಕ್‌ ತಂಡದ ಗೆಲುವಿಗೆ ಬಿರುಸಿನ ಆಟಕ್ಕೆ ಮುಂದಾದರು. 
          
19ನೇ ಒವೆರ್‌ ನಲ್ಲಿ ಇಂಗ್ಲೆಂಡ್‌ ತಂಡದ ಗೆಲುವಿಗೆ 21 ರನ್‌ಗಳು ಬೇಕಾಗಿದ್ದವು. ಅಂತಿಮ ಒವರ್‌ ನಲ್ಲಿ ಬ್ಯಾಟ್‌ ಮಾಡಿದ ಬ್ರೂಕ್‌ ಬೌಂಡರಿ, ಸಿಕ್ಸರ್‌ಗಳ ಮೂಲಕ ರನ್‌ ಕದಿಯಲು ಮುಂದಾದರು. ಕೊನೆಯ ಒವರ್‌ನಲ್ಲಿ 3 ಸಿಕ್ಸರ್‌ಗಳು ಸೇರಿದಂತೆ 1 ಬೌಂಡರಿಯನ್ನು ಭಾರಿಸಿದ ಹ್ಯಾರಿಸ್‌ ಬ್ರೂಕ್‌ ತಂಡದ ಗೆಲುವಿಗೆ ಕಾರಣರಾದರು. ಕೇವಲ 7 ಬಾಲ್‌ಗಳನ್ನು ಆಡಿ 31 ರನ್‌ಗಳಿಸಿದ್ದು,ಅದರಲ್ಲಿ ಒಂದು ಬೌಂಡರಿ ಮತ್ತು 4 ಸಿಕ್ಷರ್‌ಗಳು ಸೇರಿವೆ.


ಇದನ್ನು ಓದಿ:ಮಿಡಲ್ ಸ್ಟಂಪ್ ಕಿತ್ತು ನೆಲಕ್ಕೆ ಬಿದ್ದರೂ ನಾಟೌಟ್ ಎಂದ ಅಂಪೈರ್! ಬ್ಯಾಟ್ಸ್’ಮನ್ ಅದೃಷ್ಟವೋ.. ಬೌಲರ್ ದುರಾದೃಷ್ಟವೋ!!


ಆರಂಭಿಕರಾಗಿ ಕಣಕಿಳಿದಿದ್ದ ಪಿಲಿಪ್‌ ಸಾಲ್ಟ್‌ , ಎದುರಿಸಿದ 56 ಬಾಲ್‌ಗಳಲ್ಲಿ 4 ಬೌಂಡರಿ ಮತ್ತು 9 ಸಿಕ್ಸರ್‌ ನೆರವಿನಿಂದ 109 ರನ್‌ ಗಳಿಸಿ ಅಜಯರಾಗಿ ಉಳಿದರು.ತಂಡದ ಪರ ಶತಕ ಸಿಡಿಸಿ ಮಿಂಚಿದ ಸಾಲ್ಟ್ ಪಂದ್ಯ ಶೇಷ್ಟ ಪ್ರಶಸ್ತಿಗೆ ಭಾಜನರಾದರು. ಇಂಗ್ಲೆಂಡ್‌ ತಂಡವು 1-2 ಅಂತರಗಳಿಂದ ಸರಣಿಯಲ್ಲಿ ಇನ್ನೂ ಜೀವಂತವಾಗಿದೆ. 


ENG VS WI: ಮುಂದಿನ ಟಿ20 ಪಂದ್ಯಗಳು:
ನಾಲ್ಕನೇ ಟಿ20 ಪಂದ್ಯ- ಡಿಸೆಂಬರ್‌ 20, ಬ್ರೇನ್‌ ಲಾರ ಮೈದಾನ, ಟರೋಬ
ಐದನೇ  ಟಿ20 ಪಂದ್ಯ-‌ ಡಿಸೆಂಬರ್ 22, ಬ್ರೇನ್‌ ಲಾರ ಮೈದಾನ, ಟರೋಬ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.