ಮತ್ತೆ ಬರ್ತಿದ್ದಾರೆ ಜೂ. ಧೋನಿ… ವರ್ಷದ ಬಳಿಕ ತಂಡಕ್ಕೆ ಮರಳಿದ 26ರ ಹರೆಯದ ಈ ಆಟಗಾರನಿಗೆ ನಾಯಕತ್ವ!

Rishab Pant, IPL 2024: ಕ್ರಿಕ್‌ ಇನ್‌ಫೋ ವರದಿಯ ಪ್ರಕಾರ, ಫೆಬ್ರವರಿ 2024ರ ವೇಳೆಗೆ ಪಂತ್ ಮೈದಾನಕ್ಕೆ ಮರಳಲು ಸಂಪೂರ್ಣ ಫಿಟ್ ಆಗುತ್ತಾರೆ ಎಂದು ಡೆಲ್ಲಿ ಫ್ರಾಂಚೈಸಿ ಹೇಳಿದೆ.

Written by - Bhavishya Shetty | Last Updated : Dec 12, 2023, 07:06 PM IST
    • ವಿಕೆಟ್ ಕೀಪರ್ ಕಂ ಬ್ಯಾಟ್ಸ್‌ಮನ್ ರಿಷಬ್ ಪಂತ್ ಬಗ್ಗೆ ಅಪ್‌ಡೇಟ್
    • ಐಪಿಎಲ್’ನ ಮುಂದಿನ ಋತುವಿನಲ್ಲಿ ಪಂತ್ ಆಡಲಿದ್ದಾರೆ
    • ಸಂಪೂರ್ಣ ಫಿಟ್ ಆಗುತ್ತಾರೆ ಎಂದು ಡೆಲ್ಲಿ ಫ್ರಾಂಚೈಸಿ ಹೇಳಿದೆ
ಮತ್ತೆ ಬರ್ತಿದ್ದಾರೆ ಜೂ. ಧೋನಿ… ವರ್ಷದ ಬಳಿಕ ತಂಡಕ್ಕೆ ಮರಳಿದ 26ರ ಹರೆಯದ ಈ ಆಟಗಾರನಿಗೆ ನಾಯಕತ್ವ! title=
Rishabh Pant

Rishab Pant, IPL 2024: ಸುಮಾರು ಒಂದು ವರ್ಷದಿಂದ ಮೈದಾನದಿಂದ ದೂರ ಉಳಿದಿರುವ ವಿಕೆಟ್ ಕೀಪರ್ ಕಂ ಬ್ಯಾಟ್ಸ್‌ಮನ್ ರಿಷಬ್ ಪಂತ್ ಬಗ್ಗೆ ಅಪ್‌ಡೇಟ್ ಹೊರಬಿದ್ದಿದೆ. ಐಪಿಎಲ್’ನ ಮುಂದಿನ ಋತುವಿನಲ್ಲಿ ಪಂತ್ ಆಡಲಿದ್ದಾರೆ, ಜೊತೆಗೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕತ್ವವನ್ನೂ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಕ್ರಿಕೆಟ್’ನಲ್ಲಿ ಮಿಂಚಿದ್ದು ಮಾತ್ರವಲ್ಲ.. ಈ ಸೂಪರ್ ಹಿಟ್ ಸಿನಿಮಾದಲ್ಲೂ ನಟಿಸಿದ್ರು ಯುವರಾಜ್

26 ವರ್ಷದ ರಿಷಬ್ ಪಂತ್ ಮುಂದಿನ ಐಪಿಎಲ್ ಋತುವಿನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಕ್ರಿಕ್‌ ಇನ್‌ಫೋ ವರದಿಯ ಪ್ರಕಾರ, ಫೆಬ್ರವರಿ 2024ರ ವೇಳೆಗೆ ಪಂತ್ ಮೈದಾನಕ್ಕೆ ಮರಳಲು ಸಂಪೂರ್ಣ ಫಿಟ್ ಆಗುತ್ತಾರೆ ಎಂದು ಡೆಲ್ಲಿ ಫ್ರಾಂಚೈಸಿ ಹೇಳಿದೆ.

ಡಿಸೆಂಬರ್ 2022ರಲ್ಲಿ ಕಾರು ಅಪಘಾತಗೊಂಡು ಗಂಭೀರವಾಗಿ ಗಾಯಗೊಂಡಿದ್ದ ಪಂತ್, ಚಿಕಿತ್ಸೆ ಪಡೆದು ಮತ್ತೆ ಮೋಡಿ ಮಾಡಲು ಎಂಟ್ರಿ ಕೊಡುವ ಎಲ್ಲಾ ಸೂಚನೆಗಳಿವೆ.

ಆದರೆ ಪಂತ್, ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಗಿ ತಮ್ಮ ಎಂದಿನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆಯೇ ಅಥವಾ ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್ ಆಗಿ ಮರಳುತ್ತಾರೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ.

ಇದನ್ನೂ ಓದಿ: ಮದುವೆ ಆಗುವಂತೆ ಹಠ ಮಾಡಿದ ನಟಿ: ದಿಕ್ಕುತೋಚದೆ 46ನೇ ವಯಸ್ಸಲ್ಲಿ ತಾಳಿ ಕಟ್ಟಿದ ಹಾಸ್ಯನಟ!

ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿರುವ ಮುಂದಿನ ಋತುವಿನ ಹರಾಜಿಗೆ (ಐಪಿಎಲ್ 2024 ಹರಾಜು) ಮೊದಲು ಆಟಗಾರರನ್ನು ಉಳಿಸಿಕೊಳ್ಳುವ ಮತ್ತು ಬಿಡುಗಡೆ ಮಾಡುವ ಚರ್ಚೆಯಲ್ಲಿ ಪಂತ್ ಕೂಡ ಭಾಗವಹಿಸಿದ್ದರು ಎಂದು ಹೇಳಲಾಗುತ್ತಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News